fbpx
ಸಮಾಚಾರ

ಅಭ್ಯಾಸದ ವೇಳೆ ಕೊಹ್ಲಿಗೆ ಗಂಭೀರ ಗಾಯ- ಟೀಮ್ ಇಂಡಿಯಾಗೆ ದೊಡ್ಡ ಆಘಾತ.

ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಭಾರತ ತಂಡಕ್ಕೆ ಅಭಿಯಾನ ಆರಂಭವಾಗುವುದಕ್ಕೂ ಮುನ್ನವೇ ದೊಡ್ಡ ಆಘಾತ ಎದುರಾಗಿದೆ. ಭಾರತ ಕ್ರಿಕೆಟ್​ ತಂಡವನ್ನು ಗಾಯದ ಸಮಸ್ಯೆ ಕಾಡಲಾರಂಭಿಸಿದೆ. ಬುಧವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವಾಗ ತಂಡದ ನಾಯಕ ವಿರಾಟ್​ ಕೊಹ್ಲಿ ಬಲಗೈ ಹೆಬ್ಬರಳಿಗೆ ಗಂಭೀರ ಗಾಯವಾಗಿದೆ.

ಶನಿವಾರ ಭಾರತ ತಂಡ ಕಠಿಣ ಅಭ್ಯಾಸದಲ್ಲಿ ತೊಡಗಿತ್ತು. ಅಭ್ಯಾಸದ ವೇಳೆ ಕ್ಯಾಪ್ಟನ್ ಕೊಹ್ಲಿ ಅವರ ಬಲಗೈ ಹೆಬ್ಬರಳಿಗೆ ಗಾಯವಾಗಿದ್ದಾಗಿ ಹೇಳಲಾಗಿದೆ. ತಕ್ಷಣವೇ ಕೊಹ್ಲಿ ನೆರವಿಗೆ ಧಾವಿಸಿದ ಭಾರತ ತಂಡದ ಫಿಜಿಯೋ ಪ್ಯಾಟ್ರಿಕ್​ ಫರ್ಹಾತ್​ ಮೊದಲಿಗೆ ಮ್ಯಾಜಿಕ್​ ಸ್ಪ್ರೇ ಹಾಕಿ ಹೆಬ್ಬರಳಿಗೆ ಟೇಪ್​ ಸುತ್ತಿದ್ದಾರೆ.

ನಂತರ ಬಳಿಕ ಕೊಹ್ಲಿ ಐಸ್ ನೀರು ತುಂಬಿದ ಸಣ್ಣ ಬಟ್ಟಲಿನೊಳಗೆ ಹೆಬ್ಬರಳು ಅದ್ದಿಕೊಂಡು ಡ್ರೆಸ್ಸಿಂಗ್​ ರೂಂ ಕಡೆ ನಡೆದು ಹೋಗಿದ್ದು ಕಂಡಬಂದಿದೆ. ಇದನ್ನು ಗಮನಿಸಿದಾಗ ಕೊಹ್ಲಿ ಅವರ ಹೆಬ್ಬರಳಿಗೆ ಗಂಭೀರ ಗಾಯವಾಗಿರುವುದು ಸ್ಪಷ್ಟವಾಗುತ್ತದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top