fbpx
ಸಮಾಚಾರ

ಗವಿ ಗಂಗಾಧರೇಶ್ವರ ದೇವಾಲಯ

ಬೆಂಗಳೂರು ನಗರ ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿದೆ. ಆದರೆ, ಆಧುನಿಕ ಕಟ್ಟಡಗಳಿಂದ ತುಂಬಿಹೋಗಿರುವ ಈ ನಗರದಲ್ಲಿ ಐತಿಹಾಸಿಕ ಮಹತ್ವವಿರುವ ಅನೇಕ ದೇವಸ್ಥಾನಗಳಿವೆ. ಒಂದು ಕಾಲದಲ್ಲಿ ಬೆಂಗಳೂರನ್ನ ಕಲ್ಯಾಣನಗರಿ ಎಂದು ಕರೆಯಲಾಗುತ್ತಂತೆ. ಅಂದ್ರೆ, ಬೆಂಗಳೂರು ದೇವಸ್ಥಾನಗಳ ನಗರಿಯಾಗಿತ್ತು. ಅಂತಹ ದೇವಸ್ಥಾನಗಳಲ್ಲಿ ಗವಿ ಗಂಗಾಧರೇಶ್ವರ ದೇವಾಲಯವೂ ಒಂದು. ಹಲವು ವಿಶೇಷತೆಗಳನ್ನು ಒಳಗೊಂಡಿರುವ ಈ ದೇವಾಲಯದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ…

gavi-gangadhareshwara-temple

ಬೆಂಗಳೂರಿನ ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ದೇವಾಲಯ ಕೆಲವೇ ಕೆಲವು ಪ್ರಾಚೀನ ಗುಹಾಂತರ ದೇವಾಲಯಗಳಲ್ಲೊಂದು. ಕ್ರಿ.ಶ. 9ನೇ ಶತಮಾನದಲ್ಲಿ ಬೃಹತ್ ಹೆಬ್ಬಂಡೆಯನ್ನ ಕೊರೆದು ಈ ದೇವಸ್ಥಾನವನ್ನ ನಿರ್ಮಿಸಲಾಗಿದೆ. ಇದು ಶಿವನ ಮಂದಿರವಾಗಿದ್ದು, ನಂದಿಯ ವಿಗ್ರಹವೂ ಮುಂದೆ ಇದೆ.

ಇಲ್ಲಿ ಮತ್ತೊಂದು ವಿಶೇಷವೆಂದರೆ ಅಗ್ನಿಯ ವಿಗ್ರಹ. ಇದಕ್ಕೆ 2 ತಲೆ, 7 ಕೈ ಹಾಗೂ 3 ಕಾಲುಗಳಿವೆ. ಇಲ್ಲಿರುವ ಅಗ್ನಿಯನ್ನ ಪೂಜಿಸಿದರೆ ಕಣ್ಣಿನ ದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇದೆ.

ದೇವಾಲಯದ ಮೇಲ್ಛಾವಣಿಯ ಗೋಪುರಗಳು.ದೇವಾಲಯದಲ್ಲಿನ ಕಲ್ಲಿನ ಕಂಬಗಳು. ಈ ದೇವಾಲಯವು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಈ ಪ್ರಾಚೀನ ದೇವಾಲಯದ ವಾಸ್ತು ವಿನ್ಯಾಸ ಅತ್ಯಂತ ಮನಮೋಹಕವಾಗಿದೆ, ಬೆಂಗಳೂರಿನಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪ್ರತಿವರ್ಷ ‘ಮಕರ ಸಂಕ್ರಾತಿಯ ದಿನ’ ಸಂಜೆ ಸೂರ್ಯನ ಕಿರಣಗಳು ಲಿಂಗದ ಮುಂದಿರುವ ನಂದಿಯ ಕೊಂಬಿನಿಂದ ಹಾದು, ಶಿವಲಿಂಗವನ್ನು ಸ್ಪರ್ಶಿಸುತ್ತದೆ. ಈ ದೃಷ್ಯವನ್ನು ವೀಕ್ಷಿಸಲು ಸಾವಿರಾರು ಭಕ್ತರು ಬಹಳ ದೂರ ಪ್ರದೇಶಗಳಿಂದ ಬರುತ್ತಾರೆ.

780078440baabec83c88a6f6dafb929a_426_308_thumb

‘ಸ್ವಯಂಭು’ವೆಂದು ಪ್ರಸಿದ್ಧಿಪಡೆದ ಈಕ್ಷೇತ್ರದಲ್ಲಿ ‘ಗೌತಮ ಮಹರ್ಷಿ’ಗಳು ಈ ಗುಹಾಂತರ ದೇವಾಲಯದಲ್ಲಿ ತಪಸ್ಸನ್ನು ಆಚರಿಸಿದರೆಂದು ಇತಿಹಾಸವಿದೆ. ಇಲ್ಲಿನ ಶಿವಲಿಂಗಕ್ಕೆ ತ್ರಿಕಾಲ ಪೂಜೆ ಸಲ್ಲಿಸುತ್ತಿದ್ದರೆಂದು ಸ್ಥಳ ಪುರಾಣ ಸಾರುತ್ತದೆ. ಹೀಗಾಗಿ ಇದಕ್ಕೆ ಗೌತಮ ಕ್ಷೇತ್ರ ಎಂದೂ ಹೆಸರು ಬಂದಿದೆ.

