ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ಗೆ ಇದು ಕೊನೆಯ ವಿಶ್ವಕಪ್. ವಿಶ್ವಕಪ್ ಮುಗಿದ ನಂತರ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಸಿಲಿದ್ದಾರೆ. ಹೀಗಿರುವಾಗ ಯೂನಿವರ್ಸಲ್ ಬಾಸ್ 2019 ವಿಶ್ವಕಪ್ ಅನ್ನು ಭರ್ಜರಿ ಆಗಿಯೇ ಪ್ರಾರಂಭ ಮಾಡಿದ್ದಾರೆ. ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಕ್ರಿಸ್ ಗೇಲ್ ನೂತನ ದಾಖಲೆ ಬರೆದಿದ್ದಾರೆ.
ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ದಾಖಲೆಯನ್ನು ಮುರಿದಿದ್ದಾರೆ. ಪಾಕ್ ವಿರುದ್ಧ ಮೊದಲ ಪಂದ್ಯದಲ್ಲೇ ಮೂರು ಸಿಕ್ಸರ್ಗಳನ್ನು ಸಿಡಿಸಿರುವ ಗೇಲ್, ತಮ್ಮ ಒಟ್ಟಾರೆ ಸಿಕ್ಸರ್ಗಳ ಸಂಖ್ಯೆಯನ್ನು 40ಕ್ಕೆ ಏರಿಸಿದ್ದಾರೆ. ಇದು ಗೇಲ್ ಪಾಲಿಗೆ 27ನೇ ವಿಶ್ವಕಪ್ ಪಂದ್ಯವಾಗಿದೆ. ಎರಡನೇ ಸ್ಥಾನದಲ್ಲಿರುವ ವಿಲಿಯರ್ಸ್ 23 ಪಂದ್ಯಗಳಲ್ಲಿ 38 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ವಿಶ್ವಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಿವರು:
* ಕ್ರಿಸ್ ಗೇಲ್ – 40
* ಎಬಿ ಡಿ ವಿಲಿಯರ್ಸ್– 37
* ರಿಕಿ ಪಾಂಟಿಂಗ್– 31
* ಬ್ರೆಂಡನ್ ಮೆಕ್ಲಂ– 29
* ಹರ್ಷಲ್ ಗಿಬ್ಸ್– 28
* ಸಚಿನ್ ತೆಂಡೂಲ್ಕರ್ ಮತ್ತು ಸನತ್ ಜಯಸೂರ್ಯ– 27
* ಸೌರವ್ ಗಂಗೂಲಿ– 25
* ಮ್ಯಾಥ್ಯು ಹೇಡನ್– 23
* ವಿವಿಯನ್ ರಿಚರ್ಡ್– 22
Chris Gayle has now hit more sixes than anyone in Cricket World Cup history! #CWC19 pic.twitter.com/j4SG3UCzBP
— Cricket World Cup (@cricketworldcup) May 31, 2019
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
