fbpx
ಸಮಾಚಾರ

ಇಂಡೋ-ಪಾಕ್ ಪಂದ್ಯ ನಡೆಯುವುದು ಅನುಮಾನ..! ಯಾಕೆ ಅಂತೀರಾ?

ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಜೂ.16ಕ್ಕೆ ನಿಗದಿಯಾಗಿದೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕೋಟ್ಯಾಂತರ ಜನ ಕಾದು ಕೂತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಈಗಾಲೇ ಈ ಪಂದ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಈ ನಡುವೆ ಪಂದ್ಯ ನಡೆಯೋದೇ ಡೌಟು ಎನ್ನುವ ಮಾತು ಕೇಳಿ ಬರುತ್ತಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ಸದ್ಯ ಪಂದ್ಯಕ್ಕೆ ಉಭಯ ರಾಷ್ಟ್ರಗಳ ನಡುವಿನ ವೈಷಮ್ಯ ಅಥವಾ ರಾಜತಾಂತ್ರಿಕ ನಡೆ ಅಡ್ಡಿಯಾಗುತ್ತಿಲ್ಲ. ಬದಲಿಗೆ ಮಳೆರಾಯನ ಅವಕೃಪೆಯಿಂದ ಪಂದ್ಯ ರದ್ದಾಗಬಹುದು. ಹೌದು ಮಳೆಯಿಂದಾಗಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ, ನಿನ್ನೆಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯಗಳು ರದ್ದಾಗಿತ್ತು. ಇದೀಗ ಭಾನುವಾರ ನಡೆಯುವ ಭಾರತ – ಪಾಕ್ ಪಂದ್ಯಕ್ಕೂ ಮಳೆಯ ಆತಂಕ ಎದುರಾಗಿದೆ.

ಮ್ಯಾಂಚೆಸ್ಟರ್‌ನಲ್ಲಿ ಈ ಶನಿವಾರದ ವರೆಗೂ ಸತತವಾಗಿ ಮಳೆ ಬೀಳುವ ಮುನ್ಸೂಚನೆ ಇದೆ. ಭಾನುವಾರ ಮಧ್ಯಾಹ್ನದ ವರೆಗೂ ಬಿಡುವು ಸಿಗಲಿದ್ದು, ಮಧ್ಯಾಹ್ನದ ನಂತರ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ. ಹೀಗಾಗಿ ಪಂದ್ಯ ಆರಂಭಗೊಂಡರೂ, ಪದೇ ಪದೇ ಮಳೆಯಿಂದಾಗಿ ಸ್ಥಗಿತಗೊಳ್ಳಬಹುದು. ಓವರ್‌ಗಳು ಕಡಿತಗೊಳ್ಳುವ ಸಾಧ್ಯತೆ ಹೆಚ್ಚು, ಪೂರ್ಣ ಪಂದ್ಯ ನಿರೀಕ್ಷೆ ಮಾಡುವುದು ಕಷ್ಟಎಂದು ಸ್ಥಳೀಯ ಆಯೋಜಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದರ ಜೊತೆಗೆ ಜೂ. 13 ರಂದು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ನ್ಯಾಟಿಂಗ್​​ಹ್ಯಾಮ್​​ನಲ್ಲಿ ಕಾದಾಟ ನಡೆಸಲಿದೆ. ಆದರೆ ಇಲ್ಲಿ ಈಗಾಗಲೇ ಮಳೆ ಸುರಿಯುತ್ತಿರುವ ಕಾರಣ, ಟೀಂ ಇಂಡಿಯಾ ಅಭ್ಯಾಸವನ್ನು ಕೂಡ ಮೊಟಕುಗೊಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top