fbpx
ಸಮಾಚಾರ

ರಾಜಕೀಯ ಮರೆತು ಸುಮಲತಾಗೆ ಮತ್ತು ಅಭಿಯ ಅಮರ್ ಚಿತ್ರಕ್ಕೆ ವಿಶ್ ಮಾಡಿದ ನಿಖಿಲ್ ಕುಮಾರ್.

ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅಂಬರೀಷ್ ಕುಚಿಕು ಗೆಳೆಯರು ಎನಿಸಿಕೊಂಡಿದ್ದ ಸ್ಯಾಂಡಲ್‍ವುಡ್‍ನ ಈ ಇಬ್ಬರು ಉದಯೋನ್ಮುಖ ನಟರು ಮಂಡ್ಯ ರಾಜಕೀಯದಿಂದ ವೈರಿಗಳಾಗಿ ಬದಲಾಗಿದ್ದರು. ರಾಜಕಾರಣದ ಹೊರತಾಗಿಯೂ ನಾವು ಒಳ್ಳೆಯ ಸ್ನೇಹಿತರು ಎನ್ನುತ್ತಿದ್ದ ನಿಖಿಲ್ ಹಾಗೂ ಅಭಿಷೇಕ್ ಮಂಡ್ಯ ಲೋಕಸಭಾ ಚುನಾವಣೆಯ ವೇಳೆ ನಡೆದ ತಂತ್ರ, ಪ್ರತಿತಂತ್ರಗಳಿಂದಾಗಿ ಕೊಂಚ ದೂರಾಗಿದ್ದರು. ಆದರೆ ಈಗ ಇವರಿಬ್ಬರ ನಡುವಿನ ಸ್ನೇಹ ಮತ್ತೆ ಚಿಗುರೊಡೆಯುವ ಸೂಚನೆ ಸಿಗುತ್ತಿದೆ. ಹೌದು, ರೆಬಲ್​​ಸ್ಟಾರ್​​ ಅಂಬರೀಷ್​​​ ಪುತ್ರ ಅಭಿಷೇಕ್​​ ಅಂಬರೀಷ್​​​​​​​​​ ಅವರ ಅಮರ್​​ ಚಿತ್ರ ಮೇ 31 ರಂದು ಬಿಡುಗಡೆಯಾಗಲಿದ್ದು, ನಿಖಿಲ್​​ ಅವರಿಗೆ ಶುಭಾಶಯ ಕೋರಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನಿಖಿಲ್ ಕುಮಾರಸ್ವಾಮಿ ಇಷ್ಟು ದಿನ ಪ್ರತಿಕ್ರಿಯಿಸಿರಲಿಲ್ಲ. ಆದರೆ, ನಿನ್ನೆ (ಬುಧವಾರ) ದಿವಂಗತ ಅಂಬರೀಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಅವರು, ಇಂದು ಅಭಿಷೇಕ್ ಅಂಬರೀಶ್ ಗೆ ವಿಶ್ ಮಾಡಿದ್ದಾರೆ. ಅಂಬರೀಶ್ ಹುಟ್ಟುಹಬ್ಬ ಹಾಗೂ ಅಭಿಷೇಕ್ ಅವರ ‘ಅಮರ್’ ಸಿನಿಮಾ ನಾಳೆ ಬಿಡುಗಡೆಯಾಗುತ್ತಿರುವ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಶುಭ ಹಾರೈಸಿರುವ ನಿಖಿಲ್ ಮಂಡ್ಯ ಚುನಾವಣಾ ಫಲಿತಾಂಶದ ಬಗ್ಗೆ ಮತ್ತು ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕೂಡ ಬರೆದಿದ್ದಾರೆ.

