fbpx
ಸಮಾಚಾರ

ಶಾಲೆಯಲ್ಲಿ ಟೀಚರ್ ಇಲ್ಲ ಎಂದು ತನ್ನ ಪತ್ನಿಯನ್ನೇ ಪಾಠ ಮಾಡಲು ಕಳುಹಿಸಿದ ಐಎಎಸ್ ಆಫೀಸರ್.

ಸೇವೆ ಮಾಡಬೇಕೆಂಬ ಆಸೆ ಮನಸ್ಸಿನಲ್ಲಿದ್ದರೆ ಸಾಕು. ಯಾರೇ ಆಗಲಿ ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಬಡವರಿಗೆ ಸೇವೆ ಮಾಡಬಹುದು.ಇದಕ್ಕೆ ಉತ್ತಮ ಉದಾಹರಣೆಯೆಂದರೆ ಈ ಐಎಎಸ್ ಅಧಿಕಾರಿಯ ಪತ್ನಿ. ಗಂಡ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೆ ಆಕೆ ಅದೇ ಜಿಲ್ಲೆಯ ಸರ್ಕಾರಿ ಕಾಲೇಜಿನಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದಾರೆ.

ಅವರ ಹೆಸರು ಮಂಗೇಷ್ ಘಿಲ್ದಯಾಲ್. 2011 ಐಎಎಸ್ ಬ್ಯಾಚ್‌ ಅನ್ನು ಸೇರಿ ಸಿವಿಲ್ ಸರ್ವಿಸಸ್ ಪ್ರವೇಶ ಪರೀಕ್ಷೆಯಲ್ಲಿ ಇಡೀ ಭಾರತಕ್ಕೆ 4ನೇ ರ‍್ಯಾಂಕ್ ಗಳಿಸಿದ್ದರು. ನಂತರ ಐಎಎಸ್ ಆಗಿ ಕಲೆಕ್ಟರ್ ಆಗಿ ಅವರು ಮೊದಲ ಬಾರಿ ಉತ್ತರಾಖಂಡದ ಬಾಗೇಶ್ವರ ಎಂಬ ಜಿಲ್ಲೆಗೆ ಹೋಗಿ ಜವಾಬ್ದಾರಿ ವಹಿಸಿಕೊಂಡರು. ಅವರಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಬಯಕೆ ತುಂಬಾ ಇತ್ತು.

 

 

ಅವರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಉಷಾ ಎಂಬ ಯುವತಿಯನ್ನು ಮದುವೆ ಮಾಡಿಕೊಂಡರು.ಉಷಾ ರವರು ತಮ್ಮ ಗಂಡ ಮಂಗೇಷ್‌ ಜೊತೆ ಸಮಾಜ ಸೇವೆ ಮಾಡುತ್ತಿದ್ದರು. ಮಂಗೇಶ್ ಜಿಲ್ಲಾಧಿಕಾರಿಯಾಗಿ ಜನರ ಕಷ್ಟಸುಖಗಳನ್ನು ತಿಳಿಯಲು ಹೊರಟರೆ ಅವರ ಜತೆಗೆ ಹೋಗಿ ಅವರ ಕಷ್ಟಸುಖ ತಿಳಿದುಕೊಳ್ಳುತ್ತಿದ್ದರು. ನಂತರ ಅವರಿಗೆ ಅಲ್ಲಿಂದ ರುದ್ರಪ್ರಯಾಗ್ ಎಂಬ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆಯಿತು. ಮಂಗೇಶ್ ಗೆ ವರ್ಗಾವಣೆ ಆದೇಶ ಬಂದಿದ್ದಾಗ ಜನ ಆ ಆದೇಶದ ವಿರುದ್ಧವೇ ಪ್ರತಿಭಟನೆ ನಡೆಸಿದ್ದರು. ಇದು ಅವರ ಕೆಲಸದ ಶ್ರದ್ಧೆಗೆ ಹಿಡಿದ ಕೈಗನ್ನಡಿ.

ರುದ್ರಪ್ರತಾಪ್ ನಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಒಮ್ಮೆ ರಾಜ್ ಕಿಯಾ ಮಹಿಳಾ ಕಾಲೇಜಿಗೆ ಭೇಟಿ ನೀಡಿದ್ದರು.ಆಗ ವಿಜ್ಞಾನ ವಿಷಯದ ಪಾಠ ಮಾಡಲು ಅಧ್ಯಾಪಕರು ಇಲ್ಲ ಎಂಬ ಸಂಗತಿಯನ್ನು ತಿಳಿದುಕೊಂಡರು.ಆದರೆ ವಿಜ್ಞಾನ ವಿಷಯಕ್ಕೆ ಶಿಕ್ಷಕರ ಕೊರತೆ ರಾಜ್ಯದಲ್ಲೆಲ್ಲಾ ಇದ್ದುದ್ದರಿಂದ ವಿಜ್ಞಾನ ಟೀಚರ್ ಒಬ್ಬರನ್ನು ನೇಮಿಸಿಕೊಳ್ಳುವುದು ಸ್ವಲ್ಪ ದಿನ ತೆಗೆದುಕೊಳ್ಳುತ್ತದೆ ಎಂಬ ವಿಷಯ ತಿಳಿದುಕೊಳ್ಳುತ್ತಾರೆ.

 

 

ನಂತರ ಮಂಗೇಶ್ ತನ್ನ ಹೆಂಡತಿ ಉಷಾರನ್ನು ಆ ಕಾಲೇಜಿನಲ್ಲಿ ಮಕ್ಕಳಿಗೆ ಪಾಠ ಮಾಡಲು ಕೇಳಿಕೊಂಡರು. ಇದಕ್ಕೆ ಆಕೆ ಕೂಡ ಒಪ್ಪಿಕೊಂಡರು. ಉಷಾ ಈಗ ದಿನವೊಂದಕ್ಕೆ ಎರಡೂವರೆ ಘಂಟೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪಾಠ ಮಾಡುತ್ತಿದ್ದಾರೆ.ಈ ಮೂಲಕ ಸಾಮಾಜಿಕ ಕೆಲಸಗಳಲ್ಲಿ ಗಂಡನ ಜೊತೆ ತನ್ನ ಕೈ ಕೂಡ ಜೋಡಿಸಿದ್ದಾರೆ.ಸ್ವತಃ ಪಿಎಚ್‌ಡಿ ಮಾಡಿರುವ ಉಷಾಗೆ ಆ ಕಾಲೇಜಿನಲ್ಲಿ ಪಾಠ ಮಾಡುವುದು ಕಷ್ಟಕರವಾಗೇನು ಇಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top