fbpx
ಸಮಾಚಾರ

ಮಹಾ ವಿಷ್ಣುವಿನ 6ನೇ ಅವತಾರವೆಂದುಹೇಳುವ ಪರಶುರಾಮರ ಹುಟ್ಟಿನ ಹಿಂದೆ ಇರುವ ರಹಸ್ಯ ಹಾಗೂ ಆಶ್ಚರ್ಯಕರ ಸತ್ಯ ಸಂಗತಿಗಳ ಬಗ್ಗೆ ತಿಳ್ಕೊಳ್ಳಿ

ಪರಶುರಾಮನ ಬಗ್ಗೆ ನಿಮಗೆ ತಿಳಿಯದೇ ಇರುವ ಅಸಕ್ತಿಕರವಾದ ವಿಷಯಗಳು.
ಶ್ರೀಮನ್ನಾ ನಾರಾಯಣ, ಮಹಾ ವಿಷ್ಣುವಿನ ಆರನೇ ಅವತಾರವೆಂದು ಖ್ಯಾತಿಯಾಗಿರುವ ಮಹಾಋಷಿ ಪರಶುರಾಮರು ಆಶ್ರಮದ ಬ್ರಾಹ್ಮಣ ಸಪ್ತ ಋಷಿಯಾದ ಜಮದಗ್ನಿ ಮತ್ತು ಶ್ರೀ ರೇಣುಕಾ ದಂಪತಿಗಳ ಪುತ್ರರಾಗಿದ್ದಾರೆ. ತ್ರೇತಾಯುಗದಲ್ಲಿ ಜನಿಸಿದ್ದರು, ಇಂದೂ ಧರ್ಮದಲ್ಲಿ ಕರೆಯಲಾದ 7 ದೇವತೆಯರಲ್ಲಿ ಒಬ್ಬರು ಎನಿಸಿದ್ದಾರೆ.ಹುಟ್ಟುವಾಗಲೇ ಬ್ರಾಹ್ಮಣರಾಗಿದ್ದರೂ ಕೂಡ ಕ್ಷತ್ರಿಯರಾದ ಇವರ ಅಕ್ರಮ ಶೀಲತೆಯು ಪರಶುರಾಮರಲ್ಲಿ ಇರುವುದರಿಂದಲೇ ಬ್ರಹ್ಮ ಕ್ಷತ್ರಿಯ ಎಂಬ ಹೆಸರನ್ನು ಕೂಡ ಪರಶುರಾಮರು ಪಡೆದುಕೊಂಡಿದ್ದಾರೆ. ಯುದ್ಧ, ವಿದ್ಯಾ ಪರಿಣಿತನಾಗಿದ್ದ ಪರಶುರಾಮ ದುಷ್ಟ ಯೋಧರಿಗೆ ಸಿಂಹಸ್ವಪ್ನವಾಗಿದ್ದನು. ಪರಶುರಾಮ ಎಂಬುದು ಕೊಡಲಿಯ ಅರ್ಥ. ಕೊಡಲಿಯನ್ನು ಹೊಂದಿರುವ ರಾಮ ಎಂಬ ಹೆಸರಿನಿಂದ ಪರಶುರಾಮ ಎಂದು ಪ್ರಖ್ಯಾತರಾಗಿದ್ದರು.ಸಹೋದರರ ಮತ್ತು ತಾಯಿಯ ಶಿರವನ್ನೇ ಕಡಿದ ಪರಶುರಾಮ ಪಿತೃಭಕ್ತಿಗೆ ಎಲ್ಲೆಯುಂಟೇ, ತಮ್ಮ ದಾರಿಗೆ ಅಡ್ಡ ಬರುವ ಕ್ಷತ್ರಿಯ ರಾಜರನ್ನು ಕೊಲ್ಲುತ್ತಾ ಬಂದನು. ಪರಶುರಾಮನು ಏಕೈಕ ರಾಜನನ್ನು ಕೂಡ ಬಿಟ್ಟಿಲ್ಲ ಎಂಬುದಾಗಿ ಪುರಾಣಗಳು ಸಾರುತ್ತವೆ. ಇದರಿಂದಾಗಿ ಬ್ರಾಹ್ಮಣ ಜೀವನ ಶೈಲಿಯನ್ನು ಅವರು ಉಲ್ಲಂಘಿಸಿದ್ದಾರೆಂದು ಅವರು ಕೊಲೆಯಿಂದ ಕಳಂಕಿತರಾಗಿದ್ದಾರೆ ಎಂದು ಬ್ರಾಹ್ಮಣರು ಅವರನ್ನು ದೂರವಿರಿಸಿದ್ದರು.

