fbpx
ಸಮಾಚಾರ

ಅನಂತ ಪದ್ಮನಾಭ ದೇವಾಲಯಕ್ಕಿಂತಲೂ ಬೆಲೆಬಾಳುವ ನಿಧಿಯನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಅಹೋಬಿಲ ದೇವಸ್ಥಾನದ ನಿಗೂಢ ರಹಸ್ಯ !

ಅಹೋಬಿಲ ದೇವಸ್ಥಾನ ರಹಸ್ಯಕಾರಿ ವಿಚಾರಗಳು :

 

ಅನಂತ ಪದ್ಮನಾಭ ದೇವಾಲಯದಲ್ಲಿ ಅಪಾರ ಸಂಪತ್ತು ದೊರೆತ ಮೇಲೆ ಭಾರತದ ಅನೇಕ ದೇವಾಲಯಗಳಲ್ಲಿ ಅಪಾರವಾದ ಸಂಪತ್ತು ಇದೆ ಮತ್ತು ಅದನ್ನು ಶೋಧಿಸಿ ಹೊರತೆಗೆದು ಜನರ ಬೆಳವಣಿಗೆಗೆ ಬಳಸಬೇಕು ಎಂಬುದು ಕೆಲವರ ಅಭಿಪ್ರಾಯ.

 

 

ಹಾಗೇ ಅಪಾರವಾದ ಸಂಪತ್ತು ಇದೆ ಎಂದು ಊಹಿಸುವ ಒಂದು ದೇವಾಲಯ ಕರ್ನೂರ್ ಜಿಲ್ಲೆಯ ಸುಪ್ರಸಿದ್ಧ ಪುಣ್ಯಸ್ಥಳ ಅಹೋಬಿಲ ದೇವಸ್ಥಾನ ,ಪ್ರಸಿದ್ಧಿ ಹೊಂದಿರುವ 108 ವೈಷವ ದೇವಾಲಯಗಳಲ್ಲಿ ಈ ಅಹೋಬಿಲ ದೇವಸ್ಥಾನ ಕೂಡ ಒಂದು .೬ನೇ ಶತಮಾನದಲ್ಲಿ ಈ ದೇವಾಲಯವನ್ನು ಸ್ಥಾಪಿಸಿದರೆ ಎಂದು ಹೇಳಲು ಚಾರಿತ್ರಿಕ ಆಧಾರಗಳಿವೆ.

 

 

ಆಗಿನ ಚಕ್ರವತಿಯಾದ 7ನೇ ವಿಕ್ರಮಾದಿತ್ಯ ,ಪ್ರತಾಪ ರುದ್ರ ಲಕ್ಷ್ಮಿ ನರಸಿಂಹ ಸ್ವಾಮಿಯ ದರ್ಶನ ಮಾಡಿಕೊಂಡು ತುಂಬಾ ಬೆಲೆ ಬಾಳುವಂತ ಚಿನ್ನ, ವಜ್ರ-ವೈಡೂರ್ಯಗಳನ್ನ ಕಾಣಿಕೆಯಾಗಿ ಸಮರ್ಪಿಸುತ್ತಿದ್ದರು ಎಂದು ಅಲ್ಲಿನ ಶಾಸನದಿಂದ ಗೊತ್ತಾಗುತ್ತದೆ.

ಈ ದೇವಾಲಯದಲ್ಲಿ ಅಪಾರವಾದ ಸಂಪತ್ತು ಇದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

 

 

 

