fbpx
ಸಮಾಚಾರ

ಭಾರದ ಎಲ್‌ಇಡಿ ಬೇಲ್ಸ್‌ ತೆಗೆಯಲು ಐಸಿಸಿ ನಕಾರ

ಹಾಲಿ ಏಕದಿನ ವಿಶ್ವಕಪ್​ನಲ್ಲೀಗ ಎಲ್ಲ ತಂಡಗಳಿಗೂ ಹೊಸ ತಲೆನೋವೊಂದು ಎದುರಾಗಿದ್ದು ಬೌಲಿಂಗ್ ವೇಳೆ ಚೆಂಡು ಸ್ಟಂಪ್​ಗೆ ಸ್ಪರ್ಶಿಸಿದರೂ ಬೇಲ್ಸ್ ಕೆಳಗೆ ಬೀಳದೆ ಬ್ಯಾಟ್ಸ್​ಮನ್​ಗಳು ಅದೃಷ್ಟವಶಾತ್ ಜೀವದಾನ ಪಡೆಯುತ್ತಿದ್ದಾರೆ. ಇಂಥಾ ಸನ್ನಿವೇಶ ಈಗಾಗಲೆ ಟೂರ್ನಿಯಲ್ಲಿ ಸುಮಾರು 10 ಬಾರಿ ನಡೆದಿವೆ. ಎಲ್​ಇಡಿ ಬೇಲ್ಸ್​ನೊಳಗೆ ವೈರ್​ಗಳಿರುವುದರಿಂದ ಲೆಕ್ಕಕ್ಕಿಂತ ಹೆಚ್ಚು ಭಾರವಾಗಿರುವುದೇ ಇದಕ್ಕೆ ಕಾರಣ ಎಂದು ಚರ್ಚೆಯಾಗುತ್ತಿದ್ದು, ಐಸಿಸಿ ಈ ಬಗ್ಗೆ ಗಮನವಹಿಸಬೇಕಿದೆ ಎಂಬ ಅಭಿಪ್ರಾಯಗಳು ಬಂದಿವೆ.

 

ಈ ಹಿನ್ನೆಲೆಯಲ್ಲಿ ಝಿಂಗ್ ಬೇಲ್ಸ್ ಬೇಲ್ಸ್ ಬದಲಿಸುವಂತೆ ಕೆಲ ಮಾಜಿ ಆಟಗಾರರು ಇಂಟರ್​ನ್ಯಾಷನಲ್ ಕ್ರಿಕೆಟ್​ ಮಂಡಳಿಗೆ ಸಲಹೆಗಳನ್ನು ನೀಡಿದ್ದರು. ಆದರೀಗ ತನ್ನ ನಿಲುವು ಸ್ಪಷ್ಟಪಡಿಸಿರುವ ಐಸಿಸಿ, ಟೂರ್ನಿಯ ಮಧ್ಯದಲ್ಲಿ ನಾವು ಏನನ್ನೂ ಬದಲಿಸಲಾಗುವುದಿಲ್ಲ. ಈ ಬೇಲ್ಸ್ ಎಲ್ಲ ತಂಡಗಳಿಗೂ ಅನ್ವಯವಾಗುತ್ತದೆ. ಚೆಂಡು ವಿಕೆಟ್​ಗೆ ವೇಗವಾಗಿ ಬಡಿಯದಿದ್ದರೆ ಮಾತ್ರ ಬೀಳುವುದಿಲ್ಲ ಎಂದು ತಿಳಿಸಿದೆ.

ಈ ಸಾಧನ ಎಲ್ಲ 10 ತಂಡಗಳಿಗೂ, ಎಲ್ಲ 48 ಪಂದ್ಯಗಳಲ್ಲೂ ಒಂದೇ ರೀತಿ ಇರುತ್ತದೆ. 2015ರ ವಿಶ್ವಕಪ್‌ನಿಂದ ಸ್ಟಂಪ್‌ಗ್ಳನ್ನೂ ಬದಲಿಸಿಲ್ಲ. ಸುಮಾರು 1000 ಪಂದ್ಯಗಳಂತೂ ಆಗಿವೆ. ವಿವಾದಗಳು ಪಂದ್ಯಗಳ ಭಾಗವಾಗಿರುತ್ತವೆ. ಚೆಂಡು ಸ್ಟಂಪ್‌ಗ್ಳಿಗೆ ವೇಗವಾಗಿ ಬಡಿಯದಿದ್ದರೆ ಬೇಲ್ಸ್ ಬೀಳುವುದಿಲ್ಲ ಅಷ್ಟೇ’ ಎಂದು ಐಸಿಸಿ ಸ್ಪಷ್ಟಪಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top