fbpx
ಸಮಾಚಾರ

ಮೋದಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕ್ರಿಕೆಟ್ ದೇವರು.

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ಟೀಂ ಇಂಡಿಯಾ ಆಟಗಾರರ ಹಸ್ತಾಕ್ಷರ ಇರುವ ಬ್ಯಾಟ್​​ ಅನ್ನು ಮಾಲ್ಡೀವ್ಸ್​ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿ ಕ್ರಿಕೆಟ್​ಗೆ ಉತ್ತೇಜನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಅವರು ಶ್ಲಾಘಿಸಿದ್ದಾರೆ.

 

 

ವಿಶ್ವಕಪ್ ಕ್ರಿಕೆಟ್ ಟೂರ್ನಿ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಮಾಲ್ಡಿವ್ಸ್ ಅಧ್ಯಕ್ಷ ಇಬ್ರಾಹಿಮ್ ಮೊಹಮ್ಮದ್ ಸೋಲಿಹಾ ಅವರಿಗೆ ಭಾರತೀಯ ಕ್ರಿಕೆಟ್ ಆಟಗಾರರ ಸಹಿಯನ್ನೋಳಗೊಂಡ ಬ್ಯಾಟ್ ನ್ನು ಉಡುಗೊರೆಯಾಗಿ ನೀಡಿ ಟ್ವೀಟ್ ಮಾಡಿದ್ದರು. ಮಾಲ್ಡೀವ್ಸ್‌ನಲ್ಲಿ ಕ್ರಿಕೆಟ್‌ ಅನ್ನು ಪ್ರೋತ್ಸಾಹಿಸಲು ಭಾರತ ನೆರವಾಗುವುದಾಗಿ ಮೋದಿ ಅವರು ಅಲ್ಲಿನ ಅಧ್ಯಕ್ಷ ಸೋಲಿಹ್‌ ಅವರಿಗೆ ವಚನ ನೀಡಿದ್ದಾರೆ.

‘ನನ್ನ ಸ್ನೇಹಿತ, ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಮ್‌ ಮೊಹಮದ್‌ ಸೋಲಿಹ್‌ ಕ್ರಿಕೆಟ್‌ನ ಅಭಿಮಾನಿ. ಆದ್ದರಿಂದ ನಾನು ಟೀಂ ಇಂಡಿಯಾದ ಸಹಿ ಇರುವ ಬ್ಯಾಟ್‌ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದೆ,’ ಎಂದು ಮೋದಿ ಅವರು ಜೂನ್‌ 8ರಂದು ಫೋಟೊ ಸಹಿತ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಅನ್ನು ಉಲ್ಲೇಖಿಸಿ ಮಂಗಳವಾರ ರಾತ್ರಿ ಟ್ವೀಟ್‌ ಮಾಡಿರುವ ಸಚಿನ್‌ ತೆಂಡೂಲ್ಕರ್‌, ‘ಕ್ರಿಕೆಟ್‌ ಅನ್ನು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು ಮೋದಿಜಿ. ಕ್ರಿಕೆಟ್‌ ರಾಜತಾಂತ್ರಿಕತೆಗೆ ಇದು ಉತ್ತಮ ನಿದರ್ಶನ,’ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ, ಕ್ರಿಕೆಟ್‌ ಭೂಪಟದಲ್ಲಿ ಶೀಘ್ರವೇ ಮಾಲ್ಡೀವ್ಸ್‌ ಅನ್ನೂ ನೋಡಲು ಬಯಸುತ್ತೇನೆ,’ ಎಂದು ಅವರು ಆಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top