fbpx
ಸಮಾಚಾರ

ದುರಹಂಕಾರಿ ನಿಜಾಮ ಬಿಸಾಡಿದ ಚಪ್ಪಲಿ ಮುಂದೆ ಬನಾರಸ್ ಹಿಂದೂ ಯುನಿವರ್ಸಿಟಿಯ ಹುಟ್ಟಿಗೆ ಕಾರಣ ಆಯ್ತು ಅಂತ ತಿಳಿದ್ರೆ ಆಶ್ಚರ್ಯ ಆಗ್ದೇ ಇರಲ್ಲ , ಏನಿದು ಚಪ್ಪಲಿಯ ರಹಸ್ಯ ತಿಳ್ಕೊಳ್ಳಿ

ಮದನ್ ಮೋಹನ್ ಮಾಳವೀಯ  ಯಾರು ಎಂದು ನಿಮಗೆ ಗೊತ್ತಾ ? ಅವರಿಂದ ಜೀವನದ ಚಪ್ಪಲಿಯ ರಹಸ್ಯವನ್ನು ತಿಳಿದುಕೊಳ್ಳಿ.

 

 

ಭಾರತ ದೇಶದ ಮೊಟ್ಟ ಮೊದಲ ಪ್ರೈವೇಟ್ ಯೂನಿವರ್ಸಿಟಿ ಯಾವುದು ? ಬನಾರಸ್ ಹಿಂದೂ ಯುನಿವರ್ಸಿಟಿ. ಅದನ್ನು ಸ್ಥಾಪನೆ ಮಾಡಿದ್ದು ಯಾರು ? ಮದನ ಮೋಹನ್ ಮಾಳವೀಯ. ಅವರು ಈ ಯೂನಿವರ್ಸಿಟಿಯನ್ನು ಸಹಾಯಧನದಿಂದ ಕಟ್ಟಿಸಿದರು. ಅವರನ್ನು ತುಂಬಾ ಜನ ನೀನು ಮದನ ಮೋಹನ್ ಮಾಳವೀಯ ಅಲ್ಲ, ನೀನೊಬ್ಬ ದುಡ್ಡು ಮಾಡುವ ಯಂತ್ರ ಅಂತ  ಗೇಲಿ ಕೂಡ ಮಾಡುತ್ತಿದ್ದರು.

ಅಷ್ಟು ತಾಳ್ಮೆಯಿಂದ ಛಲದಿಂದ ಸಹಾಯಧನವನ್ನು ಸ್ವೀಕರಿಸುತ್ತಿದ್ದರು. ಈ ಕ್ರಮದಲ್ಲಿ ಅವರು ನಿಜಾಂ ನವಾಬರ ಹತ್ತಿರ ಹೋಗ್ತಾರೆ. ನಿಜಾಂ ತುಂಬಾ ಜಿಪುಣ ಮತ್ತು  ದುರಹಂಕಾರಿ ಕೂಡ. ನಿನಗೆ  ಎಷ್ಟು ಧೈರ್ಯ ಇಂದು ಯುನಿವರ್ಸಿಟಿ ಗೋಸ್ಕರ ನಿನಗೆ ನಾನು ಸಹಾಯ ಮಾಡಬೇಕಾ ? ಎಂದು ಹೇಳುತ್ತಾ ತನ್ನ ಚಪ್ಪಲಿಯನ್ನು ಅವರ ಕಡೆ ಕೋಪದಿಂದ ಎಸೆದು ಬಿಡ್ತಾರೆ. ಮದನ ಮೋಹನ್ ಮಾಳವೀಯ  ಅವರು ಒಂದು ಮಾತು ಕೂಡ ಮಾತನಾಡಲಿಲ್ಲ.

 

 

ಆ ಚಪ್ಪಲಿಯನ್ನು ಕಣ್ಣಿಗೆ ಒತ್ತಿಕೊಂಡು ಮಹಾಪ್ರಸಾದ ಅಂತ ಹೊರಗೆ ನಡೆದರು. ತುಂಬಾ  ಜನ ಸಂಧಣಿ ಇರುವ ಪ್ರದೇಶದಲ್ಲಿ ನಿಜಾಂ ಬಿಸಾಡಿದ ಚಪ್ಪಲಿಯನ್ನು ಮಾರಾಟಕ್ಕೆ ಇಡುತ್ತಾರೆ. ಆ ಚಪ್ಪಲಿಯನ್ನು ಖರೀದಿ ಮಾಡುವುದಕ್ಕೆ ತುಂಬಾ ಜನ ಸೇರುತ್ತಾರೆ. ನನಗೆ ಬೇಕು, ತನಗೆ ಬೇಕು ಅಂತ ಜನರು ಕೂಗಾಡ್ತಾರೆ .

