fbpx
ಸಮಾಚಾರ

“ಕುಮಾರಸ್ವಾಮಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದೆ ನಿಖಿಲ್ ಸೋಲಿಗೆ ಕಾರಣ”​ ಚಲುವರಾಯಸ್ವಾಮಿ.

ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ತೀವ್ರ ಹಿನ್ನಡೆಯುಂಟಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವಿನ ನಗೆ ಬೀರಿದ್ದಾರೆ. ಮುಖ್ಯಮಂತ್ರಿ ಪುತ್ರನೇ ಅಭ್ಯರ್ಥಿಯಾದ ನಂತರ ಇಡೀ ಸರಕಾರವೇ ಮಂಡ್ಯದಲ್ಲಿ ಪ್ರಚಾರಕ್ಕೆ ನಿಂತಿತು. ಖುದ್ದು ಎಚ್‌ಡಿ ಕುಮಾರಸ್ವಾಮಿ ಇಡೀ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಪ್ರಚಾರ ನಡೆಸಿದರು. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತ ಸುಮಲತಾ ಅಂಬರೀಷ್‌ ಸುಮಾರು 90 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಿ ನಿಖಿಲ್ ಗೆ ಸೋಲುಣಿಸಿದ್ದಾರೆ.

ಇದೀಗ ಮಾಜಿ ಸಚಿವ ಚಲುವರಾಯಸ್ವಾಮಿ “ಕುಮಾರಸ್ವಾಮಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದೆ ನಿಖಿಲ್ ಸೋಲಿಗೆ ಕಾರಣ” ಎಂಬ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ನಿಖಿಲ್​ ಸೋಲಿಗೆ ಸಿದ್ದರಾಮಯ್ಯ ಹಾಗೂ ದಿನೇಶ್​ ಗುಂಡೂರಾವ್​ ಕಾರಣವಲ್ಲ. ಬದಲಾಗಿ ಸಿಎಂ ಕುಮಾರಸ್ವಾಮಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ನಿಖಿಲ್​ ಸುಮಲತಾ ವಿರುದ್ಧ ಸೋಲುವಂತೆ ಆಯಿತು. ನಮ್ಮನ್ನು ಸೌಜನ್ಯಕ್ಕಾದರೂ ಕರೆದು ಟೀ ಕೊಟ್ಟು ಬೆಂಬಲ ಕೇಳಿಲ್ಲ. ಅವರೇ ನೇರವಾಗಿ ಚುನಾವಣೆ ಮಾಡಿದ್ದರು” ಎಂದು ಚೆಲುವರಾಯ ಸ್ವಾಮಿ ಹೇಳಿದ್ದಾರೆ

“ಸಿಎಂ ಕುಮಾರಸ್ವಾಮಿ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರ ಅವಶ್ಯಕತೆ ನಮಗಿಲ್ಲ, ಅವರು ಬೆನ್ನಿಗೆ ಚೂರಿ ಹಾಕಿದವರು ಎಂದು ಎಚ್​ಡಿಕೆ ನಮ್ಮ ಮೇಲೆ ಆರೋಪ ಮಾಡಿದ್ದರು. ಹೀಗೆ ಆರೋಪ ಮಾಡಿದ ಮೇಲೂ ಅವರ ಪರ ಕೆಲಸ ಮಾಡಲು ಹೇಗೆ ಸಾಧ್ಯ. ಹೀಗಾಗಿ ಚುನಾವಣೆಯಿಂದ ದೂರ ಇರುತ್ತೇವೆ ಎಂದು ಹೇಳಿದ್ದೆವು. ಸೋತವರನ್ನು ವಿಶ್ವಾಸಕ್ಕೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಅವರೇ ಹೇಳಿದ್ದರು. ಹೀಗಾಗಿ ನಾವು ಅಂತರ ಕಾಯ್ದುಕೊಂಡಿದ್ದೆವು.. . ನಾವು ನಿಖಿಲ್ ಪರವಾಗಿ ಪ್ರಚಾರ ಮಾಡುತ್ತೇವೆ ಎಂದು ಯಾವತ್ತೂ ಹೇಳಿರಲಿಲ್ಲ. ” ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top