fbpx
ಸಮಾಚಾರ

ನಟ ಯಶ್ ತಾಯಿ ಪುಷ್ಪ ವಿರುದ್ಧ ಎಫ್ಐಆರ್ ದಾಖಲು.

ಬಾಡಿಗೆ ಮನೆಯನ್ನು ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಹಾಳು ಮಾಡಿ ಮಾಲೀಕರಿಗೆ ನಷ್ಟ ಉಂಟು ಮಾಡಿದ ಆರೋಪದಡಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಹಾಗೂ ಇತರರ ವಿರುದ್ಧ ಗಿರಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.‌ ಮನೆ ಮಾಲೀಕ ಡಾ.ವನಜಾ ನೀಡಿದ ದೂರಿನ ಮೇಲೆ ಐಪಿಸಿ ಕಲಂ 427 ಅಡಿ ಯಶ್ ತಾಯಿ ಪುಷ್ಪಾ ಮತ್ತು ಇತರರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2010ರ ಅ.11ರಂದು ಬನಶಂಕರಿ 3ನೇ ಹಂತದ ಮನೆಯನ್ನು ಪುಷ್ಪಾಗೆ ಬಾಡಿಗೆಗೆ ನೀಡಿದ್ದೆವು. ಬಾಡಿಗೆ ನೀಡದ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು. 7 ವರ್ಷ ಅಧೀನ ನ್ಯಾಯಾಲಯ ಮತ್ತು ಹೈಕೋರ್ಟ್​ನಲ್ಲಿ ವಿಚಾರಣೆ ನಡೆದು ಮನೆ ಖಾಲಿ ಮಾಡುವಂತೆ ಪುಷ್ಪಾಗೆ ಆದೇಶ ನೀಡಿತ್ತು. ಯಶ್ ಕುಟುಂಬ ಮನೆ ಖಾಲಿ ಮಾಡಿದ ನಂತರ ಮನೆ ಬಾಗಿಲು ತೆರೆದು ನೋಡಿದಾಗ ಮಾಲೀಕರಿಗೆ ಶಾಕ್ ಎದುರಾಗಿತ್ತಂತೆ. ಮನೆಯಲ್ಲಿನ ಕೆಲ ವಸ್ತುಗಳನ್ನು ಹೊಡೆದಿರುವುದು ಕಣ್ಣಿಗೆ ಕಾಣಿಸಿದೆ. ವಾರ್ಡ್ ರೋಬ್ ಬಾಗಿಲು, ಹಾಲ್ ನ ನೆಲ ಅಡುಗೆ ಕೊನೆಯ ಕೆಲ ವಸ್ತುಗಳು, ಫಾರಿನ್ ಕಮೋಡ್ ಕೂಡ ಹೊಡೆದು ಹಾಕಿದ್ದಾರೆ ಎಂದು ಮನೆ ಮಾಲೀಕರು ದೂರಿನಲ್ಲಿ ಯಶ್ ವಿರುದ್ಧ ಆರೋಪಿಸಿದ್ದಾರೆ.

ಯಶ್ ಮನೆಯವರು ಮನೆಯನ್ನು ತುಂಬಾ ಹಾಳು ಮಾಡಿದ್ದಾರೆ. ಉಪಯೋಗಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಧಕ್ಕೆ ಮಾಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳನ್ನ ನಾಶ ಮಾಡಿ, ವಾಸಕ್ಕೆ ಯೋಗ್ಯವಲ್ಲ. ಮನೆಯ ಕೆಲವು ಉಪಕರಣಗಳನ್ನು ಉದ್ದೇಶಪೂರ್ವಕವಾಗಿ ಒಡೆದು ನಾಶಪಡಿಸಿದ್ದಾರೆ. ಇವೆಲ್ಲದರ ಮೌಲ್ಯ ಅಂದಾಜು 28 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top