13ನೇ ಶತಮಾನದಲ್ಲಿ ಅಹೋಬಿಲ ದೇವಸ್ಥಾನದ ಮೇಲೆ ಮುಸ್ಲಿಂರಾಜನೊಬ್ಬ ದಂಡಯಾತ್ರೆಗೆ ಬರುತ್ತಾನೆಂದು ಗೊತ್ತಾದ ನಂತರ 7ನೇ ಪೀಠಾಧಿಪತಿ ಈ ದೇವಾಲಯದ ಅಪಾರ ಸಂಪತ್ತು ತೆಗೆದುಕೊಂಡು ಬಿಲದ ಒಳಗೆ ಹೋಗಿ ಬಾಗಿಲು ಹಾಕಿಕೊಂಡನೆಂದು ,ಆ ದ್ವಾರವನ್ನು ತೆಗೆದರೆ ಸಂಪತ್ತು ದೊರೆಯುವುದೆಂದು ಹೇಳುತ್ತಾರೆ .ಈಗ ಆ ಸಂಪತ್ತು ನರಸಿಂಹ ಸ್ವಾಮಿಯ ಮೂಲ ವಿಗ್ರಹದ 7 ಹೆಜ್ಜೆಯ ದೂರದಲ್ಲಿದೆ .

 

 

 

ಆ ಬಿಲದ ದ್ವಾರವನ್ನು ತೆಗೆದರೆ ತುಂಬಾ ಬೆಲೆಬಾಳುವ ಸಂಪತ್ತು ಸಿಗುತ್ತದೆ.ಮತ್ತು ಅಲ್ಲಿನ ಅರ್ಚಕರು ಹೇಳುವಂತೆ 7ನೇ ಪೀಠಾಧಿಪತಿ ಇಲ್ಲಿ ಸಂಪತ್ತಿನ ಜೊತೆ ಜೀವಸಮಾಧಿಯಾದನಂತೆ ,ಇಲ್ಲಿ ಮಾತ್ರವಲ್ಲದೆ ಶ್ರೀಶೈಲ ,ವೀರ ಭದ್ರೇಶ್ವರ ದೇವಾಲಯ ಮತ್ತು ಭೀಮೇಶ್ವರ ದೇವಾಲಯಗಳನ್ನೂ ಕೂಡ ನಿಧಿ ,ಸಂಪತ್ತು ಇದೆ ಎಂದು ಸಂಶೋಧನೆಗಳು ನಡೆಯುತ್ತಿದೆ.

 

 

ಅಹೋಬಿಲ ದೇವಸ್ಥಾನದ ಆ ದ್ವಾರವನ್ನು ತೆಗೆಯುವ ಶಕ್ತಿ ಯಾರಿಗೂ ಇಲ್ಲವಂತೆ ಮತ್ತು ಆ ಬಿಲದ ಲಕ್ಷ್ಮಿ ನರಸಿಂಹ ಸ್ವಾಮಿಯ ಆಭರಣಗಳನ್ನ ತೆಗೆಯುವ ಅಧಿಕಾರ 48ನೇ ಪೀಠಾಧಿಪತಿಗೆ ಮಾತ್ರ ಸಾಧ್ಯ ಎಂದು ತಾಳಪತ್ರದಲ್ಲಿ ಬರೆದಿದೆ ಅಂತೆ.

 

 

ಈ ಹಿಂದೆ ಈ ಬಿಲವನ್ನು ತೆರೆಯಲು ಪ್ರಯತ್ನ ಮಾಡಿದರಂತೆ ,ಬಿಲಕ್ಕೆ ರಂಧ್ರ ಮಾಡಿ ಮೊದಲು ಆ ನಿಧಿಯನ್ನು ಕಾಪಾಡುತ್ತಿರುವ ವಿಷಜಂತುಗಳನ್ನ ಓಡಿಸಲು ಪ್ರಯತ್ನ ನಡೆಸಿದ್ದಾರೆ ಆದರೆ ಎಲ್ಲ ಆಕಸ್ಮಾತ್ ಆಗಿ ಮರಣ ಹೊಂದಿದ್ದಾರೆ ಈ ಸುದ್ದಿ ದೊಡ್ಡ ಸಂಚಲನವನೇ ಸೃಷ್ಟಿಸಿತಂತೆ ನಂತರ ಯಾರು ಆ ಬಿಲ ತೆಗೆಯುವ ಸಾಹಸ ಮಾಡಲಿಲ್ಲವಂತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top