fbpx
ಸಮಾಚಾರ

ಅಗಲಿದ ಗೆಳೆಯ ಧ್ರುವನಿಗೆ ಗೆಲುವು ಅರ್ಪಿಸಿದ ಸುದೀಪ್- ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಕಿಚ್ಚನ ಕಮಾಲ್

ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ನಟ, ಕಿಚ್ಚ ಸುದೀಪ್ ನೇತೃತ್ವದ ವಿಷನೇರ್ ತಂಡ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 12 ತಂಡಗಳನ್ನೊಳಗೊಂಡಿರುವ ಕಾರ್ಪೋರೇಟ್ ಲೀಗ್ ಟೂರ್ನಿಯಲ್ಲಿ ಸುದೀಪ್ ನಾಯಕತ್ವದ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

 

 

ಈ ಸಂದರ್ಭದಲ್ಲಿ ಗೆಳೆಯನನ್ನ ಸುದೀಪ್ ನೆನಪಿಸಿಕೊಂಡಿದ್ದು, ಅಗಲಿದ ಗೆಳೆಯ ಧ್ರುವ ಅವರಿಗೆ ಗೆಲುವು ಅರ್ಪಿಸಿದ್ದಾರೆ. “ನಮ್ಮ ಈ ಗೆಲುವನ್ನು ಕೆಲವು ತಿಂಗಳುಗಳ ಹಿಂದೆ ತೀರಿಕೊಂಡ ಗೆಳೆಯ, ಸಹ ಆಟಗಾರ ಧ್ರುವನಿಗೆ ಅರ್ಪಿಸಿದ್ದೇವೆ” ಎಂದು ಸುದೀಪ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್​, ನಾವು ಮತ್ತೆ ವಿಜಯಶಾಲಿಗಳಾದೆವು. 12 ತಂಡಗಳಿರುವ ಕಾರ್ಪೊರೇಟ್​ ಲೀಗ್​ ಒಂದು ವೈಭವಯುತವಾದ ಟೂರ್ನಿಯಾಗಿದ್ದು, ಇದರಲ್ಲಿ ನಾವು ಭಾಗವಹಿಸಿದ್ದು, ತುಂಬಾ ಖುಷಿ ನೀಡಿದೆ. ಈ ಬಾರಿಯೂ ಟ್ರೋಫಿಯನ್ನು ನಮ್ಮ ವಿಷನೇರ್​ ತಂಡ ಗೆದ್ದಿದೆ. ನಮಗೆ ಮತ್ತೊಮ್ಮೆ ಸ್ವಾಗತ ಕೋರಿ, ಒಳ್ಳೆಯ ಸತ್ಕಾರ ನೀಡಿದ ಲಾರ್ಡ್ಸ್​ ಆಡಳಿತ ಮಂಡಳಿಗೆ ಧನ್ಯವಾದಗಳು. ಕಳೆದ ಬಾರಿ ನಮ್ಮೊಂದಿಗೆ ತಂಡದಲ್ಲಿದ್ದು, ಈಗ ನಮ್ಮನ್ನು ಅಗಲಿರುವ ಧ್ರುವನಿಗೆ ಈ ಟ್ರೋಫಿಯನ್ನು ಅರ್ಪಿಸುತ್ತಿದ್ದೇನೆ ಎಂದು ಸುದೀಪ್​ ಬರೆದುಕೊಂಡಿದ್ದಾರೆ.

ಕಳೆದ ವರ್ಷ ವೈಯಕ್ತಿಕ ಕಾರಣಗಳಿಂದ ಧ್ರುವ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಈ ಗೆಲುವನ್ನು ಸುದೀಪ್, ಧ್ರುವನಿಗೆ ಅರ್ಪಿಸಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ ಧ್ರುವ ಅವರು ಸುದೀಪ್ ರೊಂದಿಗೆ ಪಂದ್ಯದಲ್ಲಿ ಭಾಗಿಯಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top