fbpx
ಸಮಾಚಾರ

ಸಾಹಸಸಿಂಹನನ್ನ ಜಗ್ಗೇಶ್​ ಏನಂಥಾ ಕರೆಯುತ್ತಿದ್ದರಂತೆ ಗೊತ್ತಾ?

ಕನ್ನಡದ ಮಟ್ಟಿಗೆ ಟ್ವಿಟರ್’ನಲ್ಲಿ ಅತಿಹೆಚ್ಚು ಸಕ್ರಿಯವಾಗಿರೋ ನಟ ಎಂಬ ಕೀರ್ತಿ ನಿಸ್ಸಂದೇಹವಾಗಿ ಜಗ್ಗೇಶ್ ಅವರಿಗೆ ಸಲ್ಲುತ್ತದೆ. ಆಗಾಗ ಜಗ್ಗೇಶ್ ಮನದ ಮಾತುಗಳನ್ನು ಟ್ವಿಟರ್ ನಲ್ಲೆ ದಾಖಲಿಸುತ್ತಿರುತ್ತಾರೆ..

ವಯಕ್ತಿಕ, ಸಿನಿಮಾ ವಿಚಾರಗಳ ಜೊತೆಗೆ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್ ಮೂಲಕವೇ ಪ್ರತಿಕ್ರಿಯಿಸುತ್ತಾ ಸದಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವವರು ನವರಸ ನಾಯಕ ಜಗ್ಗೇಶ್.. ಇದೀಗ ಜಗ್ಗೇಶ್ ತಮ್ಮ ಟ್ವಿಟರ್ ನಲ್ಲಿ ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದು ಕಿರುತೆರೆಯಲ್ಲಿ ಗಂಡಾದ ಗುಡಿ ಸಿನಿಮಾವನ್ನು ನೋಡಿ ಭಾವುಕರಾಗಿದ್ದಾರೆ.

 

 

ಆಕಸ್ಮಿಕವಾಗಿ ಜಗ್ಗೇಶ್​ ಅವರು ದೂರದರ್ಶನ ನೋಡುವಾಗ ಅವರಿಗೆ ರಾಜ್​ ಹಾಗೂ ವಿಷ್ಣು ಅಭಿನಯದ ‘ಗಂಧದಗುಡಿ’ ಚಿತ್ರದ ಕ್ಲೈಮ್ಯಾಕ್ಸ್​ ಕಣ್ಣಿಗೆ ಬಿತ್ತಂತೆ. ಅದರ ಲಿಂಕ್​ ಜತೆಗೆ ಅದರಲ್ಲಿ ಅಭಿನಯಿಸಿರುವ ನಟರ ಬಗ್ಗೆ ಬರೆದುಕೊಂಡಿದ್ದಾರೆ. ಇದೆ ವೇಳೆ ಜಗ್ಗೇಶ್​ ಅವರ ಈ ಟ್ವೀಟ್​ಗೆ ಅಭಿಮಾನಿಯೊಬ್ಬರು “ವಿಷ್ಣುವರ್ಧನ್​ ಅವರ ಬಗ್ಗೆ ಪ್ರಶ್ನೆ ಕೇಳಿದ್ದು, ನೀವು ಕಂಡಂತೆ ಒಂದೇ ಒಂದು ಪದದಲ್ಲಿ ವಿಷ್ಣು ಹೇಗಿದ್ದರು? ನೀವು ಅವರನ್ನು ಏನೆಂದು ಕರೆಯುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದಾರೆ.

ವಿಷ್ಣುವನ್ನು ಸಾರ್ ಅಂತಿದ್ರು ಜಗ್ಗೇಶ್:
ಅಭಿಮಾನಿಯೇ ಪ್ರಶ್ನೆಗೆ ಉತ್ತರಿಸಿದ ಜಗ್ಗೇಶ್ ‘ನಾನು ಅವರನ್ನು ಸರ್…​ ಎಂದು ಕರೆಯುತ್ತಿದೆ. ಸಾಕಷ್ಟು ಸಲ ಏಕಾಂತದಲ್ಲಿ ಮಾತನಾಡಿದ್ದೇವೆ. ಅದರಲ್ಲಿ ತುಂಬ ನೆನಪಿಡುವ ದಿನ ಅವರು ಚಿಕ್ಕಮಗಳೂರಿನಲ್ಲಿ ದ್ವಾರಕೀಶ್​ ಅವರ ಚಿತ್ರದಲ್ಲಿ ಅಭಿನಯಿಸುತ್ತಿದ್ದರು. ನಾನು ಆಗ ‘ಬೇವುಬೆಲ್ಲ’ ಸಿನಿಮಾದಲ್ಲಿ ನಟಿಸುತ್ತಿದ್ದೆ. ಇದಬ್ಬರೂ ಒಂದೇ ಲಾಡ್ಜ್​ನಲ್ಲಿ ತಂಗಿದ್ದು, ಅಂದು ಮನಸೋಇಚ್ಛೆ ಗಂಟೆಗಟ್ಟಲೆ ಮಾತನಾಡಿದ್ದೆವು’ ಎಂದು ವಿಷ್ಣು ಜೊತೆಗಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top