fbpx
ಸಮಾಚಾರ

ಬೀಳದ ಬೇಲ್ಸ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿ.

ಹಾಲಿ ಏಕದಿನ ವಿಶ್ವಕಪ್​ನಲ್ಲೀಗ ಎಲ್ಲ ತಂಡಗಳಿಗೂ ಹೊಸ ತಲೆನೋವೊಂದು ಎದುರಾಗಿದ್ದು ಬೌಲಿಂಗ್ ವೇಳೆ ಚೆಂಡು ಸ್ಟಂಪ್​ಗೆ ಸ್ಪರ್ಶಿಸಿದರೂ ಬೇಲ್ಸ್ ಕೆಳಗೆ ಬೀಳದೆ ಬ್ಯಾಟ್ಸ್​ಮನ್​ಗಳು ಅದೃಷ್ಟವಶಾತ್ ಜೀವದಾನ ಪಡೆಯುತ್ತಿದ್ದಾರೆ. ಇಂಥಾ ಸನ್ನಿವೇಶ ಈಗಾಗಲೆ ಟೂರ್ನಿಯಲ್ಲಿ ಸುಮಾರು 10 ಬಾರಿ ನಡೆದಿವೆ. ಎಲ್​ಇಡಿ ಬೇಲ್ಸ್​ನೊಳಗೆ ವೈರ್​ಗಳಿರುವುದರಿಂದ ಲೆಕ್ಕಕ್ಕಿಂತ ಹೆಚ್ಚು ಭಾರವಾಗಿರುವುದೇ ಇದಕ್ಕೆ ಕಾರಣ ಎಂದು ಚರ್ಚೆಯಾಗುತ್ತಿದ್ದು, ಐಸಿಸಿ ಈ ಬಗ್ಗೆ ಗಮನವಹಿಸಬೇಕಿದೆ ಎಂಬ ಅಭಿಪ್ರಾಯಗಳು ಬಂದಿವೆ.

ಇದೀಗ ಭಾರದ ಬೇಲ್ಸ್ ಬಗ್ಗೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂಥ ಯಡವಟ್ಟು ಆಗತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೇಲ್ಸ್‌ ತಂತ್ರಜ್ಞಾನ ಚೆನ್ನಾಗಿದೆ. ಸ್ಟಂಪ್‌ಗೆ ಚೆಂಡು ಬಡಿದರೆ ಸಂಶಯವೇ ಇಲ್ಲದಂತೆ ತಿಳಿಯುತ್ತದೆ. ಆದರೆ ಸ್ಟಂಪ್‌ ಮೇಲಿಂದ ಬೇಲ್ಸ್‌ ಉರುಳಿಸುವುದು ಮಾತ್ರ ಕಠಿನ ಕೆಲಸ. ನಾನು ಬ್ಯಾಟ್ಸ್‌ಮನ್‌ ಆಗಿಯೂ ಇದನ್ನು ಹೇಳುತ್ತಿದ್ದೇನೆ” ಎಂದು ಕೊಹ್ಲಿ ಹೇಳಿದ್ದಾರೆ.

ಅಂದಹಾಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಎಸೆತದಲ್ಲಿ ಡೇವಿಡ್ ವಾರ್ನರ್ ಬೌಲ್ಡ್ ಆಗಿದ್ದರು. ಆದರೆ ಬೇಲ್ಸ್ ಬೀಳದ ಕಾರಣ ನಾಟೌಟ್ ಆಗಿದ್ದರು. ಈ ಪ್ರರಕಣ ಇದೀಗ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top