fbpx
ಸಮಾಚಾರ

ಪಾಕ್ ವಿರುದ್ದದ ಪಂದ್ಯಕ್ಕೂ ಎದುರಾಗಲಿದೆ ಮಳೆ ಸಮಸ್ಯೆ.

ನಾಟಿಂಗ್​​ಹ್ಯಾಮ್​​ನ ಟ್ರೆಂಟ್​ ಬ್ರಿಡ್ಜ್​​ ಮೈದಾನದಲ್ಲಿ ಇಂದು ನಡೆಯಬೇಕಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ಮಳೆಗೆ ಆಹುತಿಯಾಗಿದೆ. ಸದ್ಯ ಮೈದಾನ ಸಂಪೂರ್ಣ ಒದ್ದೆಯಾಗಿದೆ. ಹೀಗಾಗಿ ಪಂದ್ಯ ರದ್ದು ಮಾಡಲಾಗಿದೆ. ಇದು ಈ ಬಾರಿಯ ವಿಶ್ವಕಪ್​ನಲ್ಲಿ ಫಲಿತಾಂಶ ಇಲ್ಲದೆ ರದ್ದಾಗುತ್ತಿರುವ ನಾಲ್ಕನೇ ಪಂದ್ಯ. ಈ ಮೂಲಕ ಭಾರತಕ್ಕೂ ವರುಣನ ಕಾಟ ತಪ್ಪಿಲ್ಲ. ಪಂದ್ಯ ರದ್ದಾದ ಕಾರಣ ಭಾರತ ಹಾಗೂ ನ್ಯೂಜಿಲೆಂಡ್ ಒಂದೊಂದು ಅಂಕ ಹಂಚಿಕೊಂಡಿದೆ.

ಪಾಕ್ ವಿರುದ್ದದ ಪಂದ್ಯಕ್ಕೂ ಮಳೆ ಕಾಟ:
ವಿಶ್ವಕಪ್​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಜೂ.16ಕ್ಕೆ ನಿಗದಿಯಾಗಿದೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕೋಟ್ಯಾಂತರ ಜನ ಕಾದು ಕೂತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಈಗಾಲೇ ಈ ಪಂದ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಈ ನಡುವೆ ಪಂದ್ಯ ನಡೆಯೋದೇ ಡೌಟು ಎನ್ನುವ ಮಾತು ಕೇಳಿ ಬರುತ್ತಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ಸದ್ಯ ಪಂದ್ಯಕ್ಕೆ ಉಭಯ ರಾಷ್ಟ್ರಗಳ ನಡುವಿನ ವೈಷಮ್ಯ ಅಥವಾ ರಾಜತಾಂತ್ರಿಕ ನಡೆ ಅಡ್ಡಿಯಾಗುತ್ತಿಲ್ಲ. ಬದಲಿಗೆ ಮಳೆರಾಯನ ಅವಕೃಪೆಯಿಂದ ಪಂದ್ಯ ರದ್ದಾಗಬಹುದು. ಹೌದು ಮಳೆಯಿಂದಾಗಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ, ನಿನ್ನೆಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯಗಳು ರದ್ದಾಗಿತ್ತು. ಇದೀಗ ಭಾನುವಾರ ನಡೆಯುವ ಭಾರತ – ಪಾಕ್ ಪಂದ್ಯಕ್ಕೂ ಮಳೆಯ ಆತಂಕ ಎದುರಾಗಿದೆ.

ಮ್ಯಾಂಚೆಸ್ಟರ್‌ನಲ್ಲಿ ಈ ಶನಿವಾರದ ವರೆಗೂ ಸತತವಾಗಿ ಮಳೆ ಬೀಳುವ ಮುನ್ಸೂಚನೆ ಇದೆ. ಭಾನುವಾರ ಮಧ್ಯಾಹ್ನದ ವರೆಗೂ ಬಿಡುವು ಸಿಗಲಿದ್ದು, ಮಧ್ಯಾಹ್ನದ ನಂತರ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ. ಹೀಗಾಗಿ ಪಂದ್ಯ ಆರಂಭಗೊಂಡರೂ, ಪದೇ ಪದೇ ಮಳೆಯಿಂದಾಗಿ ಸ್ಥಗಿತಗೊಳ್ಳಬಹುದು. ಓವರ್‌ಗಳು ಕಡಿತಗೊಳ್ಳುವ ಸಾಧ್ಯತೆ ಹೆಚ್ಚು, ಪೂರ್ಣ ಪಂದ್ಯ ನಿರೀಕ್ಷೆ ಮಾಡುವುದು ಕಷ್ಟಎಂದು ಸ್ಥಳೀಯ ಆಯೋಜಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top