fbpx
ಸಮಾಚಾರ

” ನನ್ನ ಸೋಲಿಗೆ ಬಿಜೆಪಿಯವರೇ ಕಾರಣ” ಹಿರಿಯ ನಟಿ ಜಯಪ್ರದಾ.

ನಮ್ಮ ಪಕ್ಷದವರು ಎದುರಾಳಿ ಅಭ್ಯರ್ಥಿಗೆ ಬೆಂಬಲ ನೀಡಿದ ಕಾರಣ ನನಗೆ ಸೋಲುಂಟಾಯಿತು ಎಂದು ಹಿರಿಯ ನಟಿ , ಬಿಜೆಪಿ ನಾಯಕಿ ಜಯಪ್ರದಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಜಯಪ್ರದಾ ,” ಕ್ಷೇತ್ರದಲ್ಲಿ ನಾನು ಸೋಲು ನಮ್ಮ ಪಕ್ಷದ ಕೆಲವರು ಕಾರಣ. ನನ್ನ ಪರ ಕೆಲಸ ಮಾಡುವ ಬದಲು ಎದುರಾಳಿ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಪಕ್ಷದ ವರಿಷ್ಠರೊಂದಿಗೆ ಮಾತನಾಡಿದ್ದು, ಯಾರು ವಿರೋಧಿ ಅಭ್ಯರ್ಥಿಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದೇನೆ. ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎಂದು ಮನವಿ ಮಾಡಿದ್ದೇನೆ” ಎಂದರು.

ರಾಮ್‌ಪುರ್‌ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಜಯಪ್ರದಾ ಎಸ್ಪಿ-ಬಿಎಸ್ಪಿ-ಆರ್ಎಲ್ಡಿ ಮೈತ್ರಿ ಅಭ್ಯರ್ಥಿ ಅಜಂ ಖಾನ್ ವಿರುದ್ಧ 1, 09,977 ಮತಗಳ ಅಂತರದ ಅಘಾತಕಾರಿ ಸೋಲು ಅನುಭವಿಸಿದ್ದರು. ಅಂದಹಾಗೆ ಜಯಪ್ರದಾ 2004 ಮತ್ತು 2009 ರಲ್ಲಿ ಎಸ್‌ಪಿ ಪಕ್ಷದ ಸಂಸದೆಯಾಗಿ ರಾಂಪುರ್‌ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top