fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಟೆಸ್ಟ್ ಆಟಗಾರ,

ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಟೆಸ್ಟ್ ನಲ್ಲಿ ಆಡುವ ಆಲ್ ರೌಂಡ್ ಆಟಗಾರ ಹನುಮ ವಿಹಾರಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಂಧ್ರ ಮೂಲದ ವಿಹಾರಿ ವಿವಾಹ ನೆನ್ನೆ ಶಾಸ್ತ್ರೋಕ್ತವಾಗಿ ನೆರವೇರಿದೆ.. ಬಹುದಿನಗಳಿಂದ ಪ್ರೀತಿ ರಾಜ್ ಎಂಬ ಹುಡುಗಿಯ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಹನುಮ ವಿಹಾರಿ ಆಸೆ ಪಟ್ಟ ಹುಡುಗಿ ಜೊತೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತೆಲಂಗಾಣದ ಹನುಮಕೊಂಡದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ, ಫ್ಯಾಷನ್​ ಡಿಸೈನರ್​ ಪ್ರೀತಿರಾಜ್​ ಜೊತೆ ವಿಹಾರಿ ಸಪ್ತಪದಿ ತುಳಿದರು.. ಕ್ರೀಡಾ,ರಾಜಕೀಯ, ಸಿನಿಮಾ ಕ್ಷೇತ್ರದ ಗಣ್ಯರು ಮದುವೆಗೆ ಆಗಮಿಸಿ ವಿಹಾರಿ ದಂಪತಿಗೆ ಶುಭಕೋರಿದರು.

ಕಾರ್ಯಕ್ರಮವೊಂದರಲ್ಲಿ ವಿಹಾರಿ ಹಾಗು ಪ್ರೀತಿರಾಜ್​ ಮೊದಲ ಬಾರಿ ಭೇಟಿಯಾಗಿದ್ದಾರಂತೆ. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿ ನಂತರ ಎರಡು ಕುಟುಂಬಗಳ ಹಿರಿಯರ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡಿದ್ದಾರೆ..

ಅಂದಹಾಗೆ ಕಳೆದ ವರ್ಷ ನಡೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ವಿಹಾರಿ ಪಾದಾರ್ಪಣೆ ಮಾಡಿದ್ದರು. ಮೊದಲ ಟೆಸ್ಟ್​ನಲ್ಲೇ ಅರ್ಧಶತಕ ಬಾರಿಸಿ ಮಿಂಚಿದ್ದ ವಿಹಾರಿ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ವಿಹಾರಿ ಆಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top