 

 

ಇಂದೂ ಪುರಾಣದಲ್ಲಿ ಪರಶುರಾಮರನ್ನು ಕುರಿತು ಇನ್ನಷ್ಟು ಸತ್ಯ ಸಂಗತಿಗಳು ಮರೆಯಾಗಿದ್ದು, ಅವುಗಳನ್ನು ನಾವು ಇಂದು ತಿಳಿದುಕೊಳ್ಳೋಣ.
ಪರಶುರಾಮನ ಜನ್ಮಸ್ಥಳ ರೇಣುಕಾ ತೀರ್ಥವೆಂದು ಹೇಳಲಾಗುತ್ತದೆ. ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿಯು ನಡೆಯಿತು ಎಂದು ತಿಳಿದುಬರುತ್ತದೆ. ಅವರ ತಂದೆ ಋಷಿ ಜಮದಗ್ನಿ ಬ್ರಹ್ಮದೇವರ ನೇರ ತಲೆಮಾರಿನವರಾಗಿದ್ದರು ಎಂದು ತಿಳಿಯುತ್ತದೆ. ಇವರ ಜನನಕ್ಕೂ ಮುನ್ನ ಇವರ ಜನ್ಮದಾತರು ಶಿವನ ಅನುಗ್ರಹವನ್ನು ಪಡೆದಿದ್ದರು, ಇದರಿಂದಾಗಿ ವಿಷ್ಣುವಿನ ಆರನೇ ಅವತಾರವಾಗಿ ದಂಪತಿಗಳಿಗೆ ಐದನೇ ಪುತ್ರನಾಗಿ ಜನಿಸಿದ ಪರಶುರಾಮ.ಆದ್ದರಿಂದ ಜನ್ಮ ಸಮಯದಲ್ಲಿ ಪರಶುರಾಮನಿಗೆ ರಾಮಭದ್ರ ಎಂಬ ಹೆಸರನ್ನು ಇಟ್ಟಿದ್ದರು.

ಸಣ್ಣ ವಯಸ್ಸಿನಲ್ಲೇ ಪರಶುರಾಮನಿಗೆ ಶಸ್ತ್ರಾಸ್ತ್ರಗಳ ಮೇಲೆ ಆಸಕ್ತಿ ಇತ್ತು. ಶಿವನನ್ನು ಒಲಿಸಿಕೊಂಡು ಪರಶು ಅಸ್ತ್ರವನ್ನು ಪಡೆಯಲು ಪರಶುರಾಮನು ಕಠಿಣ ತಪಸ್ಸನ್ನು ಆಚರಿಸುತ್ತಾನೆ. ಪರಶುರಾಮನ ಭಕ್ತಿಗೆ ಮೆಚ್ಚಿ ಪವಿತ್ರವಾದ ಆಯುಧವಾದ ಕೊಡಲಿಯನ್ನು ಅನುಗ್ರಹಿಸುತ್ತಾನೆ. ಆಯುದಕ್ಕೂ ತನ್ನನ್ನು ಯೋಗ್ಯರನ್ನಾಗಿಸಿದ ನಂತರವೇ ಶಿವನು ತಾನಾಗಿಯೇ ಪರಶುರಾಮನಿಗೆ ಆಧ್ಯಾತ್ಮಿಕ ಗುರುವಾಗುತ್ತಾನೆ. ಪವಿತ್ರ ಆಯುಧವನ್ನು ಸ್ವೀಕರಿಸಿದ ನಂತರ ಇವನಿಗೆ ಪರಶುರಾಮ ಎನ್ನುವ ಹೆಸರು ಬರುತ್ತದೆ. ಪರಶುರಾಮರ ಯುದ್ಧ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಅರಿಯುವುದಕ್ಕಾಗಿ ಶಿವನು ಅವನಿಗೆ ಸವಾಲು ಒಡ್ಡುತ್ತಾನೆ. ಗುರು ಶಿಷ್ಯರ ನಡುವೆ ಈ ಯುದ್ಧ 21 ದಿನಗಳವರೆಗೆ ನಡೆಯಿತು ಎಂದು ತಿಳಿದು ಬರುತ್ತದೆ.

