fbpx
ಸಮಾಚಾರ

ಅಭಿಮಾನಿಗಳಿಗೆ ಶಾಕಿಂಗ್ -ಚಿಕಿತ್ಸೆಗಾಗಿ ಲಂಡನ್‌ಗೆ ಹೋಗಲಿರುವ ನಟ ಶಿವರಾಜ್‌ಕುಮಾರ್.

ಸ್ಯಾಂಡಲ್‌ವುಡ್ ನಟ, ಶಿವರಾಜ್‌ಕುಮಾರ್ ಅವರು ಸದ್ಯದಲ್ಲೇ ತಮ್ಮ ಬಲಭುಜದ ನೋವಿನ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಲಿದೆ. ಬಲಭುಜದಲ್ಲಿ ನೋವು ಕಾಣಿಸಿಕೊಂಡಿದ್ದರಿಂದಾಗಿ ಮುಂದಿನ ತಿಂಗಳು, ಅಂದರೆ ಜುಲೈ 10 ರಂದು ನಟ ಶಿವರಾಜ್‌ಕುಮಾರ್ ಅವರು ಲಂಡನ್‌ಗೆ ತೆರಳಲಿದ್ದು ಅಲ್ಲಿ, ಭುಜದ ನೋವಿನ ಹಿನ್ನೆಲೆಯಲ್ಲಿ ಆಪರೇ‍ಷನ್‌ಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಹಾಗೂ ಬಾಲಿವುಡ್ ನಟ ಶಾರುಖ್‌ ಖಾನ್ ಅವರಿಗೆ ಈ ಮೊದಲು ಲಂಡನ್‌ನಲ್ಲಿ ಟ್ರೀಟ್ಮೆಂಟ್ ಮಾಡಿದ್ದ ವೈದ್ಯರೇ ನಟ ಶಿವಣ್ಣ ಅವರನ್ನು ಟ್ರೀಟ್ ಮಾಡಲಿದ್ದಾರಂತೆ.

ಅಭಿಮಾನಿಗಳಿಗೆ ನಿರಾಸೆ:
ಇನ್ನು ಸುಮಾರು ಮೂರು ದಶಕಗಳಿಂದ ನಟ ಶಿವರಾಜಕುಮಾರ್‌ ಕೂಡ ತಮ್ಮ ಬರ್ತ್‌ಡೇಯನ್ನು ಅಭಿಮಾನಿಗಳ ಸಮ್ಮುಖದಲ್ಲೇ ಆಚರಿಸಿಕೊಂಡು ಈ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಅದ್ಧೂರಿ ಅಲ್ಲದಿದ್ದರೂ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸರಳವಾಗಿ ಹುಟ್ಟುಹಬ್ಬ ಆಚರಿಸಿದ್ದೂ ಇದೆ. ಆದರೆ ಈ ಬಾರಿ ಮಾತ್ರ ಈ ಸಂಪ್ರದಾಯ ಸ್ವಲ್ಪ ಬದಲಾಗುವ ಸಾಧ್ಯತೆ ಇದೆ

ಜುಲೈ 12 ರಂದು ಶಿವರಾಜ್ ಕುಮಾರ್ ಅವರ 57ನೇ ವರ್ಷದ ಹುಟ್ಟುಹಬ್ಬವಿದೆ. ಈ ಬಾರಿ ಶಿವಣ್ಣ ಹುಟ್ಟು ಹಬ್ಬ ಆಚರಿಸಲು ಅವಕಾಶ ಸಿಗದ ಕಾರಣ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಒಂದು ತಿಂಗಳು ಲಂಡನ್‌ನಲ್ಲೇ ಇದ್ದು ಚಿಕಿತ್ಸೆ ಪಡೆದ ಬಳಿಕ ತವರಿಗೆ ಮರಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top