fbpx
ಸಮಾಚಾರ

“ತಂಡದಲ್ಲಿ ನನ್ನನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಭಾವನೆ ಬಂತು ಹಾಗಾಗಿ ನಿವೃತ್ತಿ ಘೋಷಿಸಿದೆ.”- ದಿಢೀರ್ ನಿವೃತ್ತಿ ಬಗ್ಗೆ ಎಬಿಡಿ ಸ್ಫೋಟಕ ಹೇಳಿಕೆ.

ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಆಟಗಾರ ಎಬಿ ಡಿ ವಿಲಿಯರ್ ಕಳೆದ ವರ್ಷ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರೂ, ಐಪಿಎಲ್ ಸೇರಿದಂತೆ ವಿವಿಧ ಟಿ20 ಲೀಗ್‌ಗಳಲ್ಲಿ ಎಬಿಡಿ ಭರ್ಜರಿಯಾಗಿಯೇ ಆಡುತ್ತಿದ್ದಾರೆ. ನಿವೃತ್ತಿಯ ನಂತರವೂ ಅದ್ಭುತ ಫಾರ್ಮ್ ಹೊಂದಿರುವ ಎಬಿ ಉತ್ತಮ ಫಾರ್ಮ್​ನಲ್ಲಿದ್ದರೂ ಈ ಆಟಗಾರ ಯಾಕೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿಲ್ಲ ಎಂಬ ಪ್ರಶ್ನೆ ಪದೇ ಪದೇ ಎಲ್ಲರನ್ನು ಕಾಡುತ್ತಲೇ ಇರುತ್ತದೆ. .

ವೃತ್ತಿ ಜೀವನದಲ್ಲಿ ಉತ್ತಂಗದಲ್ಲಿ ಇರುವಾಗಲೇ ಆಪ್ರಿಕಾದ ಈ ಸ್ಟಾರ್ ಬ್ಯಾಟ್ಸ್ ಮನ್ ಇದ್ದಕ್ಕಿದ್ದಂತೆ ಅಂತಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದರು. ಆ ವೇಳೆ ಎಲ್ಲರೂ ಅಚ್ಚರಿಪಟ್ಟಿದ್ದರು. ಆಗ ಎಬಿಡಿ ತಮ್ಮ ನಿವೃತ್ತಿಗೆ ಏನೇನೋ ನೆಪ ಹೇಳಿರಬಹುದು. ಆದರೆ ಈಗ ನಿಜ ಕಾರಣ ಬಯಲು ಮಾಡಿದ್ದಾರೆ. ‘ನಾನು 2019ರ ವಿಶ್ವಕಪ್‌ ಆಡಲು ಬಯಸಿದ್ದೆ. ಆದರೆ ತಂಡದಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಭಾವನೆ ಬಂತು. ಆದ್ದರಿಂದ ನಿವೃತ್ತಿ ಘೋಷಿಸಿದೆ.ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

“ನಾನು ಕಳೆದ ವರ್ಷ, ಅದರ ಹಿಂದಿನ ವರ್ಷ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಆಡುವ ನಿರ್ಧಾರ ಮಾಡಿದ್ದೆ, ಆ ಪ್ರಕಾರ ಆಡಲು ಶುರು ಮಾಡಿದೆ. ಇದಕ್ಕೆ ಭಾರೀ ಟೀಕೆ ಕೇಳಿಬಂತು. ಇದರಿಂದ ನೊಂದ ನಾನು ಈ ನಿರ್ಧಾರ ಮಾಡಬೇಕಾಯಿತು.ತಂಡದಲ್ಲಿ ನನ್ನದು ಬರುವ ಹೋಗುವ ಪಾತ್ರವಾಗಿತ್ತು. ನಾನು ಮೂಲೆಗುಂಪಾದೆ ಎನಿಸಲು ತೊಡಗಿತ್ತು. ಹೀಗಾಗಿ ಏನೂ ಬೇಡವೆಂದು ನಿವೃತ್ತಿ ಹೇಳುವ ನಿರ್ಧಾರ ಮಾಡಿದೆ’ ಎಂದು ಎಬಿಡಿ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top