fbpx
ಸಮಾಚಾರ

ಹೊಸ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ ಉಪೇಂದ್ರ!

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ನಟನೆಗಿಂತ ನಿರ್ದೇಶಕರಾಗಿಯೇ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ ಎನ್ನಬಹುದು. ಏಕೆಂದರೆ, ಉಪೇಂದ್ರ ಅವರಿಗೆ ಸಾರ್ವಜನಿಕರು, ಸಿನಿಮಾ ಪ್ರೇಕ್ಷಕರು ಹೆಚ್ಚಾಗಿ ಅವರ ನಿರ್ದೇಶನದ ಸಿನಿಮಾ ಯಾವಾಗ ಬರುತ್ತದೆ ಎಂದೇ ಕೇಳುತ್ತಾರೆ. ಅದಿರಲಿ, ಮಾಧ್ಯಮದವರೂ ಸಹ ಉಪೇಂದ್ರ ಅವರನ್ನು ಹೆಚ್ಚಾಗಿ ಕೇಳುವ ಪ್ರಶ್ನೆ ಅವರ ನಿರ್ದೇಶನದ ಮುಂದಿನ ಸಿನಿಮಾ ಯಾವುದು ಎಂಬುದೇ ಆಗಿದೆ.

ಹೌದು.. ಅಭಿಮಾನಿಗಳ ಬಹು ದಿನಗಳ ನಿರೀಕ್ಷೆಯಂತೆ ರಿಯಲ್ ಸ್ಚಾರ್ ಉಪೇಂದ್ರ ಹೊಸ ಚಿತ್ರವೊಂದಕ್ಕೆ ನಿರ್ದೇಶನ ಮಾಡುತ್ತಿದ್ದು, ಈ ವಿಚಾರವನ್ನು ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ತಮ್ಮ ಬಹು ನಿರೀಕ್ಷಿತ ಐ ಲವ್ ಯೂ ಚಿತ್ರದ ತೆಲುಗು ಅವತರಣಿಕೆಯ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ಉಪೇಂದ್ರ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ. ”ಸಿನಿಮಾ ನಿರ್ದೇಶನ ಮಾಡುವುದೆಂದರೆ ನನಗೆ ಹೆಚ್ಚು ಖುಷಿ. ಮತ್ತೆ ನಾನು ಆ್ಯಕ್ಷನ್ ಕಟ್ ಹೇಳುತ್ತೇನೆ ಎಂದು ಉಪೇಂದ್ರ ಹೇಳಿದರು.

‘ಸಿನಿಮಾ ನಿರ್ದೇಶನ ಮಾಡುವುದೆಂದರೆ ನನಗೆ ಹೆಚ್ಚು ಖುಷಿ. ಕನ್ನಡ ಮತ್ತು ತೆಲುಗಿನಲ್ಲಿ‌ ಸಿನಿಮಾ ನಿರ್ದೇಶನ‌ ಮಾಡುವುದು ಖಚಿತ’ ಎಂದು ನಟ ಉಪೇಂದ್ರ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top