fbpx
ಸಮಾಚಾರ

ಗಾಯಾಳು ಧವನ್ ಸ್ಥಾನಕ್ಕೆ ಪಂತ್ ಆಯ್ಕೆ- ಇಂದು ಇಂಗ್ಲೆಂಡ್​ಗೆ ಪ್ರಯಾಣಿಸಲಿರುವ ಯುವ ಕ್ರಿಕೆಟಿಗ.

ಗಾಯಾಳುವಾಗಿ ಮೂರು ಪಂದ್ಯಗಳಿಗೆ ಅಲಭ್ಯರಿರುವ ಆರಂಭಕಾರ ಶಿಖರ್‌ ಧವನ್‌ ಅವರಿಗೆ ಬದಲಿಯಾಗಿ 21ರ ಹರೆಯದ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಭಾರತೀಯ ವಿಶ್ವಕಪ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ.

 

 

ಭಾರತದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​​ ಧವನ್​​ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ 15 ಆಟಗಾರರ ತಂಡಕ್ಕೆ ರಿಷಬ್​​ ಪಂತ್​ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ನಾಳೆ ನಡೆಯಲಿರುವ ನ್ಯೂಜಿಲೆಂಡ್​​​​ ವಿರುದ್ಧದ ಪಂದ್ಯ ಹಾಗೂ 16 ರಂದು ನಡೆಯಲಿರುವ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಪಂತ್​​ ಪ್ರದರ್ಶನ ತೋರಲಿದ್ದಾರೆ.

ಉತ್ತಮ ಫಾರ್ಮ್ ನಲ್ಲಿದ್ದ ಧವನ್ ಗಾಯಗೊಂಡಿರುವುದು ಟೀಂ ಇಂಡಿಯಾ ಹಿನ್ನೆಡೆಯನ್ನು ಉಂಟಾಗುವಂತೆ ಮಾಡಿದೆ. ವಿಶ್ವಕಪ್ ಆಯ್ಕೆ ವೇಳೆ ದಿನೇಶ್ ಕಾರ್ತಿಕ್ ಆಯ್ಕೆಯಿಂದ ತಂಡದಲ್ಲಿ ರಿಷಬ್ ಸ್ಥಾನ ಕಳೆದುಕೊಂಡಿದ್ದರು. 21 ವರ್ಷದ ರಿಷಬ್‍ಗೆ ಸದ್ಯ 48 ಗಂಟೆಗಳ ಒಳಗೆ ಇಂಗ್ಲೆಂಡ್‍ಗೆ ಪ್ರಯಾಣ ಆರಂಭಿಸಲಿದ್ದಾರೆ ಎನ್ನಲಾಗಿದೆ.

ಧವನ್ ಗಾಯಗೊಂಡಿರುವ ಅವರ ಸ್ಥಾನದಲ್ಲಿ ರಿಷಬ್ ಆಯ್ಕೆ ಮಾಡುವುದು ಖಚಿತವಾಗಿದ್ದರು ಕೂಡ ಆಡುವ 11 ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಇದೆ. ಸದ್ಯ ನಂ.04 ಸ್ಥಾನದಲ್ಲಿ ಕಣಕ್ಕೆ ಇಳಿಯುತ್ತಿರುವ ಕೆಎಲ್ ರಾಹುಲ್ ಅವರಿಗೆ ಬಡ್ತಿ ನೀಡಿ ರೋಹಿತ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಆಯ್ಕೆ ಸಮಿತಿ ಸಾಕಷ್ಟು ಚಿಂತನೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top