fbpx
ಸಮಾಚಾರ

ವಿಶ್ವಕಪ್ ನಡುವೆ ‘ಭಾರತ್’ ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರು.

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಸತತ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿರುವ ಟೀಂ ಇಂಡಿಯಾ ಆಟಗಾರರು ಇದೀಗ ಕ್ರಿಕೆಟ್ ನಿಂದ ಕೊಂಚ ಬ್ರೇಕ್ ಪಡೆದು ನಾಟಿಂಗ್ ಹ್ಯಾಮ್ ನಲ್ಲಿ ನಟ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

 

 

ಸಿನಿಮಾ ವೀಕ್ಷಣೆ ಬಳಿಕ ಫೋಟೋವೊಂದನ್ನು ಕೇದಾರ್ ಜಾಧವ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು ಎಂ.ಎಸ್.ಧೋನಿ, ಹಾರ್ದಿಕ್’ ಪಂದ್ಯ, ಶಿಖರ್ ಧವನ್ ಮತ್ತು ಕೆ.ಎಲ್.ರಾಹುಲ್ ಚಿತ್ರದಲ್ಲಿದ್ದಾರೆ.

ಭಾರತ್ ಸಿನಿಮಾ ನೋಡಿ ಫೋಟೋ ಹಾಕಿದ ಕೇದಾರ್ ಜಾಧವ್ ಅವರು “ಭಾತರ ಕ್ರಿಕೆಟ್ ತಂಡ, ಭಾರತ್ ಸಿನಿಮಾದ ನಂತರ” ಎಂದು ಬರೆದು ತಮ್ಮ ಖುಷಿಯ ಕ್ಷಣವನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, “ಧನ್ಯವಾದಗಳು ಭಾರತ ತಂಡ ನನ್ನ ಸಿನಿಮಾವನ್ನು ಇಷ್ಟಪಟ್ಟಿದಕ್ಕೆ. ನನ್ನ ಸಿನಿಮಾ ನೋಡಿದಕ್ಕೆ ಧನ್ಯವಾದಗಳು ಸಹೋದರರೇ. ನಿಮ್ಮ ಮುಂದಿನ ಪಂದ್ಯಗಳಿಗೆ ಶುಭವಾಗಲಿ ಪುರ ಭಾರತ್ ಅಪ್ಕಾ ಸತ್ ಹೈ (ಸಂಪೂರ್ಣ ಭಾರತ ನನ್ನ ಜೊತೆ ಇದೆ)” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top