fbpx
ಸಮಾಚಾರ

ಯುವಕನ ಸಾವಿಗೆ ಕತೆ ಕಟ್ಟಿದವರ ಬಂಧನ.

ಬೆಳಗಾವಿ ಯುವಕ ಶಿವು ಉಪ್ಪಾರ್ ಸಾವಿನ ವಿಚಾರವಾಗಿ ಇಬ್ಬರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ ಇಬ್ಬರನ್ನು ಬೆಳಗಾವಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಶಾಂತಿ ಭಂಗಕ್ಕೆ ಯತ್ನಿಸಿರುವ ಆರೋಪದಲ್ಲಿ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮದ ಅರ್ಜುನ್ ಮುತ್ತಪ್ಪಾ ಬಸರಗಿ ಹಾಗೂ ಸವದತ್ತಿ ತಾಲೂಕಿನ ಹಿರೇಕುಂಬಿ ಗ್ರಾಮದ ಫಕೀರಪ್ಪ ರಮೇಶ ತಳವಾರ ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಯುವಕನ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವ ಇತರರ ಮೇಲೂ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಎಂದ ಪೋಷಕರು:
ಶಿವಕುಮಾರ ತಾನಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನನ್ನು ಕೊಲೆ ಮಾಡಿರುವ ಬಗ್ಗೆ ತಮಗೆ ಯಾರ ಮೇಲೂ ಸಂಶಯ ಇಲ್ಲ ಎಂದು ಶಿವಕುಮಾರ ಅವರ ಪಾಲಕರೇ ಹಿರೇಬಾಗೇವಾಡಿ ಠಾಣೆಯಲ್ಲಿ ದೂರು ತಿಳಿಸಿದ್ದಾರೆ. ಐಟಿಐ ಓದುತ್ತಿದ್ದ ಶಿವಕುಮಾರಗೆ ಗೋರಕ್ಷಣೆ ಮತ್ತಿತರ ಹೋರಾಟ ಬಿಟ್ಟು ಮೊದಲು ಅಭ್ಯಾಸದ ಕಡೆ ಗಮನಕೊಡು ಎಂದು ಪಾಲಕರು ಬೈದಿದ್ದರು. ಅದಕ್ಕೆ ಅವನು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹಿರೇಬಾಗೇವಾಡಿ ಠಾಣೆ ಇನ್‌ಸ್ಪೆಕ್ಟರ್‌ ಖಚಿತಪಡಿಸಿದ್ದಾರೆ.

 

 

ಏನಿದು ಘಟನೆ?
ಬೆಳಗಾವಿಯ ಬಾಗೇವಾಡಿ ಬಸ್​ ನಿಲ್ದಾಣದ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಶಿವಕುಮಾರ ಬಲರಾಮ ಉಪ್ಪಾರ (19) ಎನ್ನುವ ಯುವಕನ ಶವ ಪತ್ತೆಯಾಗಿತ್ತು. ಶಿವಕುಮಾರ್‌ ತನ್ನ ಮಾವನ ಜತೆಗೆ ಗೋರಕ್ಷಕನಾಗಿ ಗುರುತಿಸಿಕೊಂಡಿದ್ದರು. ಈ ಕಾರಣಕ್ಕೆ ಶಿವಕುಮಾರನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹಬ್ಬಿಸಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಪ್ರಕರಣ ಸಂಬಂಧ ಚಿಕ್ಕಮಗಳೂರಿನಿಂದ ಸಂಸದೆಯಾಗಿ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆ ಘಟನೆಯ ಬಗ್ಗೆ ಪರಿಶೀಲಿಸದೆ ಭಾನುವಾರ ಸಂಜೆ ಟ್ವೀಟ್​ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top