fbpx
ಸಮಾಚಾರ

ಮಂಡ್ಯದ ಸ್ವಾಭಿಮಾನಿ ಜನತೆಗೆ ರಾಕ್ ಲೈನ್ ನೀಡಿದ ಉಡುಗೊರೆ.

ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಸುಮಲತಾ ಮೊನ್ನೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಸಾಧಕರ ಸೀಟ್ ನಲ್ಲಿ ಕುಳಿತಿದ್ದರು. ಈ ವೇಳೆ ಮಂಡ್ಯ ಚುನಾವಣಾ ಸಮಯದಲ್ಲಿ ತಮ್ಮ ಬೆನ್ನಿಗೆ ನಿಂತಿದ್ದ ರಾಕ್ ಲೈನ್ ವೆಂಕಟೇಶ್ ಮಂಡ್ಯ ಜನರಿಗೆ ವಿಶೇಷ ಉಡುಗೊರೆ ಘೋಷಿಸಿದ್ದಾರೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತಾ ಸಾಧಕರ ಖುರ್ಚಿಯಲ್ಲಿದ್ದಾಗ ಅತಿಥಿಯಾಗಿ ರಾಕ್‌ ಲೈನ್ ಆಗಮಿಸಿದ್ದರು. ಈ ವೇಳೆ ಮಂಡ್ಯ ಜನರ ಬಗ್ಗೆ ಮಾತನಾಡಿದ ವೆಂಕಟೇಶ್ ತಮ್ಮ ಮಂಡ್ಯ ಅಭಿಮಾನಿಗಳ ಪ್ರೀತಿಗೆ ಋಣಿಯಾಗಿ ತಮ್ಮ ಪ್ರತಿ ಸಿನಿಮಾದಲ್ಲಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

‘ರಾಕ್‌ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬರುವ ಪ್ರತಿಯೊಂದು ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನರ ಅಶೀರ್ವಾದದೊಂದಿಗೆ ಎಂದು ಹೇಳುವ ಮೂಲಕವೇ ಸಿನಿಮಾ ಆರಂಭವಾಗುತ್ತದೆ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top