fbpx
ಸಮಾಚಾರ

ಮೇಘಾಲಯ ರಾಜ್ಯದ ವಿಶೇಷಗಳ ಬಗ್ಗೆ ತಿಳ್ಕೊಂಡ್ರೆ ಈ ಬೇಸಿಗೇಲಿ ಮಿಸ್ ಮಾಡ್ದೆ ಹೋಗಿ ಬರ್ತೀರಾ

ಮೇಘಾಲಯ ಭಾರತದ ಒಂದು ರಾಜ್ಯವಾಗಿದ್ದು ಈ ರಾಜ್ಯದ ಬಗ್ಗೆ ನಿಮಗೆ ಎಷ್ಟು  ಗೊತ್ತು.

 

ಮೇಘಾಲಯ ರಾಜ್ಯವು ಭಾರತದಲ್ಲಿನ ಒಂದು ಪ್ರಕೃತಿಯ ರಮಣೀಯ ಸೌಂದರ್ಯವನ್ನು ಹೊಂದಿರುವ ರಾಜ್ಯವಾಗಿದ. ಈ ಮೇಘಾಲಯ ರಾಜ್ಯವನ್ನು ಸುಂದರವಾದ ಕಾಡು, ಕಣಿವೆ, ಪರ್ವತ ಶ್ರೇಣಿಗಳು ಮತ್ತು  ಭೋರ್ಗರೆಯುವ ಜಲಪಾತಗಳನ್ನು ಹೊಂದಿರುವ  ಪುಟ್ಟ ನಾಡು. ಈ ನಾಡಿನ ವಿಸ್ತೀರ್ಣ 22,500 ಚದುರ ಕಿಲೋಮೀಟರ್ ಗಳು.

 

 

ದಟ್ಟವಾದ ಮೇಘಗಳು ಇಲ್ಲಿ ಆಲಯವನ್ನು ಕಟ್ಟಿಕೊಂಡು ಧಾರಾಕಾರವಾಗಿ ಮಳೆ ಸುರಿಯುವುದರಿಂದ ಈ ಪ್ರದೇಶಕ್ಕೆ ಮೇಘಾಲಯ ಎನ್ನುವ ಹೆಸರು ಬಂತು. ಮೇಘಾ ಎಂದರೆ ಮೋಡ ಎಂದರ್ಥ ಆಲಯ ಎಂದರೆ ನೆಲೆಸಿರುವ ಎಂದರ್ಥ ಅಂದರೆ ಮೋಡಗಳು ನೆಲೆಸಿರುವ ಸ್ಥಳಕ್ಕೆ ಮೇಘಾಲಯ ಎಂದು ಹೆಸರು.

ಇಲ್ಲಿನ ಪರ್ವತಗಳಲ್ಲಿ ಗುಪ್ತಗಾಮಿನಿಯಾಗಿ ನೂರಾರು ನದಿ, ತೊರೆ, ಹಳ್ಳ, ಕೊಳ್ಳ ಹರಿಯುವ ನದಿಗಳು, ಜಲಪಾತಗಳು ಧುಮ್ಮಿಕ್ಕುತ್ತವೆ. ನೆಲದೊಳಗೆ ಸರೋವರಗಳು ಅಡಗಿ ಕುಳಿತಿವೆ. ಇಲ್ಲಿನ ಸುಣ್ಣ ಮತ್ತು ಮರಳಿನ ಶಿಲೆಗಳಲ್ಲಿ ಸಾವಿರಾರು ಗುಹೆಗಳು ನಿರ್ಮಾಣಗೊಂಡಿವೆ.

ವರ್ಷಕ್ಕೆ ಸರಾಸರಿ 26,461 ಮಿಲಿ ಮೀಟರ್ನಷ್ಟು ಮಳೆ ಬೀಳುವ ಚಿರಾಪುಂಜಿ ಮತ್ತು ಮಾಸಿನ್ ರಮ್ ಇರುವುದು ಇದೇ ಪರ್ವತಗಳಲ್ಲಿ.

 

 

ಇದುವರೆಗೂ ಮೇಘಾಲಯವು ಸಾವಿರಕ್ಕಿಂತ ಹೆಚ್ಚಿನ ಗುಹೆಗಳನ್ನು ಹೊಂದಿದೆ. ಅವುಗಳಲ್ಲಿ ಸುಮಾರು 700 ಗುಹೆಗಳಲ್ಲಿ ಗುಹಾ ಸಂಶೋಧಕರು ಸಂಶೋಧನೆಯನ್ನು ನಡೆಸಿ ನಕ್ಷೆಗಳನ್ನು ಮತ್ತು ಇನ್ನಿತರ ವಿವರಗಳನ್ನು ಸಂಗ್ರಹಿಸಿದ್ದಾರೆ.

