fbpx
ಸಮಾಚಾರ

400 ಎಕರೆ ಜಾಗದಲ್ಲಿರುವ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನ ಯಾವ ದೇಶದಲ್ಲಿದೆ ಗೊತ್ತೇ

ಸುಮಾರು 400 ಎಕರೆಗೂ ಅಧಿಕ ವಿಸ್ತೀರ್ಣದ ಬೃಹತ್ ಜಾಗದಲ್ಲಿ ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯವನ್ನು ಆಂಗ್‌ಕರ್ ವಾಟ್ ಎಂದು ಕರೆಯಲಾಗುತ್ತದೆ. ಈ ಸ್ಥಳವು ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ ‘ಆಂಗ್‌ಕರ್’ ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮನು 12ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ 2800 ಆಡಿ ಅಗಲ ಮತ್ತು 2800 ಅಡಿ ಉದ್ದವಾಗಿದೆ. ಮರಳುಕಲ್ಲು ಹಾಗೂ ಮುರಕಲ್ಲು ಉಪಯೋಗಿಸಿ ಕಟ್ಟಲಾಗಿದೆ. ಮೇರುಪರ್ವತ ವನ್ನು ಹೋಲುವಂತೆ ಖ್ಮೇರ್ ಹಾಗೂ ದಕ್ಷಿಣ ಭಾರತೀಯ ವಾಸ್ತುಶಿಲ್ಪದಂತೆ ಇದನ್ನು ಕಟ್ಟಲಾಗಿದೆ.ಇದರ ನಿರ್ಮಾಣಕ್ಕೆ 30 ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಯಿತು.

 

 

ಆಂಗ್‌ಕರ್ ವಾಟ್ ದೇವಾಲಯವು ನಿರ್ಮಿತವಾದದ್ದು 12ನೆಯ ಶತಮಾನದ ಪೂರ್ವಾರ್ಧದಲ್ಲಿ; 2ನೆಯ ಸೂರ್ಯವರ್ಮ (1113-1150) ತನ್ನ ರಾಜಧಾನಿಯಾಗಿದ್ದ ಯಶೋಧರಪುರದ ಪಕ್ಕದಲ್ಲೇ ಈ ಅಗಾಧ, ಅನುಪಮ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ . ಇದೇ ಕಾಲ ಘಟ್ಟದಲ್ಲೇ ಪ್ಯಾರಿಸ್ಸಿನ ನೊತ್ರೆದಾಂ, ಷಾರ್‍ಟ್ರೆ ಮತ್ತು ಇಂಗ್ಲೆಂಡಿನ ಈಲೀ ಹಾಗು ಲಿಂಕನ್ ಆರಾಧನಾ ಮಂದಿರ (ಕೆಥೆಡ್ರಲ್)ಗಳೂ ನಿರ್ಮಾಣವಾಗಿವೆ ಎಂಬುದು ಕುತೂಹಲಕಾರಿ ವಿಷಯ. ಆದರೆ ವೈಶಾಲ್ಯದಲ್ಲಿ ಅವುಗಳು ‘ಆಂಗ್‌ಕರ್ ವಾಟ್’ ವನ್ನು ಎಂದಿಗೂ ಸರಿಗಟ್ಟಲಾರವು.

ಈ ದೇವಸ್ಥಾನದಲ್ಲಿ ಇರುವ ವಿಷ್ಣುವಿನ ವಿಗ್ರಹವು ಭಕ್ತಿಯನ್ನ ಮೂಡಿಸುತ್ತದೆ, ದೇವಾಲಯದ ಗೋಡೆಗಳಲ್ಲಿ ರಾಮನಯನ, ಮಹಾಭಾರತದ ವೃತ್ತಗಳನ್ನ ಕಲ್ಲಿನಲ್ಲಿ ಕೆತ್ತಲಾಗಿದೆ. 16 ನೇ ಶತಮಾನದಲ್ಲಿ 7 ನೇ ಜಯವರ್ಮ ಬೌದ್ಧ ಧರ್ಮಕ್ಕೆ ಬದಲಾದ ಕಾರಣ ಇಲ್ಲಿ ಬುದ್ಧನ ವಿಗ್ರಹಗಳನ್ನ್ನ ನೆಲೆಸಿದರು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top