fbpx
ಸಮಾಚಾರ

“ಮರಗಳು ಕಾರ್ಬನ್ ಡೈ ಆಕ್ಸೈಡ್ಅನ್ನು ಹೊರ ಹಾಕುತ್ತವೆ” ಪ್ರಜ್ವಲ್ ರೇವಣ್ಣ ಎಡವಟ್ಟು ಹೇಳಿಕೆ ವಿಡಿಯೋ ವೈರಲ್.

ಮರಗಳು ಕಾರ್ಬನ್ ಮಾನಾಕ್ಸೈಡ್ ನ್ನು ಕಾರ್ಬನ್ ಡೈ ಆಕ್ಸೈಡ್ ನ್ನಾಗಿ ಪರಿವರ್ತನೆ ಮಾಡಿ ಪರಿಸರಕ್ಕೆ ಕಾರ್ಬನ್ ಡೈ ಆಕ್ಸೈಡ್ ಅನ್ನು ನೀಡುತ್ತವೆ ಎಂದು ಹಾಸನ ಲೋಕಸಭಾ ಕ್ಷೇತ್ರದ ನೂತನ ಸಂಸದ ‘ಪ್ರಜ್ವಲ್ ರೇವಣ್ಣ’ ಹೇಳಿದ್ದಾರೆ.

ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಜ್ವಲ್ ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಮರಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬನ್ ಮಾನಾಕ್ಸೈಡ್ ನ್ನು ಪರಿವರ್ತನೆ ಮಾಡಿ ಪರಿಸರಕ್ಕೆ ಕಾರ್ಬನ್ ಡೈ ಆಕ್ಸೈಡ್ ಅನ್ನು ನೀಡುತ್ತವೆ” ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ಸದ್ಯ ಪ್ರಜ್ವಲ್ ರೇವಣ್ಣ ಈ ರೀತಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top