ಈ ದೇವಾಲಯ ಗರ್ಭಗುಡಿಯ ಸುತ್ತ ಇರುವ ಗುಹಾ ಮಾರ್ಗದಲ್ಲಿ ಗೌತಮ ಮಹರ್ಷಿಗಳ ಹಾಗೂ ಭಾರದ್ವಾಜರ ಶಿಲಾಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಮಾರ್ಗದಲ್ಲಿ ಸಪ್ತ ಮಾತೃಕೆಯರಾದ ‘ಬ್ರಾಹ್ಮೀ’, ‘ಮಾಹೇಶ್ವರಿ’, ‘ವಾರಾಹಿ’, ‘ಚಾಮುಂಡಿ’, ‘ವೈಷ್ಣವಿ’ ಹಾಗೂ ‘ಶ್ರೀದೇವಿ’, ‘ಭೂದೇವಿ’ಯ ವಿಗ್ರಹಗಳೂ ಇವೆ. ಸುಮಾರು 20 ಸಾವಿರವರ್ಷಗಳ ಐತಿಹ್ಯವಿರುವ ಈದೇವಾಲಯದ ಶಿವಲಿಂಗ ದಕ್ಷಿಣಾಭಿಮುಖವಾಗಿರುವುದೇ ಇಲ್ಲಿಯ ವಿಶೇಷತೆಗಳಲ್ಲೊಂದು.

ಮತ್ತೊಂದು ವಿಶೇಷವೇನೆಂದರೆ, ಪಾರ್ವತಿದೇವಿಯು ಶಿವನ ಬಲಭಾಗದಲ್ಲಿ ಆಸೀನಳಾಗಿರುವುದು. ಈ ದೇವಾಲಯದ ವಿಶಾಲ ಪ್ರಾಂಗಣದಲ್ಲಿ ಬಹಳ ಅಪರೂಪವಾದ ಹಾಗೂ ಅತ್ಯಂತ ಸುಂದರವಾದ ಶಿಲಾರಚನೆಗಳಿವೆ. ಅತ್ಯಂತ ಸುಂದರ ಹಾಗೂ ರಮಣೀಯವಾದ ಈ ದೇವಾಲಯದ ಮುಂಭಾಗದಲ್ಲಿ ವಿಜಯನಗರ ಶೈಲಿಯ 14 ಕಂಬಗಳಿರುವ ಮಂಟಪವಿದೆ.

‘ಎರಡು ಸೂರ್ಯಪಾನ’, ‘ಡಮರುಗ’ ಹಾಗೂ ‘ತ್ರಿಶೂಲದ ಎತ್ತರದ ಸ್ತಂಭಗಳು’ ಈ ದೇವಾಲಯದ ಕೀರ್ತಿಗೆ ಕಳಶದಂತಿವೆ. ಈ ಗುಹಾಂತರ ದೇವಾಲಯದಲ್ಲಿ ಎರಡು ಸುರಂಗ ಮಾರ್ಗಗಳಿದ್ದು, ಒಂದು ಸುರಂಗವು ವಿಶ್ವನಾಥನ ನೆಲೆವೀಡಾದ ಕಾಶಿಗೂ ಹೋಗುತ್ತದೆಂಬುದು ನಂಬಿಕೆ. ಇನ್ನೊಂದು ತುಮಕೂರು ರಸ್ತೆಯಲ್ಲಿರುವ ಶಿವಗಂಗೆಗೆ ಹೋಗುತ್ತದೆ. ಕಾರ್ತೀಕ ಮಾಸದ ಎಲ್ಲ ಸೋಮವಾರ ಹಾಗೂ ಶಿವರಾತ್ರಿಯ ದಿನ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ದೇವಾಲಯದ ಪಕ್ಕದಲ್ಲೇ ಇರುವ ತಿಮ್ಮೇಶಪ್ರಭು ಉದ್ಯಾನದಲ್ಲಿ ‘ಸಂಗೀತ, ನೃತ್ಯ ಕಾರಂಜಿ’ಯೂ ಇದೆ. ಪ್ರತಿ ರವಿವಾರದ ಸಂಜೆ 7ರ ನಂತರ ಇಲ್ಲಿ ‘ನೃತ್ಯಕಾರಂಜಿ’ಯನ್ನೂ ವೀಕ್ಷಿಸಲು ಎಲ್ಲ ಕಡೆಯಿಂದಲೂ ಜನರು ಬರುತ್ತಾರೆ.

inside-gavi-gangadhareshwara-temple-bangalore

ಇತಿಹಾಸದ ಪ್ರಕಾರ ಮಾಗಡಿ ಕೆಂಪೇಗೌಡರು ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಂಡರು. ಸಮೀಪದಲ್ಲೇಇರುವ ಗೋಸಾಯಿ ಮಠದಲ್ಲಿ ಅವಾನಿಪೀಠವಿದೆ. ಕಲ್ಲಿನಲ್ಲಿ ನಿರ್ಮಿಸಿರುವ ಚಂದ್ರಪಾನ, ಪೀನಪಾನ ಹಾಗೂ ಡಮರುಗಳು ಇಲ್ಲಿನ ಆಕರ್ಷಣೆಗಳಲ್ಲೊಂದು. ಇಲ್ಲಿ ಹರಕೆಹೊತ್ತವರಿಗೆ ಅನುಗ್ರಹ ಖಂಡಿತವೆಂದು ಜನರ ನಂಬಿಕೆಯಿದೆ. ಹಾಗಾಗಿ, ಈ ಸ್ಥಳ ಬಹಳ ಪ್ರಸಿದ್ದಿಪಡೆದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top