fbpx
ಸಮಾಚಾರ

ವಿವೇಕ್ ಒಬೇರಾಯ್ ವಿವಾದಾತ್ಮಕ ಟ್ವೀಟ್‍ ಬಗ್ಗೆ ಸಲ್ಮಾನ್ ಕೊಟ್ಟ ಮೊದಲ ಪ್ರತಿಕ್ರಿಯೆ- ಹೇಳಿದ್ದೇನು?

ಐಶ್ವರ್ಯ ರೈ ಕುರಿತು ವಿವೇಕ್ ಒಬೇರಾಯ್ ಮಾಡಿದ್ದ ವಿವಾದಾತ್ಮಕ ಟ್ವೀಟ್‍ಗೆ ನಟ ಸಲ್ಮಾನ್ ಖಾನ್ ತಮ್ಮ ಮೊದಲ ಪ್ರತಿಕ್ರಿಯೆಯನ್ನ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಅವರಿಗೆ ವಿವಾದಾತ್ಮಕ ಟ್ವೀಟ್ ಕುರಿತಾಗಿ ಮಾಧ್ಯಮಗಳು ಪ್ರಶ್ನೆ ಮಾಡಿದ್ದವು. ಇದಕ್ಕೆ ಉತ್ತರಿಸಿದ ಸಲ್ಲು “ನನಗೆ ಬಹಳ ಕೆಲಸಗಳಿವೆ. ನಾನು ಕೆಲಸ ಮಾಡಲೇ, ಮೀಮ್ಸ್ ಗಳನ್ನು ನೋಡುತ್ತಾ ಕುಳಿತುಕೊಳ್ಳಲೇ” ಎಂದು ತಮ್ಮ ಶೈಲಿಯಲ್ಲಿಯೇ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣಗಳತ್ತ ನಾನು ಹೆಚ್ಚು ಗಮನ ಕೊಡಲ್ಲ. ಮೊದಲಿನಂತೆ ಸೋಶಿಯಲ್ ಮೀಡಿಯಾದಲ್ಲಿಯೂ ಹೆಚ್ಚು ಆ್ಯಕ್ಟೀವ್ ಆಗಿರಲ್ಲ. ಕಾಲಹರಣಕ್ಕಾಗಿ ಅನಾವಶ್ಯಕ ಟ್ವೀಟ್‍ಗಳನ್ನು ಮಾಡಲ್ಲ. ನನಗೆ ನನ್ನದೇ ಆದ ಕೆಲಸಗಳಿವೆ. ಕೆಲಸದತ್ತ ಗಮನ ನೀಡದೇ ಯಾರೋ ಮಾಡಿದ ಟ್ವೀಟ್ ಮತ್ತು ಮೀಮ್ಸ್ ನೋಡುತ್ತಾ ಸಮಯ ವ್ಯರ್ಥ ಮಾಡಲ್ಲ ಎಂದು ಖಡಕ್ ಮಾತನ್ನು ಆಡಿದ್ದಾರೆ.

ವಿವೇಕ್ ಡಿಲೀಟ್ ಮಾಡಿದ್ದ ಟ್ವೀಟ್ ನಲ್ಲೇನಿತ್ತು?
ನಟ ವಿವೇಕ್ ಒಬೆರಾಯ್ ಅವರು ಫೋಟೋವೊಂದನ್ನು ಟ್ವೀಟ್ ಮಾಡಿದ್ದರು. ಆ ಫೋಟೋದಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ. ಇದನ್ನು ಶೇರ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಟ್ವೀಟರಿಗರು ವಿವೇಕ್ ಒಬೆರಾಯ್ ನನ್ನ ತರಾಟೆಗೆ ತೆಗೆದುಕೊಂಡಿದ್ದರು.,

ಐಶ್ವರ್ಯಾ ರೈ ಕುರಿತಂತೆ ನಟ ವಿವೇಕ್ ಒಬೆರಾಯ್ ಮಾಡಿದ ಟ್ವೀಟ್ ಸಾಕಷ್ಟು ವಿವಾದಕ್ಕೆ ಗುರಿಯಾದ ಕಾರಣ ಈಗ ಅದನ್ನು ಡಿಲೀಟ್ ಮಾಡಿದ್ದಾರೆ. “ಮೀಮ್ಸ್ ಗೆ ನಾನು ಮಾಡಿದ್ದ ಹೇಳಿಕೆಯಿಂದ ಒಬ್ಬೇಒಬ್ಬ ಮಹಿಳೆಗೆ ನೋವಾದರೂ, ಅದಕ್ಕೆ ಕ್ರಮ ತೆಗೆದುಕೊಳ್ಳಲೇಬೇಕು. ದಯವಿಟ್ಟು ಕ್ಷಮಿಸಿ. ನಾನು ಹಿಂದಿನ ಟ್ವಿಟ್ ಅನ್ನು ಡಿಲೀಟ್ ಮಾಡಿದ್ದೇನೆ” ಎಂದು ಚಿತ್ರನಟ ವಿವೇಕ್ ಅಲಿಯಾಸ್ ವಿವೇಕಾನಂದ್ ಓಬೇರಾಯ್ ಅಸಭ್ಯ ಟ್ವೀಟ್ ಗೆ ಕ್ಷಮೆ ಯಾಚಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top