fbpx
ಸಮಾಚಾರ

ಹಿಂದೂ ಮಹಾಸಭಾ ವತಿಯಿಂದ ಗೋಡ್ಸೆ ಜನ್ಮದಿನ ಆಚರಣೆ- ಎಂಟು ಮಂದಿ ಬಂಧನ.

ಮಹಾತ್ಮ ಗಾಂಧಿ ಅವರ ಹಂತಕ ನಾಥೂರಾಂ ಗೋಡ್ಸೆಯ ಜನ್ಮ ವರ್ಷಾಚರಣೆ ಆಚರಿಸುತ್ತಿದ್ದ ಎಂಟು ಮಂದಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಈ ಎಂಟು ಜನ ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರಾಗಿದ್ದು, ಗೋಡ್ಸೆ 109ನೇ ಜನ್ಮದಿನ ನಿಮಿತ್ತ ಭಾನುವಾರ ಸಂಜೆ ಸಾರ್ವಜನಿಕರಿಗೆ ಸಿಹಿ ಹಂಚಿದ್ದರು. ಅಲ್ಲದೆ, ದೇಗುಲವೊಂದರಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಗೋಡ್ಸೆ ಭಾವಚಿತ್ರದ ಸುತ್ತ ದೀಪ ಬೆಳಗಿಸಿ ಗೌರವ ಸಲ್ಲಿಸಿದ್ದರು.

ಬಂಧಿತರನ್ನು ಹಿರೇನ್‌ ಮಶ್ರು, ವಾಲಾ ಭಾರ್ವದ್‌, ವಿರಳ್‌ ಮಾಲ್ವಿ, ಹಿತೇಶ್‌ ಸೊನಾರಾ, ಮನೀಶ್‌ ಕಲಾ ಮತ್ತು ಯೋಗೇಶ್‌ ಪಟೇಲ್‌ ಎಂದು ಗುರುತಿಸಲಾಗಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ. ಉಳಿದವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಸೂರತ್‌ ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 153 153A 153B ಅಡಿಯಲ್ಲಿ ಬಂಧಿಸಲಾಗಿದೆ.

“ರಾಜ್ಯ ಸರಕಾರದ ಸೂಚನೆಯಂತೆ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಘಟನೆ ಸಂಬಂಧ 8 ಜನರನ್ನು ಬಂಧಿಸಿದ್ದೇವೆ. ಮಹಾತ್ನ ಗಾಂಧಿ ಹಂತಕರನ್ನು ಗೌರವಿಸುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವವರು ಯಾರೇ ಆದರೂ ಸಹ ಕಟ್ಟುನಿಟ್ಟಾದ ಕ್ರಮ ಜರಗಿಸುತ್ತೇವೆ.. . ಗಾಂಧೀಜಿ ಅವರನ್ನು ಹತ್ಯೆಗೈದ ಗೋಡ್ಸೆಯನ್ನು ನೆನಪಿಸುವ ಇವರ ವರ್ತನೆ ನಾಗರಿಕರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಇದು ಜನರನ್ನು ಉತ್ತೇಜಿಸುವ ಹಾಗೂ ಶಾಂತಿಯುತ ವಾತಾವರಣವನ್ನು ಕದಡುವ ಪ್ರಯತ್ನ ” ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top