ಮಂಡ್ಯ ಜನತೆ ನಿಖಿಲ್​​ ಕುಮಾರಸ್ವಾಮಿಯನ್ನು ತಿರಸ್ಕರಿಸಿದ್ದಾರೆ. ಕಾರ್ಯಕರ್ತರ ನಿರೀಕ್ಷೆಯನ್ನು ಹುಸಿ ಮಾಡಿರುವುದಕ್ಕೆ ಅವರಿಗೆ ಕ್ಷಮೆ ಕೋರುತ್ತೇನೆ. ಮುಂದಿನ ದಿನಗಳಲ್ಲಿ ಮಂಡ್ಯ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ರಾಜ್ಯದ್ಯಾಂತ ಪ್ರವಾಸ ಕೈಗೊಂಡು ಜನರ ಕಷ್ಟ-ಸುಖಗಳನ್ನು ಅರಿಯುವ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಶೀಘ್ರದಲ್ಲಿ ಸುದ್ದಿಗೋಷ್ಠಿ ನಡಸಿ ಮುಂದಿನ ಯೋಜನೆಯಗಳ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ನಿಖಿಲ್​​ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

”ನಾಳೆ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಮೊದಲ ಸಿನಿಮಾ ‘ಅಮರ್’ ಭಾರಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸುತ್ತಿದ್ದೇನೆ. ದಯವಿಟ್ಟು ಚಿತ್ರಮಂದಿರಗಳಿಗೆ ಹೋಗಿ ಆ ಸಿನಿಮಾವನ್ನು ನೋಡಿ. ಅಭಿ ಚೆನ್ನಾಗಿ ನಟಿಸುರುತ್ತಾನೆ ಎನ್ನುವ ಭರವಸೆ ಇದೆ.” ಎಂದು ತಮ್ಮ ಮಾತು ಶುರು ಮಾಡಿರುವ ನಿಖಿಲ್ ಮುಂದೆ ಚುನಾವಣೆ ಬಗ್ಗೆ ಬರೆದುಕೊಂಡಿದ್ದಾರೆ.

‘ಇದು ಕೇವಲ ತೋರ್ಪಡಿಕೆಗಾಗಿ ಶುಭ ಕೋರುತ್ತಿದ್ದೇನೆ ಎಂದು ತಿಳಿದುಕೊಳ್ಳುವವರಿಗೆ ನಾನು ಏನು ಹೇಳಲು ಬಯಸುತ್ತಿದ್ದೇನೆಂದರೆ, ನಾನು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ಇದನ್ನೇ ನಾನು ಚುನಾವಣಾ ಪ್ರಚಾರದ ಸಮಯದಲ್ಲಿಯೂ ಒತ್ತಿ ಹೇಳುತ್ತಿದ್ದೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದಕ್ಕೆ ಶುಭ ಕೋರುತ್ತೇನೆ. ಯಾರನ್ನು ಟೀಕಿಸುವುದು ಬೇಡ, ಮಂಡ್ಯದ ಅಭಿವೃದ್ದಿಗಾಗಿ ನಾನು ಯಾರ ಜೊತೆಗಾದರೂ ಕೈ ಜೋಡಿಸಲು ಸಿದ್ಧ. ಈ ಚುನಾವಣೆಯ ಫಲಿತಾಂಶದ ಹೊಣೆಯನ್ನು ನಾನೇ ಹೊರುತ್ತೇನೆ. ಏನೇ ಟೀಕಿಸುವುದು ಇದ್ದರೂ ನನ್ನನ್ನೇ ಟೀಕಿಸಿ. ಎಮ್ ಎಲ್ ಎ, ಎಮ್ ಎಲ್ ಸಿ, ಕಾರ್ಯಕರ್ತರು, ಮುಖ್ಯಮಂತ್ರಿ ಹಾಗೂ ದೇವೇಗೌಡರನ್ನು ಟೀಕಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.

‘ಮಂಡ್ಯಗಾಗಿ ಮುಖ್ಯಮಂತ್ರಿಗಳು 8,671 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಆ ಕೆಲಸಗಳು ಸರಿಯಾಗಿ ನಡೆಯುತ್ತಿವೆಯೇ ಎಂದು ಕಾತರಿ ಪಡಿಸಿಕೊಳ್ಳುತ್ತೇನೆ. ಏಕೆಂದರೆ, ಅದು ನಮ್ಮ ಕರ್ತವ್ಯ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ 5 ಲಕ್ಷದ 76 ಸಾವಿರ 400 ಜನರಿಗೆ ಧನ್ಯವಾದ. ಮುಂದಿನ ದಿನದಲ್ಲಿ ಇನ್ನುಳಿದ ಮತದಾರರ ನಂಬಿಕೆ ಗಳಿಸಲು ಪ್ರಯತ್ನ ಮಾಡುತ್ತೇನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top