fbpx
ಸಮಾಚಾರ

ವಿಶ್ವದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ‘ಫೇಸ್ ಬುಕ್’ ನಲ್ಲಿ ನಿಮ್ಮ ಪಾಸ್ವರ್ಡ್ ಎಷ್ಟು ಸುರಕ್ಷಿತ !

ವಿಶ್ವದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಸಂಸ್ಥೆ ‘ಫೇಸ್ ಬುಕ್’ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ.

ವಿಶ್ವಾದ್ಯಂತ ಮಿಲಿಯಗಟ್ಟಲೇ ಬಳಕೆದಾರರನ್ನು ಹೊಂದಿರುವ ಜಾಲತಾಣ ಸಂಸ್ಥೆ ಫೇಸ್ ಬುಕ್ ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದು ನೂರಾರು ಮಿಲಿಯನ್ ಬಳಕೆದಾರರ ಯೂಸರ್ ಪಾಸ್ ವರ್ಡ್ ಗಳು ಸುರಕ್ಷಿತವಾಗಿಲ್ಲ ಎಂಬ ಸುದ್ದಿ ಬಳಕೆದಾರರಲ್ಲಿ ಆತಂಕ ಸೃಷ್ಟಿಸಿದೆ.

ಫೇಸ್ ಬುಕ್ ಬಳಕೆದಾರರ ಪಾಸ್ ವರ್ಡ್ ಗಳನ್ನು ಸಂಸ್ಥೆ ‘plain text’ ನಲ್ಲಿ ಶೇಖರಿಸಿಟ್ಟಿದ್ದು, ಈ ಪಾಸ್ ವರ್ಡ್ ಗಳು ಸುಲಭವಾಗಿ ಸಂಸ್ಥೆಯ ಆಂತರಿಕ ಸಿಬ್ಬಂದಿಯ ಕೈಗೆಟುಕುವಂತಿವೆ ಎಂಬ ಆಘಾತಕಾರಿ ಸುದ್ದಿ, ಸಂಸ್ಥೆಯ ಭದ್ರತಾ ಪರಿಶೀಲನೆಯ ಸಂದರ್ಭದಲ್ಲಿ ಹೊರಬಿದ್ದಿದೆ. ಕೇವಲ ಫೇಸ್ ಬುಕ್ ಮಾತ್ರವಲ್ಲದೇ ‘ಇನ್ಸ್ಟಾಗ್ರಾಂ’ ಹಾಗೂ ‘ಫೇಸ್ ಬುಕ್ ಲೈಟ್’ ತಾಣಗಳಲ್ಲಿನ ಬಳಕೆದಾರರು ಈ ಪ್ರಮಾದಕ್ಕೆ ತುತ್ತಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಆಘಾತಕಾರಿ ಸುದ್ದಿಯ ಬೆನ್ನಲ್ಲೇ ಫೇಸ್ ಬುಕ್ ಸಂಸ್ಥೆಯ ಭದ್ರತಾ ವಿಭಾಗದ ಊಪಾಧ್ಯಕ್ಷರಾಗಿರುವ ‘ಪೆಡ್ರೊ ಕ್ಯಾನ್‌ಹುಟಿ’ ತಮ್ಮ ಬ್ಲಾಗ್ ನಲ್ಲಿ ಹೇಳಿಕೆಯೊಂದನ್ನು ಪ್ರಕಟಿಸಿದ್ದಾರೆ, “ಅಭದ್ರತೆಗೊಳಗಾಗಿರುವ ಬಳಕೆದಾರರ ಅಂಕಿ ಅಂಶಗಳನ್ನು ನಿಖರವಾಗಿ ಪ್ರಕಟಿಸಿಲ್ಲವಾದರೂ, ಬಳಕೆದಾರರು ಆತಂಕಕ್ಕೊಳಗಾಗುವ ಪ್ರಮೇಯವೇ ಇಲ್ಲ. ಬಳಕೆದಾರರ ಖಾತೆಗಳು ಸುರಕ್ಷಿತವಾಗಿವೆ, ಪಾಸ್ ವರ್ಡ್ ಗಳು ಸಿಬ್ಬಂದಿಗಳ ಕೈಗೆಟುಕುವಂತಿದ್ದರೂ ಈ ವರೆಗೇ ಅಂತಹ ಯಾವುದೇ ಪ್ರಮಾದವೂ ಘಟಿಸಿಲ್ಲ ಎಂಬುದು ತನಿಖೆಯ ಮೂಲಕ ತಿಳಿದು ಬಂದಿದೆ ಎಂದಿರುವ ಪೆಡ್ರೊ, ಯಾರಾದರೂ ಅಕ್ರಮವಾಗಿ ಬೇರೆಯವರ ಖಾತೆಯನ್ನು ತೆರೆಯಲು ಪ್ರಯತ್ನಿಸಿದರೆ ತಕ್ಷಣವೇ ಬಳಕೆದಾರರಿಗೆ ಮಾಹಿತಿ ರವಾನೆಯಾಗುವಂತೆ ಮುಂದಿನ ದಿನಗಳಲ್ಲಿ ಭದ್ರತೆ ಕ್ರಮ ಕೈಗೊಳ್ಳಲಾಗುವುದು ಇದರ ಜೊತೆಗೆ ಫೇಸ್ ಬುಕ್, ಇನ್ಸ್ಟಾಗ್ರಾಂ ನ ಬಹುತೇಕ ಬಳಕೆದಾರರು ಸುಲಭವಾದ ಪಾಸ್ ವರ್ಡ್ ಗಳನ್ನು ಬಳಸುವ ಮೂಲಕ ಸೈಬರ್ ದಾಳಿ ಹಾಗೂ ಹ್ಯಾಕರ್ ಗಳ ದಾಳಕ್ಕೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ತಮ್ಮ ಖಾತೆಗಳ ಸುರಕ್ಷತೆಗಾಗಿ 2 ಸ್ಟೆಪ್ ವೆರಿಫಿಕೇಶನ್ ಬಳಸಿ ತಮ್ಮ ಖಾತೆಗಳನ್ನು ಮತ್ತಷ್ಟು ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಕಿವಿ ಮಾತು ಹೇಳಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ 29 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಖಾತೆಗಳನ್ನು ಹ್ಯಾಕರ್ ಗಳು ಅಕ್ರಮವಾಗಿ ಪ್ರವೇಶಿಸಿ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ದೋಚಿದ್ದು ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಜಾಲತಾಣ ಲೋಕದ ದೈತ್ಯ ಸಂಸ್ಥೆ ಎನ್ನಿಸಿಕೊಂಡಿರುವ ಟ್ವಿಟ್ಟರ್ ನ 330 ಮಿಲಿಯನ್ ಬಳಕೆದಾರರು ಕೂಡ ಈ ರೀತಿಯ ಸೈಬರ್ ದಾಳಿಗೆ ತುತ್ತಾಗಿದ್ದನ್ನು, ಬಳಕೆದಾರ ಖಾತೆಗಳಿಗೆ ಭದ್ರತೆ ಒದಗಿಸುವಲ್ಲಿ ದೈತ್ಯ ಸಂಸ್ಥೆಗಳು ವಿಫಲವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top