fbpx
ಸಮಾಚಾರ

ವಿಶ್ವಕಪ್ 2019- ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡ ಪಾಕಿಸ್ತಾನ.

ಸತತ ಸೋಲುಗಳಿಂದ ಜರ್ಝರಿತವಾಗಿರುವ ಪಾಕಿಸ್ತಾನ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಹೀನಾಯ ಆರಂಭ ಕಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್‌ಇಂಡೀಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವನ್ನು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಪಾಕ್, ಕೆರಿಬಿಯನ್ ಪಡೆಯ ಬಿಗು ದಾಳಿಗೆ ಕುಸಿದು 104 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಒಶಾನೆ ಥಾಮಸ್ ನಾಲ್ಕು ವಿಕೆಟ್ ಕಬಳಿಸಿ ಪಾಕ್ ತಂಡವನ್ನು ಮಾರಕವಾಗಿ ಕಾಡಿದರು. ಬಳಿಕ ಗುರಿ ಬೆನ್ನಟ್ಟಿದ ವಿಂಡೀಸ್ ಕ್ರಿಸ್ ಗೇಲ್ ಬಿರುಸಿನ ಅರ್ಧಶತಕದ ನೆರವಿನಿಂದ 13.4 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಅಲ್ಲದೆ ಅಂಕಪಟ್ಟಿಯಲ್ಲಿ ಖಾತೆಯನ್ನು ತೆರೆಯಿತು.

ಸಂಕ್ಷಿಪ್ತ ಸ್ಕೊರ್:
ಪಾಕಿಸ್ತಾನ 21.4 ಓವರ್‌ಗಳಲ್ಲೇ ಕೇವಲ 105 ಆಲೌಟ್
ಬಾಬರ್ ಅಜಾಮ್ (22)
ಫಖರ್ ಜಮಾನ್ (22)

ಥಾಮಸ್ 27-4
ರಸೆಲ್ 4-2
ಹೋಲ್ಡರ್ 42-3

ವೆಸ್ಟ್ ಇಂಡೀಸ್ 13.4 ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ 108
ಕ್ರಿಸ್ ಗೇಯ್ಲ್- 50(34b 6×4 3×6)
ಪೂರನ್ -34 (19b 4×4 2×6)

ಮೊಹಮದ್ ಆಮಿರ್ 26-3

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top