fbpx
ಸಮಾಚಾರ

ನಿವೃತ್ತಿ ಬಳಿಕ ಯುವಿಗೆ ಸ್ಟುವರ್ಟ್ ಬ್ರಾಡ್ ಹೇಳಿದ್ದೇನು?

ಟೀಂ ಇಂಡಿಯಾದ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರು ವಿಶ್ವಕಪ್ 2019ರ ಸಂದರ್ಭದಲ್ಲೇ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಎಡಗೈ ಸ್ಟೈಲಿಶ್ ಬ್ಯಾಟ್ಸ್ ಮನ್, ಬೌಲರ್, ಫೀಲ್ಡರ್ ಆಗಿ ಮಿಂಚಿದ್ದ ಯುವಿಗೆ ವಿಶ್ವ ಕ್ರಿಕೆಟ್ ನ ದಿಗ್ಗಜರು ಶುಭಹಾರೈಸಿದ್ದಾರೆ. ಅಂತೆಯೇ ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಕೂಡ ಯುವಿಗೆ ಶುಭಕೋರಿದ್ದಾರೆ.

 

 

View this post on Instagram

 

Enjoy retirement Legend @yuvisofficial 🙌🏻 🏏

A post shared by Stuart Broad (@stuartbroad8) on

 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯುವರಾಜ್ ಸಿಂಗ್ ವಿದಾಯ ಹೇಳುತ್ತಿದ್ದಂತೆ, ವೇಗಿ ಸ್ಟುವರ್ಟ್ ಬ್ರಾಡ್ ಶುಭಕೋರಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಸ್ಟುವರ್ಟ್ ಬ್ರಾಡ್ ” ಮಂದಿನ ದಿನಗಳನ್ನು ಆನಂದಿಸಿ ದಿಗ್ಗಜ” ಎಂದು ಶುಭಕೋರಿದ್ದಾರೆ. ಹಾಗೆಯೆ ತಾವು ಮತ್ತು ಯುವರಾಜ್ ಸಿಂಗ್ ಜೊತೆಗಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಅಂದಹಾಗೆ 2007ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್‌ ಬೋರ್ಡ್‌ ಬೌಲಿಂಗ್‌ನಲ್ಲಿ ಯುವರಾಜ್‌ ಸಿಂಗ್‌ 6 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಟಿ20ಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿದರು. ಪಂದ್ಯದ 19ನೇ ಓವರ್‌ನಲ್ಲಿ ಈ ಅಭೂತ ಪೂರ್ವ ಸಾಧನೆ ಮೂಡಿಬಂತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top