fbpx
ಸಮಾಚಾರ

“ನಿಖಿಲ್ ಸೋತರೇ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ರಿಲೀಸ್ ಮಾಡೋದಿಲ್ಲ” ಎಂದಿದ್ದ ಮುನಿರತ್ನ.

ಹೈವೋಲ್ಟೇಜ್ ಕಣವಾಗಿ ಪರಿಣಮಿಸಿದ್ದ ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ತೀವ್ರ ಹಿನ್ನಡೆಯುಂಟಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವಿನ ನಗೆ ಬೀರಿದ್ದಾರೆ. ಸುಮಲತಾ ಅಂಬರೀಷ್‌ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಿ ನಿಖಿಲ್ ಗೆ ಸೋಲುಣಿಸಿದ್ದಾರೆ.. ಮಂಡ್ಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಪ್ರಚಾರದ ಸಮಯದಲ್ಲಿ ನಾಯಕರುಗಳು ಆಡಿದ್ದ ಒಂದೊಂದೇ ಮಾತುಗಳು ಈಗ ಭಾರಿ ಚರ್ಚೆಗೆ ಒಳಗಾಗುತ್ತಿವೆ..

 

 

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಸಿನಿಮಾಪಕ ಮುನಿರತ್ನ ಅವರು ಆಡಿದ್ದ ಮಾತು ಕೂಡ ಈಗ ಚರ್ಚೆಗೆ ಕಾರಣವಾಗುತ್ತಿದೆ. ಅದೇನೆಂದರೆ. “ಒಂದು ವೇಳೆ ಮಂಡ್ಯದಲ್ಲಿ ನಿಖಿಲ್ ಸೋತರೇ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ರಿಲೀಸ್ ಮಾಡೋದಿಲ್ಲ” ಎಂಬ ಹೇಳಿಕೆ..

ಹೌದು, ಮಂಡ್ಯದಲ್ಲಿ ನಿಖಿಲ್ ಕುಮಾರ್ ಪರವಾಗಿ ಸ್ವತಃ ಮುನಿರತ್ನ ಅವರು ಪ್ರಚಾರ ಮಾಡಿದ್ದರು. ಡಿಕೆ ಶಿವಕುಮಾರ್, ಸಿಎಂ ಕುಮಾರಸ್ವಾಮಿ ಜೊತೆ ಮಂಡ್ಯಕ್ಕೆ ಹೋಗಿದ್ದ ಮುನಿರತ್ನ ತಮ್ಮ ಸಿನಿಮಾದಲ್ಲಿ ನಟಿಸಿದ ಕಲಾವಿದನನ್ನು ಗೆಲ್ಲಿಸಬೇಕೆಂದು ಮಂಡ್ಯ ಜನರಲ್ಲಿ ಕೇಳಿಕೊಂಡಿದ್ದರು. ಪ್ರಚಾರದಲ್ಲಿ ಮಾತನಾಡುವ ವೇಳೆ “ಒಂದು ವೇಳೆ ಮಂಡ್ಯದಲ್ಲಿ ನಿಖಿಲ್ ಸೋತರೇ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ರಿಲೀಸ್ ಮಾಡೋದಿಲ್ಲ” ಎಂದು ಕೂಡ ಮುನಿರತ್ನ ಹೇಳಿದ್ದರು..

ಈಗ ನಿಖಿಲ್ ಸುಮಲತಾ ಎದುರು ಸೋಲುಂಡಿದ್ದಾರೆ.. ಅತ್ತ ಮುನಿರತ್ನ ಅವರು ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಅದಾಗಲೇ ಘೋಷಿಸಿದ್ದು ಕುರುಕ್ಷೇತ್ರದ ಕಥೆ ಏನಾಗುತ್ತೆ ಎಂಬ ಕುತೂಹಲ ಕಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top