fbpx
ಭವಿಷ್ಯ

ಜೂನ್ 08: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಶನಿವಾರ, ಜೂನ್ 08 2019
ಸೂರ್ಯೋದಯ : 5:52 am
ಸೂರ್ಯಾಸ್ತ: 6:44 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಜ್ಯೇಷ್ಠ
ಪಕ್ಷ : ಶುಕ್ಲಪಕ್ಷ
ತಿಥಿ :ಷಷ್ಠಿ
ನಕ್ಷತ್ರ :ಆಶ್ಲೇಷ 17:22
ಯೋಗ :ವ್ಯಾಘಾತ 17:26
ಕರಣ:ಕುಲವ 16:05 ತೈತುಲ 26:54

ಅಭಿಜಿತ್ ಮುಹುರ್ತ:11:53 am – 12:43 pm
ಅಮೃತಕಾಲ :3:52 pm – 5:22 pm

ರಾಹುಕಾಲ- 9:07 am – 10:43 am
ಯಮಗಂಡ ಕಾಲ-1:54 pm – 3:29 pm
ಗುಳಿಕ ಕಾಲ-5:56 am – 7:31 am

 

 

 

 

ಯಾರೊಡನೆಯೂ ಮುಖ ಗಂಟಿಕ್ಕಿ ಮಾತನಾಡದಿರಿ. ಮುಖಕ್ಕೆ ನಗುವೇ ಶೃಂಗಾರ. ಹಾಗಾಗಿ ಎದುರಾದ ಜನರನ್ನು ನಗುನಗುತ್ತಲೇ ಮಾತನಾಡಿಸಿ ಮತ್ತು ಮಾತಿನ ನಾಜುಕೂತನದಿಂದಲೇ ಪರರ ತಪ್ಪನ್ನು ಎತ್ತಿ ತೋರಿಸಿ.

 

ಯಾರದೋ ಮಾತು ಕೇಳಿ ಇನ್ಯಾರ ಬಗೆಗೋ ತಪ್ಪು ಕಲ್ಪನೆ ಹೊಂದದಿರಿ. ತಪ್ಪು ಕಲ್ಪನೆ ತಾಳಿದ ವ್ಯಕ್ತಿಯಿಂದಲೇ ನಿಮಗೆ ಹೆಚ್ಚಿನ ಸಹಾಯ ಸಿಗುವುದು. ಹಾಗಾಗಿ ಸುಖಾಸುಮ್ಮನೆ ಮತ್ತೊಬ್ಬರ ಗುಣಾವಗುಣಗಳನ್ನು ತುಲನೆ ಮಾಡದಿರಿ.

 

ಬಾಳಸಂಗಾತಿಯ ಆರೋಗ್ಯದಲ್ಲಿ ಏರು ಪೇರುಗಳುಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯ ಸದಸ್ಯರ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು.

 

ಹೊಸ ರೀತಿಯ ನಿಮ್ಮ ಕನಸನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ತರಲು ಹೇರಳ ಅವಕಾಶಗಳು ದೊರೆಯುವವು. ನಿಮಗೆ ಒದಗಿ ಬರುವ ಮಹತ್ತರ ಕಾಲಾವಕಾಶವನ್ನು ವ್ಯರ್ಥಮಾಡಿಕೊಳ್ಳದಿರಿ.

 

 

ಮನೆಯ ವಾತಾವರಣವನ್ನು ನೀವು ದೂರ ಮಾಡಿಕೊಳ್ಳದಿರಿ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮೊದಲು ಮನೆಯ ಸದಸ್ಯರ ವಿಶ್ವಾಸವನ್ನು ಪಡೆದುಕೊಂಡು ಹೊರ ಜಗತ್ತಿನಲ್ಲಿ ವ್ಯವಹರಿಸಿ.

