fbpx
ಸಮಾಚಾರ

“ಮೋದಿ ಗೆಲುವಿಗೆ ರಾಹುಲ್ ನಾಯಕತ್ವವೇ ಕಾರಣ”

ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿಯೋದು ಸ್ಪಷ್ಟವಾಗುತ್ತಿದೆ. ಇದೀಗ ಸತತ 2ನೇ ಬಾರಿಗೆ ಪ್ರಧಾನಿ ಪಟ್ಟ ಎರಲು ಮೋದಿ ಸಜ್ಜಾಗಿದ್ದಾರೆ. ಬಿಜೆಪಿ ಭರ್ಜರಿ ಗೆಲುವಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವವೇ ಕಾರಣ ಎಂದು CPI ಪಕ್ಷದ ಕಾರ್ಯದರ್ಶಿ ಅತುಲ್ ಕುಮಾರ್ ಅಂಜಾನ್ ಆರೋಪಿಸಿದ್ದಾರೆ.

ವಿರೋಧ ಪಕ್ಷಗಳ ಒಗ್ಗಟ್ಟಿಗೆ ರಾಹುಲ್ ಗಾಂಧಿಯ ನೀತಿ, ನಿರ್ಧಾರಗಳು ಮುಳುವಾಗಿದೆ. ಕಾಂಗ್ರೆಸ್‌ನಿಂದ ವಿರೋಧ ಪಕ್ಷಗಳು ಒಡೆದುಹೋಗಿವೇ. ಸಮರ್ಥವಾಗಿ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗಿಲ್ಲ. ಪರಿಪಕ್ವಾವಾಗದ ರಾಹುಲ್ ನಾಯಕತ್ವ ಈ ಫಲಿತಾಂಶಕ್ಕೆ ಕಾರಣ” ಎಂದು ಅತುಲ್ ಹೇಳಿದ್ದಾರೆ.

ಸದ್ಯ ಮುನ್ನಡೆ ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, 2014ರ ಫಲಿತಾಂಶಕ್ಕಿಂತ ಅತ್ಯುತ್ತಮವಾಗಿಯೇ ಬಿಜೆಪಿಗೆ ವಾರವಾಗಲಿದೆ. ಬಿಜೆಪಿ ಮುನ್ನಡೆಗೆ ಮೋದಿ ಸರ್ಕಾರದ ಸಾಧನೆಗಳಿಗಿಂತ ರಾಹುಲ್ ಗಾಂಧಿ ವೈಫಲ್ಯಗಳೇ ಕಾರಣವಾಗಿದೆ ಎಂದು ಅತುಲ್ ಕಡ್ಡಿ ಮುರಿದಂತೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top