fbpx
ಸಮಾಚಾರ

ಎಕ್ಸಿಟ್ ಪೋಲ್ ವಿಚಾರವಾಗಿ ಐಶ್ವರ್ಯ ರೈ ಬಗ್ಗೆ ಕೀಳು ಮಟ್ಟದ ಪೋಸ್ಟ್ ಮಾಡಿದ ವಿವೇಕ್ ಒಬೆರಾಯ್- ನೆಟ್ಟಿಗರಿಂದ ಮಂಗಳಾರತಿ!

ನಟನೆಯೊಂದನ್ನು ಬಿಟ್ಟು ಬೇರೆ ಎಲ್ಲಾ ರೀತಿಯಲ್ಲೂ ಸುದ್ದಿಯಾಗುವ ನಟ ವಿವೇಕ್ ಒಬೆರಾಯ್ ಇದೀಗ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳುವುದರ ಮೂಲಕ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದಾರೆ. ದೇಶದೆಲ್ಲೆಡೆ ಮತದಾನೋತ್ತರ ಸಮೀಕ್ಷೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಇದೇ ವಿಚಾರವಾಗಿ ಕೀಳುಮಟ್ಟದ ಟ್ವೀಟ್ ಮಾಡಿದ ನಟ ವಿವೇಕ್ ಒಬೆರಾಯ್ ಗೆ ಟ್ವಿಟರಿಗರು ಮಂಗಳಾರತಿ ಮಾಡಿದ್ದಾರೆ.

ಎಕ್ಸಿಟ್ ಪೋಲ್ ಬಂದ ನಂತರ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಮೀಮ್ಸ್ ಗಳು ಸಹ ಹರಿದಾಡುತ್ತಿವೆ. ಈ ಟ್ರೋಲ್ ಗಳ ಮೂಲಕವೇ ರಾಜಕೀಯ ನಾಯಕರು ಒಬ್ಬರನ್ನೊಬ್ಬರ ಕಾಲೆಳೆಯುತ್ತಿದ್ದಾರೆ. ಈ ನಡುವೆ ಎಕ್ಸಿಟ್ ಪೋಲ್ ಟ್ರೋಲ್ ವೊಂದನ್ನು ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟ ವಿವೇಕ್ ಒಬೇರಾಯ್ ತಮ್ಮ ಮಾಜಿ ಗೆಳತಿ ಐಶ್ವರ್ಯಾ ರೈರ ವಯಕ್ತಿಕ ಜೀವನದ ಬಗ್ಗೆ ಕೀಳ ಮಟ್ಟದ ಪೋಸ್ಟ್ ಮಾಡಿದ್ದಾರೆ.

 

 

ವಿವೇಕ್ ಒಬೆರಾಯ್ ಅವರು ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಆ ಫೋಟೋದಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ. ಇದನ್ನು ಶೇರ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಟ್ವೀಟರಿಗರು ವಿವೇಕ್ ಒಬೆರಾಯ್ ನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಐಶ್ವರ್ಯಾ ರೈ ಹೆಸರು ಹಲವು ನಟರೊಂದಿಗೆ ತಳಕು ಹಾಕಿಕೊಂಡಿತ್ತು. ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದ ಐಶ್ವರ್ಯಾ ರೈ ಹೆಸರು ಮೊದಲಿಗೆ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಕೇಳಿ ಬಂದಿತ್ತು. ತದನಂತರ ವಿವೇಕ್ ಒಬೇರಾಯ್ ಜೊತೆಗೆ ಕೇಳಿ ಬಂದಿತ್ತು. ಎಲ್ಲ ಗಾಸಿಪ್ ಗಳ ನಡುವೆ ಅಭಿಷೇಕ್ ಬಚ್ಚನ್ ರನ್ನು ವರಿಸುವ ಮೂಲಕ ಎಲ್ಲ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದರು.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top