 

 

ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚಾಗುವ ಸಂದರ್ಭ ಇದೆ. ದೂರದಿಂದ ನೆಂಟರು ದಿಢೀರನೆ ಮನೆಗೆ ಆಗಮಿಸುವ ಸಾಧ್ಯತೆ ಇದೆ. ಬಹುದಿನಗಳ ನಂತರ ಮನಸ್ಸಿನ ದುಃಖವನ್ನು ಪರರ ಮುಂದೆ ತೋಡಿಕೊಳ್ಳುವಿರಿ. ಇದರಿಂದ ಮನಸ್ಸು ಹಗುರ ಆಗುವುದು.

 

 

ಮಾತಿಗೆ ಮಾತು ಬೆಳೆದು ತೀವ್ರವಾದ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುವುದು. ಹಾಗಾಗಿ ಮಾತಿನಲ್ಲಿ ಸೋತು ಎದುರಾಳಿಯ ಹೃದಯವನ್ನು ಗೆಲ್ಲುವ ಚಾಕಚಕ್ಯತೆಯನ್ನು ತೋರಿ. ಶಾಂತಿಯಿಂದ ಕಾರ್ಯ ನಿರ್ವಹಿಸಿ.

 

 

ಸರ್ರನೆ ಮನಸ್ಸಿಗೆ ಬಂದಿದ್ದನ್ನು ಕಾರ್ಯಗತಗೊಳಿಸಬೇಡಿ. ಸದ್ಯದ ಪರಿಸ್ಥಿತಿಯಲ್ಲಿ ನೀವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಮಾತಿನಲ್ಲಿ ಹಿಡಿತವಿರಲಿ.

ಜನರು ನಿಮ್ಮನ್ನು ಹಿಂದಿನಿಂದ ಟೀಕಿಸುತ್ತಾರೆ ಎಂಬ ಪೂರ್ವಗ್ರಹಿಕೆ ಇಟ್ಟುಕೊಳ್ಳದೆ ಕಾರ್ಯ ಪ್ರವೃತ್ತರಾಗಿ. ಟೀಕಿಸುವ ಜನ ಯಾವಾಗಲೂ ಇರುತ್ತಾರೆ. ಅವರ ಟೀಕೆಯಲ್ಲಿನ ಧನಾತ್ಮಕ ಗುಣಗಳನ್ನು ಅಳವಡಿಸಿಕೊಂಡು ಅವರ ಬಾಯಿಗೆ ಬೀಗ ಹಾಕಿ.

 

 

ಸ್ವಾಭಿಮಾನ ಮತ್ತು ದುರಾಭಿಮಾನಗಳಿಗೆ ಕೂದಲೆಳೆ ಅಂತರ ಮಾತ್ರ. ನೀವು ಅತಿ ಚಾಣಾಕ್ಷ ಮತಿ ಎಂದು ಎಲ್ಲರೂ ಬಲ್ಲರು. ಆದರೆ ಅದೇ ನಿಮಗೆ ಅಹಂಕಾರವಾಗಬಾರದು. ಹಾಗಾಗಿ ಸಾರ್ವತ್ರಿಕವಾಗಿ ತಲೆಬಾಗಿ ನಡೆಯುವುದು ಕ್ಷೇಮ.

 

ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಹೋಗದು ಎಂಬ ಗಾದೆ ಮಾತಿನಂತೆ ನಿಮ್ಮ ವ್ಯವಹಾರದಲ್ಲಿನ ಕಿಂಚಿತ್‌ ಲೋಪವು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಾಧ್ಯತೆ ಇರುತ್ತದೆ. ಕುಲದೇವರ ಮೊರೆ ಹೋಗುವುದು ಒಳ್ಳೆಯದು.

 

ಮುಂದಿನ ದಿನಗಳ ಬಗ್ಗೆ ಮುಂದಾಲೋಚನೆ ಮಾಡಬಾರದು ಎಂಬುದೇನಿಲ್ಲ. ಆದರೆ ನಾಳೆಯ ಊಟವನ್ನು ಇಂದೇ ಮಾಡಿ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ಇಂದಿನ ಕಾರ್ಯಕ್ರಮವನ್ನು ಹೇಗೆ ಶಿಸ್ತುಬದ್ಧವಾಗಿ ಪೂರ್ಣಗೊಳಿಸಬಹುದು ಎಂಬುದರ ಬಗ್ಗೆ ಚಿಂತಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top