ದೇಶದಲ್ಲಿಯೇ ಉದ್ದವಾದ ಮೊದಲ ಇಪ್ಪತ್ತು ಗುಹೆಗಳಲ್ಲಿ , ಹದಿನೆಂಟು ಗುಹೆಗಳು ಮೇಘಾಲಯದಲ್ಲಿ ಇವೆ. ಅವುಗಳ ಉದ್ದ 20.20 ಕಿಲೋಮೀಟರ್ ಗಳಿಂದ 3.4 ಕಿಲೋಮೀಟರ್ ಗಳವರೆಗೆ ಮತ್ತು ಆಳ  317 ಮೀಟರ್ ನಿಂದ 111 ಮೀಟರ್ ಗಳವರೆಗೆ ಇದೆ.

ಗುಹೆಗಳು ಮಾನವನ ಇತಿಹಾಸದ ಮೊದಲ ನಾಗರಿಕ ತೊಟ್ಟಿಲುಗಳು. ಆದಿಮಾನವ ಐವತ್ತು ಲಕ್ಷ ವರ್ಷಗಳ ಹಿಂದೆ ಮರಗಳಿಂದ ಕೆಳಗಿಳಿದು ಬಂದು ಮೊದಲು ಆಶ್ರಯ ಪಡೆದಿದ್ದು ಗುಹೆಗಳಲ್ಲಿ.1830 ಮತ್ತು 1850ರ ಮಧ್ಯ ಚಿರಾಪುಂಜಿಯ ಸುತ್ತಲಿನ ಅನೇಕ ಗುಹೆಗಳನ್ನು ಬ್ರಿಟಿಷರು ಶೋಧಿಸಿದ್ದರು. ಇದೇ ಕಾಲದಲ್ಲಿ ಚಿರಾಪುಂಜಿ ಪ್ರದೇಶದಲ್ಲಿ ಧುಮ್ಮಿಕ್ಕುವ ಜಲಪಾತಗಳು ದಟ್ಟವಾದ ಕಾಡು ಪರ್ವತಗಳು ನಡುವೆ ಮಧ್ಯೆ ಕಣ್ಣಿಗೆ ಕಾಣದೆ ಅನಾಮಿಕವಾಗಿಯೇ ಉಳಿದಿರುವುದನ್ನು ಗಮನಿಸಿ ಸಂಶೋಧನೆ ನಡೆಸಿ ಕೆಲವು ನದಿಗಳು ಸುಣ್ಣದ ಶಿಲೆಗಳು  ಒಳಗಿನ ಮೂಲಕ ಭೂಗರ್ಭದಲ್ಲಿ ಹರಿದು ಬಾಂಗ್ಲಾದೇಶದ ಬಯಲುಗಳನ್ನು ಹರಿಯುವುದು ತಿಳಿಯಿತು.

 

 

ಅಮೆರಿಕ ಮತ್ತು ಯೂರೋಪ್ ದೇಶದ ಗುಹೆಯ ಸಂಶೋಧಕರು caving in the aboard of the clouds   ಎಂಬ ಸಂಸ್ಥೆಯನ್ನು ಸ್ಥಾಪಿಸಿ  1992ರಿಂದ ಪ್ರತಿವರ್ಷವೂ ಇಲ್ಲಿಗೆ ಬಂದು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಸಂಶೋಧನೆ ನಡೆಸಿ ಹೋಗುತ್ತಾರೆ. ಇಲ್ಲಿನ ಕೆಲವು ನದಿಗಳು ತಮ್ಮ ಹರಿವಿಗೆ ಅಡ್ಡ ಬರುವ ಬೆಟ್ಟಗಳನ್ನೆಲ್ಲ ಕೊರೆದು ಕರಗಿಸಿ ಗುಹೆಗಳನ್ನು ಕೊರೆದು ಹರಿಯುತ್ತಿವೆ. ಇಂತಹ ಕಡೆಗಳಲ್ಲೆಲ್ಲ ಪರ್ವತಗಳು ನದಿಗಳಾಗಿ ದಾರಿ ಮಾಡಿಕೊಟ್ಟು ಮೈಯೆಲ್ಲ (  ಬೆಟ್ಟಗಳ) ರಂಧ್ರಗಳನ್ನು ಮಾಡಿಕೊಂಡು ನಿಂತಿದೆ.

