fbpx
ಸಮಾಚಾರ

ಠೇವಣಿ ಕಳೆದುಕೊಂಡ ಪ್ರಕಾಶ್ ರೈ-“ನನ್ನ ಮುಖಕ್ಕೆ ಸರಿಯಾಗಿಯೇ ಮಂಗಳಾರತಿಯಾಗಿದೆ” ಎಂದ ಜಸ್ಟ್ ಆಸ್ಕಿಂಗ್ ನಟ.

ಲೋಕಸಭಾ ಚುನಾವಣೆ ಫಲಿತಾಂಶದ ಸಂಪೂರ್ಣ ಫಲಿತಾಂಶ ಹೊರ ಬಿದ್ದಿದ್ದು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ನಟ ಪ್ರಕಾಶ್‌ ರಾಜ್‌ಗೆ ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿಯ ಪಿಸಿ ಮೋಹನ್ 602,853 ಮತಗಳನ್ನು ಪಡೆದು ಜಯಶೀಲರಾಗಿದ್ದು ರಿಜ್ವಾನ್ ಅರ್ಷದ್ 531,885 ಹತ್ತಿರದ ಪ್ರತಿಸ್ಪರ್ಧೆಯಾಗಿದ್ದಾರೆ. ನೋಟಾಗೆ 10,760 ಮತಗಳು ಬಿದ್ದಿವೆ. ಉಳಿದಂತೆ ಕೆಲವರು ನಾಲ್ಕು ಅಂಕಿ ದಾಟಿದ್ದರೆ, ಇನ್ನುಳಿದವರು ಮೂರಂಕೆಗೆ ತೃಪ್ತಿ ಪಡಬೇಕಾಗಿದೆ. ಆದರೆ ಪ್ರಕಾಶ್ ರೈ 28,906 ಮತಗಳನ್ನು ಪಡೆದು ಠೇವಣಿಯನ್ನು ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಬಹಳ ಕಾಲದಿಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ‘ಕೋಮುವಾದಿ’ ಎಂದು ಬಾಯಿಗೆ ಬಂದಂತೆ ಬಯ್ಯುತ್ತಿದ್ದ ನಟ ಪ್ರಕಾಶ್ ರೈ, ಮತ್ತೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮೋದಿ ಸೇರಿದಂತೆ ಬಿಜೆಪಿ ಪಕ್ಷವನ್ನು ಹೀಯಾಳಿಸುತ್ತಿದ್ದ ನಟ ಪ್ರಕಾಶ್ ರೈಗೆ ಇದೀಗ ಬಿಜೆಪಿ ಪಕ್ಷವು ಸ್ಪಷ್ಟ ಬಹಮತ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಪೋಸ್ಟ್ ಮಾಡಿದ್ದಾರೆ.

 

 

ಚುನಾವಣೆಯಲ್ಲಿನ ಸೋಲು ನನ್ನ ಕಪಾಳಕ್ಕೆ ಜೋರಾಗಿ ಹೊಡೆದಂತಾಗಿದೆ, ಮತ್ತಷ್ಟು ಅವಮಾನಿತ, ಟ್ರೋಲ್ ಮತ್ತು ತೇಜೋವಧೆಗೊಳಗಾಗಲಿದ್ದೇನೆ ಎಂದು ತಿಳಿದಿದೆ. ನಾನು ನನ್ನ ನಿಲುವಿನಲ್ಲಿ ದೃಢವಾಗಿದ್ದೇನೆ. ಜಾತ್ಯಾತೀತ ಭಾರತಕ್ಕಾಗಿರುವ ನನ್ನ ಹೋರಾಟ ಮುಂದುವರಿಯಲಿದೆ. ಕಠಿಣ ಪಯಣ ಈಗಷ್ಟೇ ಶುರುವಾಗಲಿದೆ. ಈ ಪಯಣದಲ್ಲಿ ನನ್ನೊಂದಿಗೆ ಇದ್ದವರಿಗೆ ಧನ್ಯವಾದಗಳು ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top