fbpx
ಸಮಾಚಾರ

“ಕೊಹ್ಲಿ ಜೊತೆ ಮಾತನಾಡಲು ಭಯವಾಗುತ್ತೆ” ಎಬಿ ಡಿವಿಲಿಯರ್ಸ್ ಹೀಗೆ ಹೇಳಿದ್ದು ಯಾಕೆ?

RCB ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಇಬ್ಬರು ಬೆಸ್ಟ್ ಫ್ರೆಂಡ್ಸ್ ಎಂಬುದು ಎಲ್ಲರಿಗೂ ಗೂಟಿರುವ ವಿಚಾರ. ಇವರಿಬ್ಬರ ಜೊತೆಯಾಟ ಮೈದಾನದಲ್ಲಿ ಹಲವು ದಾಖಲೆಗಳನ್ನು ಬರೆದಿದೆ.. ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದಾಚೆಗೆ ಕೂಡ ಕೊಹ್ಲಿ ಮತ್ತು ವಿಲಿಯರ್ಸ್ ಅತ್ಯತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇದೀಗ ಕೊಹ್ಲಿ ಕುರಿತು ಎಬಿ ಡಿವಿಲಿಯರ್ಸ್ ಮನಬಿಚ್ಚಿ ಮಾತನಾಡಿದ್ದಾರೆ.

ಖಾಸಗಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ ಎಬಿಡಿ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. “ಕೊಹ್ಲಿ ಎಂದು ಏನನ್ನೂ ಹೇಳಲು ಭಯವಾಗುತ್ತೆ. ಯಾಕಂದ್ರೆ, ಕೊಹ್ಲಿ ಬಳಿ ವಾಚ್ ಚೆನ್ನಾಗಿದೆ ಎಂದರೆ ಸಾಕು, ಮರುಕ್ಷಣವೇ ಅದೇ ರೀತಿ ವಾಚ್ ಗಿಫ್ಟ್ ನೀಡುತ್ತಾರೆ. ಇನ್ನು ಫೋನ್ ಸ್ವಿಚ್ ಆಫ್ ಆಗಿದೆ ಅಂದರೆ, ತಕ್ಷಣವೇ ಪವರ್ ಬ್ಯಾಂಕ್ ಗಿಫ್ಟ್ ಕೊಡುತ್ತಾರೆ. ಕೊಹ್ಲಿ ಡ್ರೆಸ್ ಚೆನ್ನಾಗಿದೆ ಎಂದರೆ ಅದೇ ಬ್ರ್ಯಾಂಡ್, ಅದೇ ಕಲರ್ ಡ್ರೆಸ್ ತರಿಸಿ ಉಡುಗೊರೆಯಾಗಿ ನೀಡುತ್ತಾರೆ. ಈ ಕಾರಣಕ್ಕೆ ಕೊಹ್ಲಿ ಮುಂದೆ ಮಾತನಾಡಲು ಭಯವಾಗುತ್ತೆ” ಎಂದು ಎಬಿಡಿ ಹೇಳಿದ್ದಾರೆ.

ನಾನು ಹಲವು ಭಾರಿ ಕೊಹ್ಲಿ ಮನಗೆ ಭೇಟಿ ನೀಡಿದ್ದೇನೆ. ಕೊಹ್ಲಿ ಮನೆಯಲ್ಲಿ ಚಿಕ್ಕ ಮಕ್ಕಳು ಕೂಡ ಕೊಹ್ಲಿ ಹಾಗೂ ಅನುಷ್ಕಾ ಜೊತೆ ಆಟವಾಡುತ್ತಾರೆ. ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ತಂಡದ ಸಹ ಆಟಗಾರರ ಜೊತೆ ಆತ್ಮೀಯವಾಗಿರುತ್ತಾರೆ. ತುಂಬಾ ಆತ್ಮೀಯತೆ, ಅತ್ಯಂತ ಗೌರವದಿಂದ ಕಾಣುವ ವ್ಯಕ್ತಿತ್ವ ಕೊಹ್ಲಿ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

 


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top