ಕೆಲವು ಗುಹೆಗಳು ಸುರಂಗಗಳಂತೆ ಇದ್ದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸೂರ್ಯನ ಬೆಳಕನ್ನು ನೋಡಬಹುದಾಗಿದೆ. ಕರ್ಲಿಂಗ್ ಎಂಬ ಗುಹೆಯಲ್ಲಿ ಇಪ್ಪತ್ತೈದು ಮೀಟರ್ ಅಗಲ 25 ಮೀಟರ್ ಎತ್ತರ  ಮತ್ತು 75 ಮೀಟರ್ ಗ್ಯಾಲರಿ ಇದ್ದು ಅದನ್ನು ಮೊಗಲ್ ಕೋಣೆ ಎಂದು ಹೆಸರಿಸಲಾಗಿದೆ. ಕ್ರೆಮ್ಲಿನ್ ಗುಹೆ 180 ಮೀಟರ್ ಉದ್ದವಿದ್ದು, ಅದರೊಳಗೆ ಸೂರ್ಯನ ಬೆಳಕು ಬಿದ್ದಾಗ ನೂರಾರು ಕ್ಯಾಂಡಲ್ ಹಚ್ಚಿದ ಚರ್ಚ್ ನಂತೆ ಕಂಗೊಳಿಸುತ್ತದೆ.

 

 

ಗುಹೆಗಳು ಒಳಗಿನ ಕಲೆ ಬಣ್ಣಿಸಲಾಗದಷ್ಟು ವೈವಿಧ್ಯಮಯವಾಗಿದೆ. ಇವೆಲ್ಲ ಸಾವಿರಾರು ವರ್ಷಗಳ ನೈಸರ್ಗಿಕ ಕುಸುರಿಯ ಕಲೆಯ ಫಲವೇ ಆಗಿದೆ. ಇಲ್ಲಿನ ಗುಹೆಗಳು ಅಗಲವಾಗಿದ್ದು, ಆಕಾರವಿಲ್ಲದ ಹಳ್ಳಗಳಂತೆ, ಛಾವಣಿ ಇಲ್ಲದ ಆಕಾಶದಂತೆ ಕಾಣುವ, ಸುರಂಗದಂತ ಆಳಕ್ಕೆ ಇಳಿದ ಗಣಿಗಳಂತೆ ಮೇಲೆ ಗುಮ್ಮಟಗಳು  ಮತ್ತು ಹತ್ತಾರು ಬಾಗಿಲುಗಳಿರುವ ಸಂಕೀರ್ಣ ಗುಹೆಯಂತೆ ರೂಪುಗೊಂಡಿವೆ. ಕೆಲವೊಮ್ಮೆ ಕಾಮನಬಿಲ್ಲು ಬಣ್ಣಗಳ ಕಲ್ಲು ಹೂವುಗಳ ಸೂರ್ಯನ ಬೆಳಕಿನ ಕಿಟಕಿಗಳನ್ನು ಹೊಂದಿರುವ ಗುಹೆಗಳು ನೋಡುಗರನ್ನು ಸೆಳೆಯುತ್ತವೆ.

ಮೇಘಾಲಯದಲ್ಲಿ ಇಷ್ಟೆಲ್ಲ ವೈವಿಧ್ಯಮಯವಾದ ಗುಹೆಗಳು ಇದ್ದರೂ ಸಹ ಭಾರತದ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಪ್ರವಾಸಿಗರನ್ನು ಆಕರ್ಷಿಸುವ ಯಾವ ಸೌಲಭ್ಯಗಳನ್ನು ಇದುವರೆಗೂ ಕಲ್ಪಿಸಿಲ್ಲ. ಈ ಗುಹೆಗಳಿಗೆ ಬಣ್ಣಬಣ್ಣದ ಬೆಳಕಿನ ದೀಪಗಳನ್ನು ಅಳವಡಿಸಿ, ಒಳ್ಳೆಯ ರಸ್ತೆಗಳನ್ನು ನಿರ್ಮಾಣ ಮಾಡಿ, ಪ್ರವಾಸಿಗರನ್ನು ಆಕರ್ಷಿಸಿದರೆ , ದೇಶದ ಪ್ರವಾಸೋದ್ಯಮದಲ್ಲಿ ದೊಡ್ಡ ಪವಾಡವನ್ನೇ ಈ ಮೇಘಾಲಯ ರಾಜ್ಯವು ಮಾಡುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top