fbpx
ಸಮಾಚಾರ

“ತುಮಕೂರಿನಲ್ಲಿ ದೇವೇಗೌಡರು ಸೋಲಲು ಅವರ ಸೊಸೆಯಂದಿರು ಕಾರಣ”

ತುಮಕೂರಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್.ಡಿ. ದೇವೇಗೌಡ ಗೆಲ್ಲಬೇಕಿತ್ತು. ಆದರೆ ಇಲ್ಲಿ ಹೀನಾಯ ಸೋಲಿಗೆ ಅವರ ಸೊಸೆಯಂದಿರಾದ ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ ಅವರೇ ಕಾರಣ ಎಂದು ತುಮಕೂರಿನ ಯುವ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

 

 

ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಮಾತನಾಡಿ, “ದೇವೇಗೌಡ ಅವರ ಇಬ್ಬರು ಸೊಸೆಯಂದಿರು ತಮ್ಮ ಮಕ್ಕಳಿಗೆ ಲೋಕಸಭಾ ಚುನಾವಣೆ ಟಿಕೆಟ್ ನೀಡಬೇಕಂದು ಹಠ ಹಿಡಿದಿದ್ದರು. ದೇವೇಗೌಡ ಅವರಿಗೆ ಸೇಫ್ ಆಗಿದ್ದ ಹಾಸನ, ಮಂಡ್ಯ ಕ್ಷೇತ್ರಗಳನ್ನು ಬಿಟ್ಟುಕೊಟ್ಟು ಒಲ್ಲದ ಮನಸ್ಸಿನಿಂದ ತುಮಕೂರಿನಲ್ಲಿ ಬಂದು ಚುನಾವಣೆ ಸ್ಪರ್ಧಿಸಿದರು. ಇಬ್ಬರು ಸೊಸೆಯರ ಈ ನಿರ್ಧಾರದಿಂದಲೇ ದೇವೇಗೌಡ ಅವರಿಗೆ ಈ ಗತಿ ಬಂದಿದೆ” ಎಂದು ಹೇಳಿದರು.

ದೇವೇಗೌಡರ ಸೋಲಿಗೆ ನಿಖಿಲ್ ಕಾರಣ:
ಅಂದಹಾಗೆ ಇತ್ತೀಚಿಗೆ ಮಾತನಾಡಿದ್ದ ರಾಜೇಂದ್ರ ತಂದೆ ರಾಜಣ್ಣ ದೇವೇಗೌಡರ ಸೋಲಿಗೆ ನಿಖಿಲ್ ಕಾರಣ ಎಂದು ಹೇಳಿದ್ದರು. “ನಿಖಿಲ್ ಕುಮಾರಸ್ವಾಮಿ ಕುಂಚಿಟಿಗರ ಹೆಣ್ಣು ಮಗಳನ್ನು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆ ಯುವತಿಯನ್ನು ವಿವಾಹ ಮಾಡಿಕೊಳ್ಳಲಿಲ್ಲ. ಇದು ಆ ಸಮುದಾಯದ ಜನರಲ್ಲಿ ಬೇಸರಕ್ಕೆ ಕಾರಣವಾಗಿತ್ತು. ದೇವೇಗೌಡರ ವಿರುದ್ಧ ಮತ ಚಲಾಯಿಸಿದರು. ಇದನ್ನು ನನ್ನ ಬಹಳಷ್ಟು ಸ್ನೇಹಿತರು ನನಗೆ ತಿಳಿಸಿದರು” ಎಂದು ರಾಜಣ್ಣ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top