fbpx
ಸಮಾಚಾರ

ಸ್ಯಾಂಡಲ್‍ವುಡ್ ನಟನಿಂದ ಪತ್ನಿಯ ಮೇಲೆ ಹಲ್ಲೆ- ಜೈಲು ಪಾಲು.

ಸ್ಯಾಂಡಲ್​ವುಡ್​ ನಟನಿಂದ ಲವ್​ ಸೆಕ್ಸ್​ ದೋಖಾ ನಡೆದಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಎರಡನೇ ಪತ್ನಿಯನ್ನು ಈ ನಟ ಹತ್ಯೆ ಮಾಡಲು ಮುಂದಾಗಿದ್ದು ಕೊಲೆ ಮಾಡೋಕೆ ಯತ್ನಿಸಿದ ಆರೋಪದಲ್ಲಿ ಸ್ಯಾಂಡಲ್‍ವುಡ್ ನಟ ಜೈಲು ಸೇರಿದ್ದಾನೆ.

‘ಅರುಣ್’ ಚಿತ್ರದ ನಾಯಕ‌ ಶಬರೀಶ್ ಶೆಟ್ಟಿ ಬಂಧಿತ ಆರೋಪಿ. ಈ ಮೊದಲೇ ವಿವಾಹವಾಗಿದ್ದ ಶಬರೀಶ್ ಸುಳ್ಳು ಹೇಳಿ ಖಾಸಗಿ ಸಂಸ್ಥೆಯ ನೌಕರೆ ಪದ್ಮಶ್ರೀ ಎಂಬುವವರನ್ನು ವಿವಾಹವಾಗಿದ್ದ. ಶಬರೀಶ್ ಮೊದಲ ಮದುವೆಯ ವಿಚಾರ ತಿಳಿಯುತ್ತಿದ್ದಂತೆ ಅವನಿಂದ ಪದ್ಮಶ್ರೀ ಅಂತರ ಕಾಯ್ದುಕೊಂಡಿದ್ದರು.

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಶಬರೀಶ್ ಮತ್ತು ಪತ್ನಿ ಪದ್ಮಶ್ರೀ ನಡುವೆ ಗಲಾಟೆಗಳು ಶುರುವಾಗಿತ್ತು. ಬುಧವಾರ ರಾತ್ರಿ ಐವರು ಸ್ನೇಹಿತರೊಂದಿಗೆ ಭಟ್ಟರಹಳ್ಳಿಯ ಮನೆಗೆ ಬಂದ ಶಬರೀಶ್, ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಸ್ನೇಹಿತರ ಸಹಾಯದಿಂದ ಪತ್ನಿಯ ಕೈ ಕಾಲು ಕಟ್ಟಿ, ಇಂಜೆಕ್ಷನ್ ನೀಡುವುದಕ್ಕೆ ಮುಂದಾಗಿದ್ದಾನೆ. ಇದೇ ವೇಳೆ ಪದ್ಮಶ್ರೀ ಸ್ನೇಹಿತ ಮನೆಗೆ ಬಂದು ಈ ದೃಶ್ಯವನ್ನು ನೋಡಿ ಕೆಆರ್ ಪುರ ಪೊಲೀಸರಿಗೆ ವಿಚಾರ ತಿಳಿಸಿದ್ದಾನೆ.

ಪ್ರಜ್ಞೆ ಕಳೆದುಕೊಂಡಿದ್ದ ಪದ್ಮಶ್ರೀ ಅವರನ್ನು ಕಾರಿಗೆ ಹತ್ತಿಸಿಕೊಳ್ಳುವ ಹೊತ್ತಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಶಬರೀಶ್‌ ಮತ್ತು ನವೀನ್‌ನನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top