fbpx
ಸಮಾಚಾರ

BREAKING NEWS-ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ ಯುವರಾಜ್ ಸಿಂಗ್.

ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಟಗಾರ, 2007ರ ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಇಂದು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೊಷಿಸಿದ್ದಾರೆ.

37 ವರ್ಷದ ಯುವರಾಜ್ ಸಿಂಗ್ ಇತ್ತೀಚಿನ ಕೆಲ ವರ್ಷಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಮರಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ವಿಫಲರಾಗಿದ್ದರು. ಕೊನೆಯ ಹಂತದಲ್ಲಿ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗುವ ಭರವಸೆಯಲ್ಲಿದ್ದ ಯುವಿಗೆ ನಿರಾಸೆಯಾಗಿತ್ತು. ಈ ಎಲ್ಲಾ ಕಾರಣಗಳಿಂದ ಯುವಿ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಕ್ಯಾನ್ಸರ್​ನಿಂದ ಗುಣಮುಖರಾದ ಯುವರಾಜ್​ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಯುವರಾಜ್​ ಸಿಂಗ್​ ವಿದೇಶದಲ್ಲಿ ನಡೆಯುವ ಟಿ-20 ಲೀಗ್​ಗಳಲ್ಲಿ ಪಾಲ್ಗೊಳ್ಳುವ ಆಲೋಚನೆಯಲ್ಲಿದ್ದಾರೆ. ಅಲ್ಲಿ ಸಿಗುವ ಅವಕಾಶ ಬಳಸಿಕೊಂಡು ತಮ್ಮ ವೃತ್ತಿ​ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.

ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯುವಿ, ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ವಿಡಿಯೋ ಮೂಲಕ ಕ್ರಿಕೆಟ್ ನೆನಪುಗಳನ್ನು ಯುವಿ ಬಿಚ್ಚಿಟ್ಟಿದ್ದಾರೆ. “ನಾನೀಗ ವಿದಾಯ ಹೇಳುವ ಸಮಯ. ಅತ್ಯದ್ಭುತ ಪಯಣ ನನ್ನದು. ಆದರೆ ಈಗ ಅದನ್ನು ಅಂತಿಮಗೊಳಿಸುವ ಸಮಯ ಬಂದಿದೆ” ಎಂದು ತನ್ನ ವಿದಾಯ ಭಾಷಣದಲ್ಲಿ ಹೇಳಿದರು.

2000 ನೇ ಇಸವಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಯುವರಾಜ್ ಕೀನ್ಯ ಎದುರು ಮೊದಲ ಪಂದ್ಯವಾಡಿದರು. 304 ಏಕದಿನ ಪಂದ್ಯಗಳನ್ನು ಆಡಿರುವ ಯುವಿ 8701 ರನ್ ಕಲೆಹಾಕಿದ್ದಾರೆ. ಇದರಲ್ಲಿ 52 ಅರ್ಧಶತಕ ಹಾಗೂ 14 ಶತಕಗಳು ಸೇರಿವೆ. ಗರಿಷ್ಠ ಸ್ಖೋರ್ 150 ಆಗಿದೆ. ಜೊತೆಗೆ 111 ವಿಕೆಟ್​ಗಳನ್ನು ಪಡೆದಿದ್ದಾರೆ..

ಅಂತೆಯೇ 2003ರಲ್ಲಿ ಇಂಗ್ಲೆಂಡ್ ನಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಯುವಿ 40 ಟೆಸ್ಟ್ 1900 ರನ್ ಗಳಿಸಿದ್ದಾರೆ. ಟಿ- ಟ್ವೆಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದ್ದ ಯುವಿ 58 ಪಂದ್ಯಗಳಲ್ಲಿ 1177 ರನ್ ಗಳಿಸಿದ್ದಾರೆ. ಮೊದಲ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಬಾರಿಸಿ ವಿಶ್ವ ಪ್ರಸಿದ್ದರಾಗಿದ್ದರು.

ಕ್ಯಾನ್ಸರ್ ಜಯಿಸಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದ ಯುವಿ 2012ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದು. ಇನ್ನು 2014ರಲ್ಲಿ ಪದ್ಮಶ್ರೀ ಪ್ರಶಸ್ತಿ ಯುವಿಯನ್ನು ಅರಿಸಿ ಬಂದಿತ್ತು.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top