fbpx
ಸಮಾಚಾರ

ರಚಿತಾ ರಾಮ್ ಮೇಲೆ ಪ್ರಿಯಾಂಕಾ ಗರಂ: ಉಪ್ಪಿ ಪತ್ನಿಯ ಬೇಸರಕ್ಕೆ ಕಾರಣವೇನು?

ಉಪೇಂದ್ರ ನಟನೆಯ ‘ಐ ಲವ್​​ ಯು’ ಈಗ ವಿವಾದದ ಕೇಂದ್ರ ಬಿಂದುವಾಗಿದೆ.! ನಟಿ ರಚಿತಾ ರಾಮ್​ ವಿರುದ್ಧ ಉಪೇಂದ್ರ ಪತ್ನಿ ಪ್ರಿಯಾಂಕಾ ಸಖತ್​ ಗರಂ ಆಗಿದ್ದಾರೆ! ಅದಕ್ಕೆ ಕಾರಣ ‘ಐ ಲವ್​ ಯು’ ಚಿತ್ರದ ಹಾಡು. ಹೌದು ‘ಐ ಲವ್​ ಯು’ ಚಿತ್ರದ ‘ಮಾತನಾಡಿ ಮಾಯವಾದೆ’ ಹಾಡು ತುಂಬಾ ರೊಮ್ಯಾಂಟಿಕ್​ ಆಗಿದೆ. ಇದನ್ನು ನಿರ್ದೇಶನ ಮಾಡಿದ್ದು ಉಪೇಂದ್ರ ಎಂದು ರಚಿತಾ ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದರು. ಇದು ಪ್ರಿಯಾಂಕಾ ಕೋಪಕ್ಕೆ ಕಾರಣವಾಗಿದೆ.

ಹಾಡಿನ ಬಗ್ಗೆ ಉಪೇಂದ್ರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಗರಂ ಆಗಿದ್ದಾರೆ, ಹಾಡಿನಲ್ಲಿರುವ ಹಸಿಬಿಸಿ ದೃಶ್ಯಗಳಿಂದಾಗಿ ಕೆಟ್ಟ ಭಾವನೆ ಬರುತ್ತಿದೆ, ಜೊತೆಗೆ ರಚಿತಾ ರಾಮ್ ಅನಗತ್ಯವಾಗಿ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ, ಪ್ರತಿ ಸಂದರ್ಶನಲ್ಲೂ ಅವರು ಉಪೇಂದ್ರ ಹೆಸರನ್ನು ಮಧ್ಯಕ್ಕೆ ತರುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಹಾಡಿನ ಚಿತ್ರದ ನಿರ್ದೇಶನ ಮಾಡಿದ್ದು ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್. ಆದರೆ, ರಚಿತಾ ರಾಮ್​ ಹಾಡು ಉಪ್ಪೇಂದ್ರ ನಿರ್ದೇನ ಮಾಡಿದ್ದಾರೆ ಎನ್ನುತ್ತಿದ್ದಾರೆ

ಸಿನಿಮಾದಲ್ಲಿ ತಾವು ಯಾವ ರೀತಿಯ ಅಭಿನಯ ಮಾಡಿದ್ದಾರೆ ಎಂಬ ಬಗ್ಗೆ ರಚಿತಾ ಹೇಳಿಕೊಳ್ಳಲಿ, ಅದನ್ನು ಬಿಟ್ಟು ಎಲ್ಲದಕ್ಕೂ ಉಪೇಂದ್ರ ಅವರ ಹೆಸರನ್ನು ಏಕೆ ಹೇಳಬೇಕು ಎಂದು ಪ್ರಿಯಾಂಕಾ ಗರಂ ಆಗಿದ್ದಾರೆ, ಆಕೆಯೇನು ಸಿನಿಮಾ ಇಂಡಸ್ಟ್ರಿಗೆ ಹೊಸಬರಲ್ಲ, ನಿನ್ನೆ ಮೊನ್ನೆ ಸಿನಿಮಾ ಇಂಡಸ್ಚ್ರಿಗೆ ಬಂದವರಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಒಂದು ವೇಳೆ ರಚಿತಾಗೆ ಈ ಹಾಡಿದ ದೃಶ್ಯಗಳು ಇಷ್ಟವಾಗದೇ ಇದ್ದಲ್ಲಿ ಶೂಟಿಂಗ್ ಸಮಯದಲ್ಲೇ ಹೇಳಬೇಕಿತ್ತು. ಅದು ಬಿಟ್ಟು ವಿನಾಕಾರಣ ಉಪ್ಪಿ ಹೆಸರು ಎಳೆದು ತರುತ್ತಿರುವುದು ಯಾಕೆ? ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡು ಈಗ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿರುವುದು ಉಪೇಂದ್ರ ಅವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದಂತಾಗಿದೆ ಎಂದು ಪ್ರಿಯಾಂಕಾ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top