fbpx
ಭವಿಷ್ಯ

29 ಮೇ : ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಬುಧವಾರ, ಮೇ 29 2019
ಸೂರ್ಯೋದಯ : 5:52 am
ಸೂರ್ಯಾಸ್ತ: 6:41 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ವೈಶಾಖ
ಪಕ್ಷ : ಕೃಷ್ಣಪಕ್ಷ
ತಿಥಿ : ದಶಮೀ 15:21
ನಕ್ಷತ್ರ :ಉತ್ತರಾಭಾದ್ರಪದ 21:18
ಯೋಗ : ಪ್ರೀತಿ 14:17
ಕರಣಂ: ವಿಷ್ಟಿ 15:21 ಬಾವ 28:04

ಅಭಿಜಿತ್ ಮುಹುರ್ತ:ಯಾವುದೂ ಇಲ್ಲ
ಅಮೃತಕಾಲ :4:02 pm – 5:48 pm

ರಾಹುಕಾಲ- 12:17 pm – 1:52 pm
ಯಮಗಂಡ ಕಾಲ- 7:31 am – 9:06 am
ಗುಳಿಕ ಕಾಲ- 10:41 am – 12:17 pm

 

 

ಮೇಷ (Mesha)

ಕೆಲಸದ ಒತ್ತಡಗಳು ಹೆಚ್ಚು ಇದ್ದು ಯಾವ ಕೆಲಸವನ್ನು ಮೊದಲು ಮಾಡಬೇಕೆಂದು ಚಿಂತೆ ಉಂಟಾಗುವುದು. ಸಂಜೆಯ ವೇಳೆಗೆ ಮಹತ್ತರ ಸೂಚನೆಯನ್ನು ಕೇಳುವಿರಿ. ಆರ್ಥಿಕ ಸ್ಥಿತಿ ಉತ್ತಮ.

 

ವೃಷಭ (Vrushabha)

ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ, ಅಂತೆಯೇ ಇಂದು ನೀವು ಆಶಾವಾದಿಗಳಾಗಿದ್ದೀರಿ. ಇದರಿಂದ ಬಹುನಿರೀಕ್ಷಿತ ಫಲಿತಾಂಶವನ್ನು ಕಾಣುವಿರಿ. ಹಣಕಾಸಿನ ಬಗ್ಗೆ ಜಾಗೃತರಾಗಿರಿ. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ.

 

ಮಿಥುನ (Mithuna)

ಬಂಧು ಮಿತ್ರರೊಡನೆ ಸಮಾಗಮ. ದುಃಖ ನಾಶ. ಹಮ್ಮಿಕೊಂಡಿರುವ ಕಾರ್ಯದಲ್ಲಿ ಯಶಸ್ಸು. ರಾಜಸನ್ಮಾನ, ಕೌಟುಂಬಿಕ ಜೀವನದ ನೆಮ್ಮದಿಯ ಸಮಯ, ಸಾಮಾಜಿಕ ಜನಪ್ರಿಯತೆ ಹೆಚ್ಚಾಗುವುದು.

ಕರ್ಕ (Karka)

ಸ್ವಧರ್ಮಾಚರಣೆಯಿಂದ ಚಿತ್ತ ಶುದ್ಧಿ. ಕ್ರಯವಿಕ್ರಯದಲ್ಲಿ ಅಧಿಕ ಲಾಭಾಂಶ ಕಂಡಬರುವುದು. ಆರೋಗ್ಯ ಉತ್ತಮವಾಗಿರುವುದು. ಗುರು-ಹಿರಿಯರಲ್ಲಿ ತೋರುವ ಭಕ್ತಿಯಿಂದ ಒಳಿತಾಗುವುದು.

 

ಸಿಂಹ (Simha)

ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಗುರುವಿನ ಬಲ ಇರುವುದರಿಂದ ಹೆಚ್ಚಿನ ತೊಂದರೆಯಿಲ್ಲ.

 

ಕನ್ಯಾರಾಶಿ (Kanya)

ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಇರುತ್ತದೆ. ಸ್ತ್ರೀ ಸಮೂಹದ ಜೊತೆಯಲ್ಲಿದ್ದಾಗ ಮಾತಿಗೆ ಕಡಿವಾಣ ಹಾಕಿರಿ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ತೋರಿಬರುವುದು. ಮನೋಕಾಮನೆ ಪೂರ್ಣಗೊಳ್ಳುವುದು.

 

ತುಲಾ (Tula)

ಸಾಮಾಜಿಕ ಕ್ಷೇತ್ರಗಳಿಂದ ಕೀರ್ತಿ, ಧನ ಲಾಭ. ಮಾತು ಕೊಟ್ಟ ಪ್ರಕಾರ ಕಾರ್ಯಸಿದ್ಧಿಯಾಗುವುದು. ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಇತರರಿಗೆ ಹೆಚ್ಚಿನ ಆಶ್ವಾಸನೆ ನೀಡದಿರಿ.

 

ವೃಶ್ಚಿಕ (Vrushchika)

ಉದ್ಯೋಗಸ್ಥರಿಗೆ ಉತ್ತಮ ಅವಕಾಶ ದೊರೆಯುವುದು. ಬ್ಯಾಂಕಿಂಗ್ ವ್ಯವಹಾರಗಳು ಸುಲಲಿತವಾಗುವುದು. ನೂತನ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಸ್ವಂತ ವ್ಯಾಪಾರದಿಂದ ಹೆಚ್ಚಿನ ಪ್ರಗತಿ ಕಂಡುಬರುವುದು.

 

ಧನು ರಾಶಿ (Dhanu)

ಇಂದು ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ವರ್ಚಸ್ಸು ಹೆಚ್ಚಲಿದೆ. ಬಂಧು, ಬಳಗದವರು ನಿಮಗೆ ಸಹಕಾರಿಯಾಗಿ ನಿಲ್ಲುವರು. ಖರ್ಚು-ವೆಚ್ಚಗಳ ಬಗ್ಗೆ ಕೈ ಹಿಡಿತವಿರಲಿ.

 

ಮಕರ (Makara)

ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದರೂ ಹಣವು ಬಂದ ವೇಗದಲ್ಲಿಯೇ ಖರ್ಚಾಗುವುದು. ರಾಜಿ ಪಂಚಾಯಿತಿಗಳಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿರಿ. ತಮ್ಮ ವಾದವೇ ಶ್ರೇಷ್ಠ ಎಂದು ವಾದ ಮಾಡದಿರಿ. ಆರೋಗ್ಯ ಉತ್ತಮವಾಗಿರುವುದು.

 

ಕುಂಭರಾಶಿ (Kumbha)

ಕೆಲಸ ಮಾಡುವ ಕಚೇರಿಗಳಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ / ಗೌರವ ದೊರೆಯುವುದಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಗೆಳೆಯರ, ವಿಶ್ವಾಸಿಗರ ಸಲಹೆಯಂತೆ ಮುಂದುವರಿಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮ.

 

ಮೀನರಾಶಿ (Meena)

ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಸಲ್ಲದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಕುಟುಂಬದ ಸದಸ್ಯರೊಡನೆ ಕಾಲ ಕಳೆಯುವಿರಿ.  

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top