fbpx
ಸಮಾಚಾರ

ದಲಿತ ಮಹಿಳೆಗೆ ಗೃಹ ಖಾತೆ ಕೊಟ್ಟ ಆಂಧ್ರ ಸರ್ಕಾರ- ತಂದೆಯನ್ನೇ ಅನುಸರಿಸಿದ ಜಗನ್.

ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ವೈ. ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ದಲಿತ ಮಹಿಳೆಯೊಬ್ಬರಿಗೆ ಗೃಹ ಸಚಿವರ ಸ್ಥಾನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. 2014ರಲ್ಲಿ ಆಂಧ್ರ ಪ್ರದೇಶ ತೆಲಂಗಾಣದಿಂದ ವಿಭಜನೆಯಾದ ಬಳಿಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಗೃಹ ಸಚಿವರಾಗಿದ್ದಾರೆ.

ಜಗನ್‌ ಸೇರಿ ಇವರ ಸಂಪುಟದಲ್ಲಿ ಸ್ಥಾನ ಪಡೆದವರ ಸಂಖ್ಯೆ 26ಕ್ಕೇರಿದೆ. ಮೊದಲ ಬಾರಿಗೆ ಐವರು ಡಿಸಿ ಎಂಗಳನ್ನು ನೇಮಕ ಮಾಡಿ ಅಚ್ಚರಿ ಮೂಡಿಸಿದ್ದ ಜಗನ್‌, ಶನಿವಾರ ಮತ್ತೂಂದು ಸರ್‌ಪ್ರೈಸ್‌ ನೀಡಿದ್ದಾರೆ. ಪ್ರತಿಪಾಡು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮೇಕಥೋಟಿ ಸುಚರಿತ ಎಂಬವರನ್ನು ಗೃಹ ಸಚಿವೆಯಾಗಿ ನೇಮಕ ಮಾಡಿದ್ದಾರೆ.

ತಂದೆಯನ್ನು ಅನುಸರಿಸಿದ ಜಗನ್:
ಜಗನ್‌ಮೋಹನ್‌ರೆಡ್ಡಿ ಅವರ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರು ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಗೃಹ ಸಚಿವ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ನೇಮಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ರಾಜಶೇಖರ ರೆಡ್ಡಿ ಸಂಪುಟದಲ್ಲಿ ಗೃಹ ಸಚಿವೆಯಾಗಿದ್ದ ಪಿ. ಸಬಿತಾ ಇಂದ್ರ ರೆಡ್ಡಿ ಈಗ ತೆಲಂಗಾಣ ರಾಷ್ಟ್ರ ಸಮಿತಿಯ ಶಾಸಕಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top