ಆಗ ಆ ಚಪ್ಪಲಿ  ಹರಾಜು ಮಾಡಲಾಗುತ್ತೆ. ಈ ವಿಷಯ ಹೇಗೋ ನಿಜಾಂನ ಕಿವಿಗೆ ಬೀಳುತ್ತದೆ. ನಿಜಾಂನ ಚಪ್ಪಲಿ ಕಮ್ಮಿ ಬೆಲೆಗೆ ಮಾರಾಟವಾದರೆ ನಿಜಾಂಗೆ ಮರ್ಯಾದೆ ಹೋಗುತ್ತೆ. ಆ ಚಪ್ಪಲಿ ಮಾಳವೀಯ  ಕೈಗೆ ಹೇಗೆ ಬಂತು ಅಂತ ಗೊತ್ತಾದರೆ ನಿಜಾಂಗೆ ಗೌರವ  ಭಂಗ. ಆ ಚಪ್ಪಲಿಯನ್ನು ಯಾರಾದರೂ ಭಿಕ್ಷುಕ ಹಾಕಿಕೊಂಡರೆ ಅವಮಾನ. ಅದಕ್ಕೆ ನಿಜಾಮನ ರಾಜ ತಮ್ಮ ಸೇವಕರನ್ನು ಕರೆದು, ಎಷ್ಟೇ ಬೆಲೆಯಾದರೂ ಪರವಾಗಿಲ್ಲ, ನನ್ನ ಚಪ್ಪಲಿಯನ್ನು ತೆಗೆದುಕೊಂಡು ಬನ್ನಿ ಅಂತ ಹೇಳಿ ಕಳಿಸ್ತಾರೆ.

 

 

ಕೊನೆಗೆ ತಮ್ಮ ಚಪ್ಪಲಿಯನ್ನು ತಾವೇ ಖರೀದಿ ಮಾಡ್ತಾರೆ ನಿಜಾಂನ  ರಾಜ. ನಿಜ ಹೇಳಬೇಕು ಅಂದ್ರೆ ನಿಜಾಂನ ರಾಜ ತನ್ನ ಚಪ್ಪಲಿಯಿಂದ ತಾನೇ ಹೊಡೆದುಕೊಂಡ. ಮದನ ಮೋಹನ್ ಮಾಳವೀಯ ಅವರು ನಿಜಾಂ ನಂತರ ಕಟುಕನಿಂದ ಕೂಡ ಅಮೃತವನ್ನು ತೆಗೆಯಬಹುದು ಅಂತ ನಿರೂಪಿಸಿದ್ದಾರೆ.

ಜೀವನ ಕೂಡ  ನಿಜಾಂ ನವಾಬನ ರೀತಿಯೇ .ಅದು ಚಪ್ಪಲಿಯನ್ನು ಎಸೆಯುತ್ತೆ ,ಕಹಿಯನ್ನು ಸುರಿಸುತ್ತೇ. ನಾವು ಮಾಳವೀಯ  ರೀತಿ ಚಪ್ಪಲಿಯನ್ನು ಬಂಗಾರವಾಗಿ ಕಹಿಯನ್ನು ಅಮೃತವಾಗಿ ಬದಲಾಯಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇರುತ್ತೆ.

 

 

ಕೊನೆಯದಾಗಿ ನಮ್ಮ ದೇಶದ ಗೌರವದ ಮಾತಾದ  “ಸತ್ಯ ಮೇವ ಜಯತೆ ” ಎನ್ನುವ  ಪದವನ್ನು ಮೊಟ್ಟ ಮೊದಲು ಹೇಳಿದ್ದು ಮದನ್ ಮೋಹನ್ ಮಾಳವೀಯ ಅವರೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top