 

 

ಯುದ್ಧದ ಸಂದರ್ಭದಲ್ಲಿ ಯುದ್ದ ಮಾಡುತ್ತಿರುವಾಗ ಸಾಕ್ಷತ್ ಶಿವ ಎನ್ನುವುದನ್ನು ಅರಿಯದೇ ಪರಶುರಾಮನು ಶಿವನ ಹಣೆಗೆ ಬಡಿಯುತ್ತಾನೆ . ಶಿಷ್ಯನ ಯುದ್ಧ ಕಲೆಯಿಂದ ಸಂಪ್ರೀತನಾದ ಶಿವನು ತನ್ನ ಹಣೆಗೆ ಉಂಟಾದ ಗಾಯವನ್ನು ಒಂದು ಕೈಯಿಂದ ಒತ್ತಿಕೊಂಡು ಯುದ್ಧದ ಕಲೆಯ ಕುರುಹನ್ನಾಗಿ ಅದನ್ನು ಇರಿಸಿಕೊಳ್ಳುತ್ತಾರೆ. ಆದ್ದರಿಂದ ಪರಶುರಾಮನಿಗೆ ಕಾಂದ ಪುರುಷ ಎನ್ನುವ ಹೆಸರು ಕೂಡ ಇದೆಯಂತೆ. ಪರಶುರಾಮನ ತಾಯಿ ರೇಣುಕಾ ಮಾತೆ ಮಹಾನ್ ಪತಿವ್ರತೆ ಎನ್ನಿಸಿಕೊಂಡವಳು. ಆಕೆಯ ಶಕ್ತಿ ಎಷ್ಟಿತ್ತೆಂದರೆ ಸುಡದೆ ಇರುವ ಹಸಿ ಜೇಡಿ ಮಣ್ಣಿನ ಮಡಿಕೆಯಿಂದ ಆಕೆ ನೀರನ್ನು ತುಂಬಿಸಿಕೊಂಡು ತರುವ ಶಕ್ತಿಯನ್ನು ಪಡೆದುಕೊಂಡಿದ್ದಳು. ಆದರೆ ದುರಾದೃಷ್ಟವಶಾತ್ ಮಡಿಕೆಗೆ ನೀರನ್ನು ತುಂಬಿಸಿ ಕೊಳ್ಳುತ್ತಿರುವಾಗ ಆಕಾಶದಲ್ಲಿ ಹಾದು ಹೋಗುತ್ತಿರುವ ಗಂಧರ್ವರನ್ನು ನೋಡಿದಾಗ ಆ ಕ್ಷಣ ಆಕೆಯ ಮನಸ್ಸಿನಲ್ಲಿ ಬಯಕೆ ತುಂಬಿಕೊಂಡಿತ್ತು ಅದರ ಪರಿಣಾಮವಾಗಿ ಮಡಿಕೆಯು ನೀರಿನಲ್ಲಿ ಕರಗಿ ಹೋಯಿತು.ಆಕೆಯ ಪತಿಯಾದ ಜಮದಗ್ನಿಯು ತನ್ನ ಮಂತ್ರ ಶಕ್ತಿಯಿಂದ ಈ ವಿಷಯವನ್ನು ತಿಳಿದುಕೊಂಡು ತಮ್ಮ ಪುತ್ರರ ಕೈಯಿಂದಲೇ ಆಕೆಯನ್ನು ವಧಿಸಲು ಹೇಳುತ್ತಾನೆ. ಆದರೆ ಆ ಕೆಲಸವನ್ನು ಕೇವಲ ಪರಶುರಾಮ ಮಾತ್ರ ಮಾಡುತ್ತಾನೆ. ನಂತರ ತಾಯಿ ಮತ್ತು ನಾಲ್ಕು ಜನ ಸಹೋದರರನ್ನು ತಂದೆಯಿಂದ ವರವಾಗಿ ಪಡೆದು ಕೊಳ್ಳುತ್ತಾನೆ ಪರಶುರಾಮ. ಮಗನ ವಿಧೇಯತೆಯನ್ನು ನೋಡಿ ಸಂಪ್ರೀತನಾದ ತಂದೆ ಜಮದಗ್ನಿಯು ಆ ಎರಡು ವರಗಳನ್ನು ಕೇಳುವಂತೆ ಹೇಳಿದಾಗ, ಪರಶುರಾಮ ತನ್ನ ತಾಯಿಯನ್ನು ಮತ್ತು ಸಹೋದರರನ್ನು ಸಜೀವವಾಗಲು ಕೇಳಿಕೊಳ್ಳುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top