fbpx
ಸಮಾಚಾರ

ಐಎಂಎ ಮನ್ಸೂರ್‌ಗೂ ಜಮೀರ್ ಗೂ ಏನು ಸಂಭಂದ.

ಜಮೀರ್ ಹೆಸರು ತಳುಕು:
ಸಚಿವ ಜಮೀರ್ ಅಹ್ಮದ್ ಖಾನ್ ಹೇಳರು ಮುನ್ಸೂರ್ ಜೊತೆ ತಾಲೂಕು ಹಾಕಿಕೊಂಡಿದೆ. ಚುನಾವಣೆ ಸಂದರ್ಭದಲ್ಲಿ ಜಮೀರ್ ಅಹ್ಮದ್ ಸಲ್ಲಿಸಿರೋ ಅಫಿಡವಿಟ್ ಈಗ ವೈರಲ್ ಆಗಿದೆ. ಇದರಲ್ಲಿ ರಿಚ್ಮಂಡ್ ಸರ್ಕಲ್ ಬಳಿ ಇರುವ ಎರಡೂವರೆ ಕೋಟಿ ಮೌಲ್ಯದ ಆಸ್ತಿಯನ್ನು ನೀಡಿ ಐಎಂಎ ಬಳಿ 5 ಕೋಟಿ ಸಾಲ ಪಡೆದಿರುವುದಾಗಿ ಜಮೀರ್ ಅಹ್ಮದ್ ಹೇಳಿಕೊಂಡಿದ್ದಾರೆ. ಈ ದಾಖಲೆ ಬಹಿರಂಗವಾಗುತ್ತಿದ್ದಂತೆ, ಐಎಂಎ ಮಾಲೀಕನ ಜೊತೆ ಸಚಿವ ಜಮೀರ್ ಪಾರ್ಟಿ ಮಾಡುವ ಫೋಟೋ ಇದೀಗ ವೈರಲ್ ಆಗಿದೆ.

ಐಎಂಎ ಮಾಲೀಕನಿಗೆ ಸಚಿವ ಜಮೀರ್ ಅಹ್ಮದ್ ಕರೆ
ಐಎಮ್‌ಎ ಜ್ಯೂವೆಲ್ಲರ್ಸ್ ಮಾಲೀಕ ಮನ್ಸೂರ್ ಖಾನ್‌ಗೆ ಕರೆ ನೀಡಿರುವ ಸಚಿವ ಜಮೀರ್ ಅಹಮ್ಮದ್, ಮಾಧ್ಯಮದ ಮೂಲಕ ಟ್ವಿಟರ್‌ನಲ್ಲಿ ಸಂದೇಶ ರವಾನಿಸಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿ ಬನ್ನಿ ಬಡವರ ಹಣ ನೀಡಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಐಎಂಎ ಜುವೆಲ್ಸ್ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಗೆ ಹೇಳಿದ್ದಾರೆ.

ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಜಮೀರ್, “ಮನ್ಸೂರ್ ನೀವು ಯಾರಿಗೂ ಹೆದರಬೇಡಿ. ಬನ್ನಿ‌ ಮಾತನಾಡೋಣ. ನಾವು ನಿಮ್ಮ ಜೊತೆ ಇದ್ದೇವೆ. ಸರ್ಕಾರ ನಿಮ್ಮ ಜೊತೆ ಇದೆ. ನಿಮಗೆ ಯಾರು ಬೆದರಿಕೆ ಹಾಕಿದ್ದಾರೆ ಹೇಳಿ. ಯಾವ ಅಧಿಕಾರಿಗಳು, ರಾಜಕಾರಣಿಗಳು ಬೆದರಿಕೆ ಹಾಕಿದ್ದಾರೆ ಹೇಳಿ. ಆಗಿದ್ದು ಆಗಿ ಹೋಗಿದೆ. ಬಡವರ ಹಣ ವಾಪಸ್ ನೀಡಿ. ಬಡವರ ಹಣ ಬೇರೆಯವರಿಗೆ ಯಾಕೆ ಹೋಗಬೇಕು. ಬಂದು ಅವರ ಹಣ ವಾಪಸ್ ನೀಡಿ. ನೀವು ಯಾರಿಗೂ‌ ಹೆದರಬೇಡಿ, ಯಾವ ರಾಜಕಾರಣಿಗೆ ಹಣ ನೀಡಿದ್ದಿರಾ ಹೇಳಿ ವಸೂಲಿ‌ ಮಾಡೋಣ,” ಎಂದು ಹೇಳಿದ್ದಾರೆ.

ಅಂತೆಯೇ ಮನ್ಸೂರ್ ಖಾನ್ ಅವರ ಆಡಿಯೋ ಟೇಪ್ ಕುರಿತಂತೆ ಮಾತನಾಡಿರುವ ಜಮೀರ್, ನೀವು ರಾಜಕಾರಣಗಳಿಗೆ ಹಣ ನೀಡಿದ್ದೇನೆ ಎಂದು ಹೇಳಿದ್ದೀರಿ. ಆದರೆ ರಾಜಕಾರಣಗಳಿಗೇಕೆ ಹಣ ನೀಡಬೇಕು, ಬಡವರ ಹಣವನ್ನು ನೀವೇಕೆ ರಾಜಕಾರಣಗಳಿಗೆ ನೀಡಿದ್ದೀರಿ. ನಿಮ್ಮ ಸಂಸ್ಥೆ ಕಾನೂನು ಬಾಹಿರವಾಗಿಲ್ಲವೆಂದರೆ ನೀವೇಕೆ ರಾಜಕಾರಣಿಗಳಿಗೆ ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇನ್ನು ಸಾವಿರಾರು ಕೋಟಿ ಹಣ ವಂಚನೆ ಮಾಡಿರುವ ಪ್ರಕರಣವಾಗಿದ್ದರಿಂದ ಈ ಕೇಸ್​ಅನ್ನು ಸರ್ಕಾರ ಎಸ್​ಐಟಿಗೆ ತನಿಖೆಗೆ ವಹಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top