fbpx
ಸಮಾಚಾರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿದ್ದ ನಟಿ ಈಗ ಸಂಸದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿದ್ದ ನಾಯಕಿಯೊಬ್ಬರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮಹಾರಾಷ್ಟ್ರದ ಅಮರಾವತಿಯ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ದರ್ಶನ್, 2004ರಲ್ಲಿ ದರ್ಶನ್ ಚಿತ್ರದಲ್ಲಿ ನಟಿಸಿದ್ದರು. ಅವರದ್ದೇ ಹೆಸರಿನ ಟೈಟಲ್ ಇಟ್ಟುಕೊಂಡಿದ್ದ ಚಿತ್ರದ ಮೂಲಕ ನವ್‍ನೀತ್ ಕೌರ್ ಎಂಬ ಚೆಲುವೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅದಾದ ಮೇಲೆ ನವನೀತ್ ಕೌರ್, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ, ನಂತರ ಮಹಾರಾಷ್ಟ್ರದ ರಾಜಕಾರಣಿ ರವಿ ರಾನಾ ಅವರನ್ನು ವಿವಾಹವಾಗಿದ್ದರು.

 

 

ಯುವ ಸ್ವಾಭಿಮಾನ ಪಕ್ಷದ(ವೈಎಸ್‍ಪಿ) ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಲ್ಲಿ ನವನೀತ್ ಅವರು ಶಿವಸೇನೆಯ ಆನಂದ್‍ರಾವ್ ಅದ್ಸಲ್ ವಿರುದ್ಧ ಸ್ಪರ್ಧಿಸಿದ್ದರು. 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆನಂದ್ ರಾವ್ ಅವರನ್ನು ಈ ಬಾರಿ 37,295 ಮತಗಳಿಂದ ಸೋಲಿಸಿ ಅಚ್ಚರಿಯ ರೀತಿಯಲ್ಲಿ ನವನೀತ್ ಗೆಲುವು ಸಾಧಿಸಿದ್ದಾರೆ.

ನವನೀತ್‌ ಅವರ ಪತಿ ರವಿ ರಾಣಾ ಅಮರಾವತಿ ಕ್ಷೇತ್ರದಲ್ಲಿ ವಿಧಾನಸಭಾ ಸದಸ್ಯರಾಗಿದ್ದಾರೆ. ಅವರೇ ಸ್ಥಾಪಿಸಿರುವ ಪಕ್ಷದಿಂದ ಕಳೆದ ಬಾರಿ ಕೂಡ ನವನೀತ್‌ ಸ್ಪರ್ಧಿಸಿದ್ದರಾದರೂ, 1.36 ಲಕ್ಷ ಮತಗಳ ಅಂತರದಿಂದ ಸೋತಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಮೈತ್ರಿಕೂಟದ ಬೆಂಬಲದೊಂದಿಗೆ ನವನೀತ್‌ ಕಣಕ್ಕೆ ಇಳಿದು ಗೆಲುವು ಸಾಧಿಸಿದ್ದಾರೆ. ನವನೀತ್ ಕೌರ್ ಅವರಿಗೆ 5,07,844 ಮತಗಳು ಬಿದ್ದಿದ್ದರೆ, ಬಿಜೆಪಿಯ ಆನಂದ್ ರಾವ್ ಅವರಿಗೆ 4,70,549 ಮತಗಳು ಬಿದ್ದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top