fbpx
ಸಮಾಚಾರ

“ನಾನೆಲ್ಲಿ ಹಾಗೆ ಹೇಳಿದ್ದೇನೆ..?” ಉಪ್ಪಿ ಪತ್ನಿ ಪ್ರಿಯಾಂಕಾಗೆ ರಚಿತಾ ರಾಮ್ ತಿರುಗೇಟು.

ಐ ಲವ್ ಯು ಸಿನಿಮಾದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ರೊಮ್ಯಾಂಟಿಕ್ ಸೀನ್ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ನಟಿ ರಚಿತಾ ರಾಮ್​ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಸಂಬಂಧಿಸಿದಂತೆ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದು, ಉಪೇಂದ್ರ ಅವರು ದೃಶ್ಯವನ್ನು ನಿರ್ದೇಶನ ಮಾಡಿದ್ದಾರೆ ಎಂದು ನಾನು ಹೇಳಿಲ್ಲ.” ಎಂದು ಹೇಳಿ ಪ್ರಿಯಾಂಕಾಗೆ ತಿರುಗೇಟು ನೀಡಿದ್ದಾರೆ.

“ಈ ಹಾಡನ್ನು ಉಪ್ಪಿ ಸರ್ ನಿರ್ದೇಶನ ಮಾಡಿದ್ದು ಅಂತ ನಾನೆಲ್ಲೂ ಹೇಳಿಲ್ಲ. ಈ ಪಾತ್ರ ಮಾಡಬಾರದಾಗಿತ್ತು ಅಂತ ಕೂಡ ಹೇಳಿಲ್ಲ. ಆಂತಹ ರೀತಿಯ ಹೇಳಿಕೆಗಳನ್ನು ಯಾವುದೇ ಚಾನೆಲ್ ನಲ್ಲಿ ಆಗಲಿ ಸಂದರ್ಶನದಲ್ಲಿ ಆಗಲಿ ಎಲ್ಲಿಯೂ ಕೊಟ್ಟಿಲ್ಲ. ನಾನು ಹೇಳಿದ್ದು ಒಂದು ಸೀನ್ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ, ಆ ರೀತಿಯ ಕಂಫರ್ಟ್ ಉಪ್ಪಿ ಸರ್ ಕಡೆಯಿಂದ ಚೆನ್ನಾಗಿದ್ದ ಕಾರಣಕ್ಕೆ ಸುಲಭವಾಗಿ ಆ್ಯಕ್ಟ್ ಮಾಡಲು ಸಾಧ್ಯವಾಯಿತು” ಎಂದಿದ್ದೇನೆ.

ನಾನು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನನ್ನ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಹೀಗಾಗಿ ಇನ್ನುಮುಂದೆ ಈ ರೀತಿಯ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆಯೇ ಹೊರತು, ಈಗಾಗಲೇ ನಟಿಸಿದ್ದಕ್ಕೆ ವಿಷಾದವಿಲ್ಲ ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಹೇಳಿದ್ದೇನು?
“ಐಲವ್ ಯೂ ಚಿತ್ರದ ಹಾಡಿನ ಬಗ್ಗೆ ಉಪೇಂದ್ರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಗರಂ ಆಗಿದ್ದಾರೆ, ಹಾಡಿನಲ್ಲಿರುವ ಹಸಿಬಿಸಿ ದೃಶ್ಯಗಳಿಂದಾಗಿ ಕೆಟ್ಟ ಭಾವನೆ ಬರುತ್ತಿದೆ, ಜೊತೆಗೆ ರಚಿತಾ ರಾಮ್ ಅನಗತ್ಯವಾಗಿ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ, ಪ್ರತಿ ಸಂದರ್ಶನಲ್ಲೂ ಅವರು ಉಪೇಂದ್ರ ಹೆಸರನ್ನು ಮಧ್ಯಕ್ಕೆ ತರುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಹಾಡಿನ ಚಿತ್ರದ ನಿರ್ದೇಶನ ಮಾಡಿದ್ದು ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್. ಆದರೆ, ರಚಿತಾ ರಾಮ್​ ಹಾಡು ಉಪ್ಪೇಂದ್ರ ನಿರ್ದೇನ ಮಾಡಿದ್ದಾರೆ ಎನ್ನುತ್ತಿದ್ದಾರೆ”

“ಸಿನಿಮಾದಲ್ಲಿ ತಾವು ಯಾವ ರೀತಿಯ ಅಭಿನಯ ಮಾಡಿದ್ದಾರೆ ಎಂಬ ಬಗ್ಗೆ ರಚಿತಾ ಹೇಳಿಕೊಳ್ಳಲಿ, ಅದನ್ನು ಬಿಟ್ಟು ಎಲ್ಲದಕ್ಕೂ ಉಪೇಂದ್ರ ಅವರ ಹೆಸರನ್ನು ಏಕೆ ಹೇಳಬೇಕು ಎಂದು ಪ್ರಿಯಾಂಕಾ ಗರಂ ಆಗಿದ್ದಾರೆ, ಆಕೆಯೇನು ಸಿನಿಮಾ ಇಂಡಸ್ಟ್ರಿಗೆ ಹೊಸಬರಲ್ಲ, ನಿನ್ನೆ ಮೊನ್ನೆ ಸಿನಿಮಾ ಇಂಡಸ್ಚ್ರಿಗೆ ಬಂದವರಲ್ಲ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.

“ಒಂದು ವೇಳೆ ರಚಿತಾಗೆ ಈ ಹಾಡಿದ ದೃಶ್ಯಗಳು ಇಷ್ಟವಾಗದೇ ಇದ್ದಲ್ಲಿ ಶೂಟಿಂಗ್ ಸಮಯದಲ್ಲೇ ಹೇಳಬೇಕಿತ್ತು. ಅದು ಬಿಟ್ಟು ವಿನಾಕಾರಣ ಉಪ್ಪಿ ಹೆಸರು ಎಳೆದು ತರುತ್ತಿರುವುದು ಯಾಕೆ? ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡು ಈಗ ಉಪೇಂದ್ರ ಅವರ ಹೆಸರನ್ನು ಎಳೆದು ತರುತ್ತಿರುವುದು ಉಪೇಂದ್ರ ಅವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದಂತಾಗಿದೆ ಎಂದು ಪ್ರಿಯಾಂಕಾ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top