fbpx
ಸಮಾಚಾರ

ಆಸ್ಟ್ರೇಲಿಯಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಚಿನ್ ತೆಂಡೂಲ್ಕರ್.

ತಮ್ಮೊಂದಿಗೆ ವಿಶೇಷ ಪರವಾನಿಗಿ ಒಪ್ಪಂದ ಮಾಡಿಕೊಂಡು ಸುಮಾರು 3 ದಶಲಕ್ಷ ಅಮೇರಿಕನ್ ಡಾಲರ್ ಪಾವತಿಸಲು ವಿಫಲವಾಗಿರುವ ಆಸ್ಟ್ರೇಲಿಯ ಮೂಲದ ಬ್ಯಾಟ್ ತಯಾರಿಕಾ ಕಂಪನಿ ವಿರುದ್ಧ ಸಚಿನ್ ತೆಂಡೂಲ್ಕರ್ ಮೊಕದ್ದಮೆ ಹೂಡಿದ್ದಾರೆ. ಫೆಡರಲ್ ಸರ್ಕ್ಯೂಟ್ ಕೋರ್ಟ್ ನಲ್ಲಿ ಈ ಮೊಕದ್ದಮೆಯನ್ನು ಹೂಡಿದ್ದಾರೆ.

ಆಸ್ಟ್ರೇಲಿಯಾ ಬ್ಯಾಟ್ ತಯಾರಿಕಾ ಸಂಸ್ಥೆಯಾಗಿರುವ ‘ಸ್ಪಾರ್ಟಾನ್ ಸ್ಪೋರ್ಟ್ಸ್’ ಹಾಗೂ ಸಚಿನ್ ನಡುವೆ ಒಪ್ಪಂದವಾಗಿದ್ದು ಆ ಒಪ್ಪಂದದ ಪ್ರಕಾರ ಸಂಸ್ಥೆಯ ಉತ್ಪನ್ನಗಳನ್ನು ಮಾರಾಟ ಮಾಡಲು ತಮ್ಮ ಹೆಸರು, ಭಾವಚಿತ್ರ,ಗಳನ್ನು ಬಳಸಿಕೊಳ್ಲಲು ಸಚಿನ್ ಅನುಮತಿ ನೀಡಿದ್ದರು.

ಈ ಒಪ್ಪಂದದಂತೆ ಸಂಸ್ಥೆಯ ಉತ್ಪನ್ನಗಳಾದ ಬಟ್ಟೆಗಳು, ಬ್ಯಾಟ್ ನ ಮೇಲೆ ವಿಶಿಷ್ಟವಾದ ಲೋಗೊಗಳನ್ನು ಮುದ್ರಿಸಿದೆ. ಜುಲೈ 2016 ರಲ್ಲಿ ಈ ಒಪ್ಪಂದವಾಗಿದ್ದು ಪ್ರತಿ ವರ್ಷ ಸಚಿನ್ ಗೆ 1 ಮಿಲಿಯನ್ ಅಮೆರಿಕನ್ ಡಾಲರ್ ಪಾವತಿಸುತ್ತೇನೆ ಎಂದು ಒಪ್ಪಂದವಾಗಿತ್ತು.

ಆದರೆ ಸಚಿನ್ ಅವರಿಗೆ ಸಂಸ್ಥೆ ಯಾವ ಹಣವನ್ನೂ ಪಾವತಿಸಿಲ್ಲ.ಒಪ್ಪಂದದ ತರುವಾಯ ಸುಮಾರು 2 ಮಿಲಿಯನ್ ಅಮೆರಿಕನ್ ಡಾಲರ್ ಗೆ ಹೆಚ್ಚು ಹಣ ಸಂದಾಯವಾಗಬೇಕಿದೆ ಎಂದು ಸಚಿನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top